ಮಡಿಕೇರಿ ಏ.22 : ಮುಸಲ್ಮಾನರಿಗೆ ರಂಜಾನ್ ವ್ರತಾಚರಣೆಯ ಪವಿತ್ರ ತಿಂಗಳು ಇದಾಗಿರುವುದರಿಂದ ಕೋವಿಡ್ ಮಾರ್ಗಸೂಚಿಯೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾಜದ ಬಂಧುಗಳು ಸರ್ಕಾರ ಹಾಗೂ ಜಿಲ್ಲಾಡಳಿತ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಬದ್ಧರಾಗಿದ್ದಾರೆ. ರಂಜಾನ್ ಮಾಸವಾದ ಕಾರಣ ಇದೊಂದು ವಿಶೇಷ ಸಂದರ್ಭವೆAದು ಪರಿಗಣಿಸಿ ಪ್ರಾರ್ಥನೆಗೆ ವಿನಾಯಿತಿ ನೀಡಬೇಕೆಂದು ಅವರು ಕೋರಿದ್ದಾರೆ.
ಮಸೀದಿಗಳಲ್ಲಿ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್ ಮತ್ತು ಮಾಸ್ಕ್ ಕಡ್ಡಾಯವಾಗಿ ಬಳಸುವುದು, ಪ್ರವೇಶಕ್ಕೂ ಮೊದಲು ಪರೀಕ್ಷೆಗೆ ಒಳಪಡಿಸುವುದು ಹಾಗೂ ಸಮಾಜದ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮಸೀದಿ ಆಡಳಿತ ಮಂಡಳಿಗಳು ಬದ್ಧವಾಗಿವೆ. ನಿಯಮ ಪಾಲನೆಯೊಂದಿಗೆ ಪ್ರಾರ್ಥನೆ ಸಲ್ಲಿಸಲು ಮುಸಲ್ಮಾನರು ಸಿದ್ಧರಿದ್ದು, ಸರ್ಕಾರ ವಿನಾಯಿತಿ ನೀಡುವ ಕುರಿತು ಪುನರ್ ಪರಿಶೀಲಿಸಬೇಕೆಂದು ಇಸಾಕ್ ಖಾನ್ ಮನವಿ ಮಾಡಿದ್ದಾರೆ.