ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರಕ್ಕೆ ಇಂದು ನೂತನ, PSI ಶ್ರೀ ಎಮ್,ಜಿ ಕುಲಕರ್ಣಿ ಅವರು ಇಂದು ಚಾಜ್೯ ತೆಗೆದುಕೊಂಡರು,
ಅಮೀನಗಡ ನಗರದ ಜನತೆಯ ಪರವಾಗಿ ನಗರದ ಅಂಜುಮನ್ ಇಸ್ಮಾಂ ಕಮೀಟಿ ಅಧ್ಯಕ್ಷರಾದ ಅಜ್ಮೀರ ಮುಲ್ಲಾ, ಅವರು ತಮ್ಮ ಸಮಾಜದ ಪರವಾಗಿ ಹಾರ್ದಿಕ ಸ್ವಾಗತ ಕೊರಿ ಸನ್ಮಾನಿಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿಂದಿನ ಪಿ,ಎಸ್ ಐ ,ಬಸವರಾಜ ತಿಪಾರೆಡ್ಡಿ ಸಾಹೇಬರು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದು ಖುಷಿ ತಂದಿದೆ,

ಹಾಗೆ ಅವರಿಗಿಂತ ಹೆಚ್ಚಿನ ಅನುಭವ ನಿಮಗೆ ಇದೆ ಹಾಗಾಗಿ ಸಾಧ್ಯವಾದಷ್ಟು ಉತ್ತಮ ಕೆಲಸ ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನಿಮ್ಮ ಹಾಗೂ ನಮ್ಮ ಸಹಕಾರ ಅವಶ್ಯವಾಗಿದೆ, ತಮ್ಮ ಕರ್ತವ್ಯ ಪಾಲನೆಗೆ ನಮ್ಮ ಸಮಾಜದಿಂದ ಎಲ್ಲಾ ರೀತಿಯ ಸಹಕಾರ ತಮಗಿದೆ ಎಂದು ಶುಭ ಕೋರಿದರು. ಈ ಸಂಧರ್ಭದಲ್ಲಿ ಸಮಾಜದ ಹಿರಿಯರಾದ ಹಾಸೀಮಪೀರಾ ಪೀರಜಾದೆ, ಅಹಮದ್ ಜಾಂಗೀರದಾರ, ಡಿ.ಪಿ. ಅತ್ತಾರ್, ದವಲಸಾಬ ಬಾಂಗಿ, ಪತ್ರಕರ್ತರಾದ ಮಹೇಬೂಬ ಪಿಂಜಾರ್ ಹಾಗೂ ಅಂಜುಮನ್ ಇಸ್ಲಾಂ ಕಮಿಟಿ ಸರ್ವ ಸದಸ್ಯರು ಉಪಸ್ಥಿತಿ ಇದ್ದರು. ವರದಿ : ಮುಸ್ತಾಪ್ ಮಾಸಾಪತಿ