
ಅಮೀನಗಡ: ವಿಶ್ವ ಯೋಗ ದಿನದ ಅಂಗವಾಗಿ ನಿರಂತರ ಐದು ದಿನಗಳಿಂದ ಗ್ರಾಮದ ಸರಕಾರಿ ಪ್ರೌಡಶಾಲೆ ಆವರಣದಲ್ಲಿ ಬೆಳಗಿನ ಜಾವ ವೀರ ಸಾರ್ವಕರ ಯುವ ಸೇನೆಯಿಂದ ಈ ಯೋಗ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಯೋಗಪಟು ಶ್ರೀ ಸಂಗಮೇಶ ಘಂಟಿ ಅವರು ಈ ಯೋಗ ಶಿಬಿರವನ್ನು ನಡೆಸುತ್ತಿದ್ದರು. ಇಂದು ಬೆಳಗ್ಗೆ ಈ ಯೋಗ ಶಿಬಿರದ ಮುಕ್ತಾಯ ಸರಳ ಸಮಾರಂಭವನ್ನು ಉದ್ಯಮಿ ಶ್ರೀ ಕೃಷ್ಣಾ ರಾಮದುರ್ಗ ಅವರು ವೀರ ಸಾರ್ವಕರ ಅವರ ಭಾವ ಚಿತ್ರಕ್ಕೆ ಪುಪ್ಪುಗಳನ್ನು ಅರ್ಪಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ

ಮಾತನಾಡಿದ ಅವರು ಓಂ ಅಕ್ಚರದ ನಾಮ ದಿಂದ ನಮ್ಮ ಮನಸ್ಸು,ಜ್ಞಾನ, ಶಾಂತಿಯನ್ನು ಸಂಪಾದಿಸಬಹು,ಪ್ರತಿ ದಿನ ಯೋಗವನ್ನು ಯಾರು ಕಲಿಯುತ್ತಾರೊ ಅವರು ಯಾವತ್ತು ಯಾವ ಕಾಯಿಲೆಗೂ ತುತ್ತಾಗಲಾರರು,ನಮ್ಮ ಗ್ರಾಮದ ಯುವಕ ಸಂಗಮೇಶ ಘಂಟಿ ಇವ ನಲ್ಲಿ ಇಂತಹ ಯೋಗ ಕಲೆ ನೋಡಿ ನಮಗೂ ತುಂಬಾ ಖುಷಿಯಾಯಿತು,ಇದರ ಸದುಪ ಯೋಗವನ್ನು ನಾವು ಪಡೆಯೋಣ ಎಂದರು.

ಹುನಗುಂದ ತಾಲೂಕಿನ ಭಾರತೀಯ ಜನತಾ ಪಾರ್ಟಿ ಓಬಿಸಿ ಘಟಕದ ಅಧ್ಯಕ್ಷ ನಾಗೇಶ ಗಂಜಿಹಾಳ ಈ ಯೋಗ ಶಿಬಿರವನ್ನು ನಾವು ವೀರ ಸಾರ್ವಕರ ಯುವಸೇನೆಯಿಂದ ಕಳೆದ ೮ ವರ್ಷಗಳಿಂದ ಇಲ್ಲಿ ಪ್ರತಿ ವರ್ಷ ನಮ್ಮ ಸಂಘಟಕರು ಆಯೋಜನೆ ಮಾಡುತ್ತಿದ್ದು ಈ ವರ್ಷ ಐದು ದಿನ ನಿರಂತರ ಈ ಯೋಗ ಶಿಬಿರಕ್ಕೆ ನಡೆಸಿದ್ದೇವೆ ಇದಕೆ ತಾವೆಲ್ಲರೂ ಬಂದು ಯಶಸ್ವಿ ಗೋಳಿಸಿದ್ದಿರಿ ಇನ್ನುಮುಂದೆ ಪ್ರತಿ ರವಿವಾರ ಈ ಸರಕಾರಿ ಶಾಲಾ ಮೈದಾನದಲ್ಲಿ ಬೆಳಗ್ಗೆ ೫:೩೦ ರಿಂದ ಯೋಗವನ್ನು ನಮ್ಮ ಗ್ರಾಮದ ಯುವಕ ಸಂಗಮೇಶ ಅವರು ಉಚಿತವಾಗಿ ಕೆಲವು ಯೋಗಾಸನದ ಆರೋಗ್ಯದ ಗುಟ್ಟನ್ನು ಹೇಳಿ ಕೊಡಲಿದ್ದಾರೆ,ತಾವೆಲ್ಲರೂ ಪ್ರತಿ ರವಿವಾರ ಬಂದು ಈ ಯೋಗ ಶಿಬಿರದಲ್ಲಿ ಭಾವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಯೋಗಪಟು ಸಂಗಮೇಶ ಅವರಿಗೆ ಸಂಘಟಕರು ಹಾಗೂ ಗ್ರಾಮಸ್ಥರು ,ಶಾಲಾ ವಿದ್ಯಾರ್ಥಿಗಳು ಸೇರಿ ಹೂವಿನ ಮಳೆಗೈದು ಗೌರವ ಸನ್ಮಾನ ಮಾಡಿದರು. ಈ ಯೋಗ ಶಿಬಿರದ ಮುಕ್ತಾಯ ಸರಳ ಸಮಾರಂಭದಲ್ಲಿ ಅಥಿತಿಗಳಾಗಿ ಕೃಷ್ಣಾ ರಾಮದುರ್ಗ,ಮಾಜಿ ಗ್ರಾಂ,ಪ,ಸದಸ್ಯರಾದ ಇಬ್ರಾಹಿಂ ಮಾಗಿ,ಗಾಯಕ ಮಾನು ಹೊಸಮನಿ, ಶಿಕ್ಷಕರಾದ ಮಹಾದೇವ ಬಸರಕೋಡ, ಉಪಸ್ಥಿತಿ ಇದ್ದರು, ವೀರ ಸಾರ್ವಕರ ಯುವಸೇನೆ ಸಂಘಟಕರಾದ ಶ್ರೀ ನಾಗೇಶ ಗಂಜಿಹಾಳ,ಗ್ಯಾನಪ್ಪ ಗೋನಾಳ,ರಾಮಚಂದ್ರ ನೆಮದಿ,ರಮೇಶ ಮಡಿವಾಳರ,ನೀಲಪ್ಪ ಪೂಜಾರಿ, ಯಮನೂರ ಹುಲ್ಯಾಳ, ಆನಂದ ಮೊಕಾಶಿ, ಹನಮಂತ ಸರಘಂಟಿ, ಶ್ರೀಧರ ನಿರಂಜನ, ಮುರಳಿಧರ ಮಾಂಡ್ರೆ, ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.