Breaking News

ಕರ್ನಾಟಕ ರತ್ನ – ದಿ,ಪುನೀತ್ ರಾಜಕುಮಾರ ಅವರಿಗೆ ಶೂಲೇಭಾವಿ ಗ್ರಾಮದಲ್ಲಿ ಭಾವಪೂರ್ಣ ಸ್ವರ ಶ್ರದ್ದಾಂಜಲಿ ಕಾರ್ಯಕ್ರಮ

ಅಮೀನಗಡ : ಕರ್ನಾಟಕ ರತ್ನ ,ಕನ್ನಡದ ಕಂದ, ಯುವರತ್ನ,ದಿ, ಪುನೀತ್ ರಾಜಕುಮಾರ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ಹಾನಿಯಾಗಿದೆ ,ಇವರ ಒಂದು ಚಲನಚಿತ್ರ ಸೇಟ್ ಏರಿದರೆ ಅಲ್ಲಿ ಸಾವಿರಾರು ಕಲಾವಿದರು ಬದುಕುತ್ತಿದ್ದರು,ಅವರ ನಟನೆಗೆ ಅವರ ಚಿತ್ರಕ್ಕೆ ಭಾರಿ ಬೇಡಿಕೆ ಇತ್ತು,ಇಂಥಹ ಒಬ್ಬ ನಟ ಅಕಾಲಿಕ ಮರಣದಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ ಸುಮಾರು ೪೬ ಚಲನಚಿತ್ರದಲ್ಲಿ ನಟನೆ ಮಾಡಿದ್ದರು. ಇಂತಹ ಒಬ್ಬ ಯುವ ನಟನನ್ನು ಕಳೆದುಕೊಂಡಿದ್ದು ಅಭಿಮಾನಿಗಳಿಗೆ ತುಂಬಾ ನೋವಾಗಿದೆ,ಕೆಲವು ಅಭಿಮಾನಿಗಳು ತಮ್ಮ ಪ್ರಾಣವನ್ನೆ ಕಳೆದುಕೊಂಡರು,

ಇಂತಹ ಅಪರೂಪದ ಮಾಣಿಕ್ಯ ನಮ್ಮ ಪವರ್ ಸ್ಟಾರ್ ದಿ,ಪುನೀತ್ ರವರ ಸ್ಮರಣಾರ್ಥ ಇಂದು ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಒಬ್ಬ ನಿಜವಾದ ಕಲಾವಿದನಿಗೆ ಇಡೀ ನಾಡು ಕಂಬನಿ ಮಿಡಿದಿದೆ,ಅವರ ಕುಟುಂಬಕ್ಕೆ ,ಅಭಿಮಟನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಾರತೀಯ ಜನತಾ ಪಕ್ಷದ ತಾಲೂಕು OBC ಘಟಕದ ಅಧ್ಯಕ್ಷ ನಾಗೇಶ ಗಂಜಿಹಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂಧರ್ಭದಲ್ಲಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿ ಕಲಬುರಗಿ ಅವರು ಪುನೀತ್ ಅವರ ಬಗ್ಗೆ ಎಷ್ಟು ಮಾತನಾಡಿದರು,ವರ್ಣನೆ ಮಾಡಿದರು ಸಾಲದು,ಅವರು ಕಾಲವಾದಾಗ ಸುಮಾರು ಒಂದುವರೆ ಗಂಟೆ ನಾನು ಟಿವ್ಹಿ ಬಿಟ್ಟು ಎದ್ದೆಳಲಿಲ್ಲ ಅಂತಹ ಒಬ್ಬ ಯುವ ನಟ ಮತ್ತೊಮ್ಮೆ ಹುಟ್ಟಲು ಸಾಧ್ಯವಿಲ್ಲ ಅಂತಹ ಮರಿಯದ ಯುವ ರತ್ನ ಅವರು ಅವನ ಸಮಾಜ ಸೇವೆ ಈ ನಾಡಿಗೆ ಇಂದಿನ ಯುವ ಜನತೆಗೆ ಮಾದರಿ ಎಂದರು. ಈ ಕಾರ್ಯಕ್ರಮದಲ್ಲಿ ಗ್ರಾಂ,ಪ,ಅಧ್ಯಕ್ಷ ಶ್ರೀಮತಿ ಗ್ಯಾನವ್ವ ಮಾದರ,

ಶ್ರೀ ಗದಗಯ್ಯ ನಂಜಯ್ಯನಮಠ , ಶ್ರೀಮತಿ ಶಾಂತಾದೇವಿ ನಾಯಕ ,ಜ್ಯೋತಿ ಪೂಜಾರ,ಅಮರೇಶ ಸಜ್ಜನ ,ಮಹಾಂತೇಶ ಭದ್ರಣ್ಣವರ,ದೇವರಾಜ ಕಮತಗಿ,ಹನಮಂತ ಮಿಣಜಗಿ,ಗ್ಯಾನಪ್ಪ ಗೋನಾಳ,ಆನಂದ ಫರಾಳದ,ನಾಗರಾಜ ಕಲಬುರ್ಗಿ,ನಾಗೇಂದ್ರಸಾ ನೀರಂಜನ,ಪ್ರವೀಣ ಸಾರಂಗಮಠ,ಯಮನಪ್ಪ ಘಂಟಿ,ಶಂಕ್ರಪ್ಪ ಜನಿವಾರದ,

ನರೇಂದ್ರ ಮಿಣಜಗಿ, ಮತ್ತಿತರು ಉಪಸ್ಥಿತಿ ಇದ್ದರು,ಹಾಗೂ ಶ್ರೀ ಮಾನು ಹೋಸಮನಿ,ಶ್ರೀ ನಾರಾಯಣ ಹುನಶಾಳ,ಶ್ರೀಹರಿ ಧೂಪದ,ಶ್ರಿ ಗದಗಯ್ಯ ನಂಜಯ್ಯನಮಠ,ಕುಮಾರಿ ಮಧು ಬೇಟಗೇರಿ,ಶಂಕರ್ ಕತ್ತಿ ,ಅನೀಲ ಬಳ್ಳಾರಾಘು ಧೂಪದ, ಶಿವಾನಮದ ಗುಳೇದಗುಡ್ಡ,ಹಲವಾರು ಗಾಯಕರು ತಮ್ಮ ಗಾಯನ ಮೂಲಕ ನುಡಿ ನಮನ ಸಂಗೀತ ಗಾಯನ ಸಲ್ಲಿಸಿದರು,

ಈ ಕಾರ್ಯಕ್ರಮದ ಆಯೋಜಕರಿಗೆ ಅಮೀನಗಡ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಅವರ ಸುಪುತ್ರ ಡಾ: ಪ್ರಶಾಂತ ನಾಯಕ ಅವರು 5000, ಸಾವಿರ ರೂಪಾಯಿ ದೇಣಿಗೆ ನೀಡಿದರು.

About vijay_shankar

Check Also

ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಮೇಶ ವಾಯ್ ಭಜಂತ್ರಿ.

ಶ್ರೀ ರಮೇಶ ಯಲ್ಲಪ್ಪ ಭಜಂತ್ರಿ ಜಿಲ್ಲಾ ಸಮಿತಿ ಸದಸ್ಯರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಅಧ್ಯಕ್ಷರು/ ಸಂಸ್ಥಾಪಕರು, ಪ್ರೀತಮ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.