
ಶ್ರೀ ಹುಚ್ಚುಸಾಬ ಇಮಾಮಸಾಬ ಬೂದಿಹಾಳ ನಿನ್ನೆಯ ದಿನ ೦೭/೦೫/೨೦೨೧ ರ ಶುಕ್ರವಾರ ತಮ್ಮನ ಸಾವಿನಿಂದ ಮನನೊಂದು ಕೆವಲ ಅರ್ಧ ಗಂಟೆಗಳ ಅಂತರದಲ್ಲಿ ಹೃದಯಾ ಆಘಾತದಿಂದ ಸಾವನ್ನಪ್ಪಿದ್ದಾರೆ , ಅಂಜುಮನ್ ಕಮಿಟಿ ಸದಸ್ಯರಾಗಿ ಮುಸ್ಲಿಂ ಧರ್ಮದ ಏಳಿಗೆಗೆ ಶ್ರಮಿಸಿದವರು ಸರಳ ಸಜ್ಜನಿಕೆಯ ಮೃದು ಸ್ವಭಾವದ ಹುಚ್ಚುಸಾಬ ಅವರು ತಮ್ಮನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಎಲ್ಲೆ ಹೋದರೂ ಅಣ್ಣ – ತಮ್ಮ ಜೊತೆಗೆ ಹೊಗುತ್ತಿದ್ದರು,ತಮ್ಮನ ಅಗಲಿಕೆಯಿಂದ ಮನ ನೊಂದು ಅಕಾಲಿಕ ಮರಣ ಹೊಂದಿದ ಹುಚ್ಚುಸಾಬ ಅವರ ಆತ್ಮಕ್ಕೆ ಅಂಜುಮನ್ ಇಸ್ಲಾಂ ಕಮಿಟಿ ಸಂತಾಪ ಸೂಚಿಸಿದೆ.ಮೃತರರಿಗೆ ೦೪ ಜನ ಗಂಡು ಮಕ್ಕಳು ೦೩ಜನ ಹೆಣ್ಣು ಮಕ್ಕಳು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಶ್ರೀ ರಾಜೇಸಾಬ ಇಮಾಮಸಾಬ ಬೂದಿಹಾಳ ನಿನ್ನೆಯ ದಿನ ೦೭/೦೫/೨೦೨೧ ರ ಶುಕ್ರವಾರ ಅನಾರೋಗ್ಯದಿಂದ ಮೃತರಾದರು, ಇವರ ಅಕಾಲಿಕ ಮರಣಕ್ಕೆ ಅಂಜುಮನ್ ಇಸ್ಲಾಂ ಕಮಿಟಿ ಸಂತಾಪ ಸೂಚಿಸಿದೆ.ಮೃತರರಿಗೆ ೦೨ಜನ ಗಂಡು ಮಕ್ಕಳು ೦೪ ಜನ ಹೆಣ್ಣು ಮಕ್ಕಳು ಅಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.ಒಂದೇ ದಿನ ಅಣ್ಣ- ತಮ್ಮ ಇಬ್ಬರ ಅಕಾಲಿಕ ಮರಣದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿಯ ಕಾರ್ಯದರ್ಶಿ ರೈಮನಸಾಬ ದೊಡಮನಿ ಅವರು ಸಂತಾಪ ಸೂಚಿಸಿದರು. ಇಂದು ಇಬ್ಬರ ಅಂತ್ಯಕ್ರಿಯೆ ಬೆಳಗಿನಜಾವ ೭:೩೦ ರ ಸುಮಾರಿಗೆ ವಿಧಿವಿಧಾನಗಳ ಮೂಲಕ ಒಂದೆ ಸಮಯದಲ್ಲಿ ಇಬ್ಬರ ಸಹೋದರ ಅಂತ್ಯಕ್ರಿಯೆ ನಡೆಯಿತು.