ಬಾಗಲಕೇಟೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಂದು ಜಿಲ್ಲಾ ಗೃಹ ರಕ್ಷಕದಳ ಬಾಗಲಕೋಟೆ ಇವರಿಂದ ಗೃಹ ರಕ್ಷಕರಿಗೆ ಮಾನಸಿಕ ಆರೋಗ್ಯಕರ ಅರಿವು ಕಾರ್ಯಕ್ರಮ ನೇರವೇರಿತು, ಸಾರ್ವಜನಿಕ ರಂಗದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲಿಸ್ ಇಲಾಖೆಯೊಂದಿಗೆ ತಾವು ಹಗಲು – ರಾತ್ರಿ ಕರ್ತವ್ಯ ಮಾಡಬೇಕಾಗುತ್ತದೆ.


ಸಮಾಜದಲ್ಲಿ ತಮ್ಮ ಪ್ರಾಮಾಣಿಕ ಸೇವೆ ಅನನ್ಯ ಅದರ ಜೋತೆಗೆ ತಾವು ನಿತ್ಯ ವ್ಯಾಯಾಮ, ಯೋಗ, ಧ್ಯಾನ, ಹಾಗೂ ಉತ್ತಮ ಆಹಾರ ಸೇವನೆ ಮಾಡಿ ಯಾವುದೇ ದುಷ್ಟ ಚಟಗಳಿಗೆ ಬಲಿಯಾಗದೆ,ಯಾವುದೇ ಒತ್ತಡ ತಂದುಕೊಳ್ಳದೆ,ಆರೋಗ್ಯಕರ ಜೀವನವನ್ನು ತಾವು ಕಾಪಾಡಿಕೊಂಡು ಉತ್ತಮ ಕೆಸಲ ಮಾಡಬೇಕು. ,ಸಾರ್ವಜನಿಕ ರಂಗದಲ್ಲಿ ಸಿಸ್ತು ಹಾಗೂ ದಕ್ಷತೆಯಿಂದ ಕೆಲಸ ಮಾಡುವಾಗ ಒತ್ತಡಗಳು ಸಹಜ,ಅವುಗಳನ್ನು ತಾವು ಸಮಾದಾನದಿಂದ ಮೇಲಾಧಿಕಾರಿಗಳೊಂದಿಗೆ,ಚರ್ಚಿಸಿ,ಯಾವುದೆ ಸಮಸ್ಯ ಇದ್ದರೂ ಪರಿಹಾರ ಕಂಡುಕೊಳ್ಳಬೇಕೆಂದು ಜಿಲ್ಲಾ ಕಮಾಂಡೆಂಟ್ DYSP ಪ್ರಶಾಂತ ಮುನವಳ್ಳಿ ಅವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಮುಖ್ಯ ಅಥಿತಿಸ್ಥಾನ ವಹಿಸಿ ಮಾತನಾಡಿದಶ್ರೀ ಎ,ಎಲ್,ಸಾಹುಕಾರ್ ಜಿಲ್ಲಾ Instructor ಬಾಗಲಕೋಟೆ ಇವರು ಜಿಲ್ಲೆಯಲ್ಲಿ ಈ ಸಮಾಜದ ಶಾಂತಿ ಹಾಗೂ ಕಾನೂನು ಉಲ್ಲಂಘನೆ ಆಗದಂತೆ ತಾವೆಲ್ಲರೂ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿ ಇಲಾಖೆಯ ಹೆಸರು ತರಬೇಕು ಎಂದರು,ನಂತರ ಮಾತನಾಡಿದ ಮಾನಸಿಕ ತಜ್ಞರರಾದ ಡಾ : ಪಶುಪತಿ ಜಂಗಿನ ಅವರು ಮಾತನಾಡಿ ತಾವು ಈ ಪೋಲಿಸ್ ಹಾಗೂ ಗೃಹರಕ್ಷಕರು ತಮ್ಮಿಬ್ಬರ ಮಧ್ಯ ಉತ್ತಮ ಬಾಂಧವ್ಯ ಇರಬೇಕು ಎಂದರೆ ತಾವು ಮೊದಲು ಆರೋಗ್ಯವಂತರಾಗಿ,,ಮಾನಸ್ಸಿಕವಾಗಿ ಮೊದಲು ಸಧೃಢವಾಗಿ ಇರಬೇಕು,ತಾವು ತಮ್ಮ ಮನೆಯ ವಯಕ್ತಿಕ ಕೌಟಂಬಿಕ ತೊಂದರೆಗಳನ್ನು ಇಟ್ಟುಕೊಂಡು ಮಾನಸಿಕವಾಗಿ ಕೆಲಸ ಮಾಡಬೇಡಿ, ಏನೆ ತೊಂದರೆ ಇದ್ದರೆ ಅವುಗಳನ್ನು ತಮ್ಮ ಆತ್ಮೀಯರೊಂದಿಗೆ ಹಂಚಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದರು. ಅದರಂತೆ ಶ್ರೀ ಮಹಾಂತೇಶ,ಪಾಟೀಲ ಜಿಲ್ಲಾ ಸಮಾಲೋಚಕರು, ರಮೇಶ,ಹಾಗೂ ಸಲಿಂ,ಹೊಸಮನಿ, ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತಿ ಇದ್ದರು. ಈ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಸುಮಾರು ೨೭೦ ಕ್ಕೂ ಹೆಚ್ಚು ಜನ ಗೃಹರಕ್ಷಕರು ಹಾಗೂ ಯುನಿಟ್ ಆಫೀಸರ್ ಭಾಗವಹಿಸಿದ್ದರು.


