ಕಾರಟಗಿ : ಕಾರಟಗಿ ಸಮೀಪದ ಸಿದ್ದಾಪುರ ಗ್ರಾಮದ ಪತ್ರಿಕೆಯೊಂದರ ವರದಿಗಾರನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ವ್ಯೆಕ್ತಿಯನ್ನು ಕೂಡಲೇ ಬಂಧಿಸುವಂತೆ ಕಾರ್ಯನಿರತ ಪತ್ರಕರ್ತರ ಸಂಘದ ಕಾರಟಗಿ ತಾಲೂಕಾ ಘಟಕದಿಂದ ಮನವಿ ಸಲ್ಲಿಸಲಾಯಿತು. ಪಟ್ಟಣದ ಕನಕದಾಸ ವೃತ್ತದಲ್ಲಿ ಗುರುವಾರದಂದು ರಸ್ತೆ ತಡೆದು ಪ್ರತಿಭಟನೆ ಮಾಡುವುದರ ಮೂಲಕ ಕಾರಟಗಿ ಪಿಎಸ್‌ಐ ಅವಿನಾಶ್ ಕಾಂಬಳೆಗೆ ಮನವಿ ಸಲ್ಲಿಸಿದರು.
ಆಗಷ್ಟ್ ೩೧ ರ ಮೊಹರಂ ಹಬ್ಬದ ಗಲಾಟೆ ಕುರಿತು ಪತ್ರಿಕೆಯಲ್ಲಿ ವರದಿ ಮಾಡಿದ ಹಿನ್ನಲೆಯಲ್ಲಿ ಸಿದ್ದಾಪುರ ಗ್ರಾಮದ ವರದಿಗಾರ ಸಿದ್ದನಗೌಡ ಚನ್ನಬಸಪ್ಪ ಹೊಸಮನಿ ರವರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದು ,ಬೆಳಕಿಗೆ ಬಂದಿದೆ ಇದರಿಂದಾಗಿ ಪತ್ರಕರ್ತರು ಮಾನಸಿಕವಾಗಿ ಕುಗ್ಗಿದ್ದು , ಇವರಿಗೆ ನ್ಯಾಯ ನೀಡುವುದರ ಮೂಲಕ ಪತ್ರಿಕಾ ಅಭಿವ್ಯೆಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದ್ದು , ಈ ಕೂಡಲೇ ವ್ಯೆಕ್ತಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಪಿಎಸ್‌ಐ ಅವಿನಾಶ ಕಾಂಬಳೆ ಮಾತನಾಡಿ ಪತ್ರಿಕಾ ವರದಿಗಾರನ ಮೇಲೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯೆಕ್ತಿಯ ಮೇಲೆ ಸೈಬರ್ ಕ್ರೈಮ್ ಕಾನೂನಿನಡಿ, ಕ್ರಮ ಕೈಗೊಳ್ಳುವ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಉಮೇಶ ಮರ್ಲಾನಹಳ್ಳಿ , ಚಾಂದಸಿAಗ್ ರಜಪೂತ್, ದಿಗಂಬರ್ ಕುರ್ಡೇಕರ್, ಶರಣಪ್ಪ ಕೋಟ್ಯಾಳ,ಜಂಬುನಾಥಗೌಡ ಈಳಿಗನೂರು,ಸಿದ್ದನಗೌಡ ಹೊಸಮನಿ,ಸೋಮನಾಥ ಚಿಕ್ಕಡಂಕನಕಲ್,ಶರಣಪ್ಪ ಹೊನಗುಡಿ, ರಮೇಶ ತೊಂಡಿಹಾಳ,ಮAಜುನಾಥ್ ಉಂತಕಲ್,ನಾಗರಾಜ್ ಜೆ , ಶರಣಬಸವ ಹಾಲಸಮುದ್ರ , ರಾಜು ಇನ್ನಿತರರು ಇದ್ದರ.