ಕಮತಗಿ : ಕಳೆದ SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ನಗರದ ಪಟ್ಟಣ ಪಂಚಾಯತಿ ಸದಸ್ಯರಾದ ಶ್ರೀಮತಿ ನಂದಾ ಲಕ್ಚ್ಮಣ್ಣ ದ್ಯಾಮಣ್ಣನವರ ದಂಪತಿಗಳು ತಮ್ಮ ವಾರ್ಡ ೮ ರಲ್ಲಿ ಇಂದು ಸಾಯಂಕಾಲ ಎಲ್ಲಾ ವಿಧ್ಯಾರ್ಥಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಪ್ರಮಾಣಪತ್ರ ನೀಡುವ ಮೂಲಕ ಪ್ರೋತ್ಸಾಹ ನೀಡಿದರು.

ಈ ವಿಶೇಷ ಸನ್ಮಾನ ಸಮಾರಂಭದಲ್ಲಿ ಬಾಗಲಕೋಟೆ ನಗರದ DCC ಬ್ಯಾಂಕ್ ಉಪಾಧ್ಯಕ್ಷ ಶ್ರೀ ಮುರಗೇಶ ಕಡ್ಲಿಮಟ್ಟಿ ಅವರು ಶಶಿಗೆ ನೀರು ಉನಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಇಂತಹ ಕಾರ್ಯಕ್ರಮ ಮೂಲಕ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಸತ್ಕರಿಸುವುದು ತುಂಬಾ ಶ್ಲಾಘನೀಯ, ಹಾಗೆ ವಿಧ್ಯಾರ್ಥಿಗಳು ಇದೆ ರೀತಿ ಮುಂದೆನೂ ಕೂಡ ಉತ್ತಮ ಫಲಿತಾಂಶ ಪಡೆದು ಉನ್ನತ ಉದ್ದೆಗಳಿಗೆ ಹೋಗಬೇಕು ಇದರಿಂದ ಗ್ರಾಮದ ಕೀರ್ತಿ ಹೆಚ್ಚುತ್ತದೆ, ಕಠಿಣ ಪರಿಶ್ರಮದಿಂದ ವಿಧ್ಯಾರ್ಥಿಗಳು ಓದಿ ತಂದೆ, ತಾಯಿ, ಹಿರಿಮೆಯನ್ನು ಹೆಚ್ಚಿಸಬೇಕು ಎಂದರು.

ಕಾಂಗ್ರೆಸ್ ಪಕ್ಷದ ಯುವ ನಾಯಕ ಲಕ್ಷಣ್ಣ ಅವರು ತಮ್ಮ ಶ್ರೀಮತಿ ನಂದಾ ಅವರ ಜೊತೆಗೆ ಗ್ರಾಮದ ಅನೇಕ ವಿಧ್ಯಾರ್ಥಿಗಳಿಗೆ ಈ ರೀತಿಯ ಪ್ರೋತ್ಸಾಹ ಹಾಗೂ ಅಭಿನಂದನೆ ಕಾರ್ಯಕ್ರಮ ಮೂಲಕ ವಿಧ್ಯಾರ್ಥಿಗಳಿಗೆ ಧೈರ್ಯ ಹಾಗೂ ಉಮ್ಮಸ್ಸುನ್ನು ಈ ಕಾರ್ಯಕ್ರಮದ ಮೂಲಕ ಲಕ್ಷ್ಮಣ್ಣ ಅವರು ತುಂಬಿದ್ದಾರೆ, ವಿಧ್ಯಾರ್ಥಿ ಗಳು ,ಇನ್ನೂ ಹೆಚ್ವು ಹೆಚ್ವ ಅಂಕ ಪಡೆದು ಗ್ರಾಮದ ಕೀರ್ತಿ ಹೆಚ್ಚಿಸಬೇಕು ಎಂದು ರಾಜು ಕುಂಬಳಾವತಿ ಅವರು ಹೇಳಿದರು.

ಈ ಸರಳ ಸಮಾರಂಭದಲ್ಲಿ ಶ್ರೀ ಮುರಗೇಶ ಕಡ್ಲಿಮಟ್ಟಿ, ಶ್ರೀ ರಾಜು ಕುಂಬಳಾವತಿ ಶ್ರೀ ನಾಗೇಶ ಹುಲ್ಲೂರು, ಶ್ರೀ ರಮೇಶ ಜಮಖಂಡಿ ,ಶ್ರೀ ನಭಿ ತಹಶಿಲ್ದಾರರ, ಶ್ರೀ ಚಂದು ಕುರಿ, ಶ್ರೀ ರಮೇಶ ಪಿ ಲಮಾನಿ, ಶ್ರೀ ನಾಗೇಶ ಮುರನಾಳ ,ಶ್ರೀ ಮನ್ನಿಕಟ್ಟಿ ಸರ್ ಶ್ರೀ ನಾಗಪ್ಪ ಬಾಗೇವಾಡಿ ಶ್ರೀ ಮಹಾಂತೇಶ ಬ್ಯಾಳಿ, ಶ್ರೀ ಹುಚ್ಚಪ್ಪ ಸಿಂಹಾಸನ ಶ್ರೀ ಲಕ್ಷ್ಮಣ್ಣ ಮಾದರ, ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು
