ಕೊಪ್ಪಳ:ಆ28, ಜಿಲ್ಲೆಯ ಕುಷ್ಟಗಿ ತಹಶಿಲ್ದಾರ ಗುರುಬಸ್ಯಾನ ವಿರುದ್ಧ ನೊಂದ ಮಹಿಳೆ ದೂರು ದಾಖಲಿಸಿದ್ದಾರೆ,
ಮೊನ್ನೆ ವೈರಲ್ ಆಗಿತ್ತು ಸಿಸಿಟಿವಿ ದೃಶ್ಯ,
ಕಾಮುಕ ತಹಶಿಲ್ದಾರ ಗುರುಬಸ್ಯಾ ಕಛೇರಿ ಮಹಿಳಾ ಸಿಬ್ಬಂದಿಗೆ ಕಿಸ್ಸ್ ಕೊಟ್ಟ ಪ್ರಕರಣ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿವೆ.

ಈ ಗುರುಬಸ್ಯಾನ ಕಾಟ ಹೇಗಿತ್ತು ಗೊತ್ತೆ..?
ತನ್ನ ಕಛೇರಿಯ ಮಹಿಳಾ ಸಿಬ್ಬಂದಿಗೆ ಪ್ರತಿ ದಿನಾಲು ಪೋನ್ ಕರೆ ಮಾಡಿ ಅವಾಚ್ಯ ಶಬ್ದಗಳನ್ನು ಬಳಸಿ ಟಾರ್ಚರ್ ಕೊಡುತ್ತಿದ್ದನಂತೆ ಈ ಹಲ್ಕಟ್ ಗುರುಬಸ್ಯಾ, 2018 ಸೆಪ್ಟೆಂಬರ್ ನಲ್ಲಿ ಕೊಪ್ಪಳದಿಂದ ಕುಷ್ಟಗಿಗೆ ತಹಶಿಲ್ದಾರಾಗಿ ವರ್ಗಾವಣೆಯಾಗಿ ಬಂದಾಗಿನಿಂದ ನಿರಂತರ ಕಿರುಕುಳ ಕೊಡುತ್ತಿದ್ದ ತಹಶಿಲ್ದಾರ ಗುರು ಬಸ್ಯಾ, ಇತನ ಕಿಟಲೆಗೆ ಬೆಸತ್ತು ರೊಸಿ ಹೊಗಿದ್ದಳು ಮಹಿಳಾ ಸಿಬ್ಬಂದಿ, ಇತ್ತ ಸರ್ಕಾರಿ ಸ್ವಾಮ್ಯದ ಉನ್ನತ ಅಧಿಕಾರಿ ಕಾಟ, ಅತ್ತ ಕುಟುಂಬ ನಿರ್ವಹಣೆ, ಮನೆಯಲ್ಲಿ ಹೇಳಲಾರದೆ ನೊಂದು ಹೊಗಿದ್ದಳು ನೊಂದ ಮಹಿಳಾ ಗ್ರಾಮ ಲೆಕ್ಕಾಧಿಕಾರಿ, ಮೊನ್ನೆ ವಿಡಿಯೋ ವೈರಲ್ ಆಗುತ್ತಿದಂತೆ ವಿಷಯ ಗೊತ್ತಾದ ಮೇಲೆ ನಿನ್ನೆಯ ದಿನ ಕುಷ್ಟಗಿ ಪೋಲಿಸ್ ಠಾಣೆಗೆ ಬಂದು ಆಗಿನ ಕುಷ್ಟಗಿ ತಾಲ್ಲೂಕಿನ ತಹಶಿಲ್ದಾರ ಗುರುಬಸವರಾಜನ ಮೇಲೆ 354,354ಬಿ, 516 ಐಪಿಸಿ ಕಲಂ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಕುಷ್ಟಗಿ ಕಾಸಿನಾಥ..!
ವಿಡಿಯೋ ವೈರಲ್ ಆಗುತ್ತಿದಂತೆ ಕುಷ್ಟಗಿ ತಾಲ್ಲೂಕಿನ ಜನತೆ ಇತನಿಗೆ ಚಿತ್ರನಟ ದಿ. ಕಾಸಿನಾಥನನ್ನು ಹೋಲಿಕೆ ಮಾಡುತ್ತಿದ್ದಾರೆ, ಚಪಲಚನ್ನಿಗರಾಯ, ಅನಂತನ ಅವತಾರ, ಲವ್ ಮಾಡಿ ನೋಡು, ಹೆಂಡತಿ ಎಂದರೆ ಹೀಗಿರಬೇಕು, ಲವ್ ಟ್ರೈನಿಂಗ್, ಅನುಭವ, ಹೀಗೆ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿದ ದಿಗ್ಗಜ ನಟ ನಿರ್ಮಾಪಕ ನಿರ್ದೇಶಕ ದಿ, ಕಾಸಿನಾಥರ ಸಿನಿಮಾ ನೋಡಿ ಇನ್ಸ್ಪೈರಾಗಿ ಇತರ ಮಾಡಿದ್ದಾನೆ, ಇವ ಥೇಟ್ ಕಾಸಿನಾಥನ ತರನೆ ನಟನೆ ಮಾಡ್ತಿದ್ನಂತೆ, ಎಂದು ಕುಷ್ಟಗಿ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ,
ಕ್ರಮಕ್ಕೆ ಆಗ್ರಹ..!
ಏನೆ ಇರಲಿ ಸರ್ಕಾರಿ ಕರ್ತವ್ಯ ನಿರ್ವಹಣೆ ಮಾಡುವ ಅನೇಕ ಮಹಿಳಾ ಸಿಬ್ಬಂದಿಗಳಿಗೆ ಇತರ ಮಾನಸಿಕ ದೈಹಿಕ ಕಿರುಕುಳ ನೀಡುವ ಇಂತಹ ನೀಚ ಕಾಮುಕರಿಗೆ ಇದೊಂದು ಎಚ್ಚರಿಕೆ ಘಂಟೆಯಾಗಬೇಕು ಆತರ, ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿ ಒತ್ತಾಯಿಸುತ್ತಿದ್ದಾರೆ..! ವರದಿ ; ಎಸ್,ಎಚ್ ಮೂಧೊಳ