
ಶ್ರೀ ಚನ್ನಬಸವ ಲಕ್ಕಿಹಾಳ : ಅಧ್ಯಕ್ಷರು ಜನಪದ ಕಲಾ ಪರಿಷತ್ ಹುನಗುಂದ

ಅಮೀನಗಡ. :
ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ ಹಾಗೂ ಟ್ರನಿಂಗ್ ಪಾಯಿಂಟ್ ಇಲ್ಲಿಂದ ಪ್ರಾರಂಭವಾಗಿ ಈ ದೇಶದ ದೊಡ್ಡ ಸಂಪತ್ತಾಗಿ ಮಕ್ಕಳು ತಮ್ಮ ಕಲಿಕಾ ಶಿಕ್ಷಣದ ಜೊತೆಗೆ ಮಾನವೀಯತೆ ಮೌಲ್ಯಗಳನ್ನು ಬೆಳಸಿಕೊಂಡು ಕಲಿತ ಶಿಕ್ಷಣ ಸಂಸ್ಥೆಗೆ ಹಾಗೂ
ಗುರುಗಳಿಗೆ ಹೆಸರು ತರುವಂತಹ ಅಮೂಲ್ಯವಾದ ರತ್ನಗಳು ನಿವಾಗಾಬೇಕು ಇದಕ್ಕೆ ನಾನು ಇತ್ತಿಚ್ವಿಗೆ ನಡೆದ ಒಂದು ದೃಷ್ಟಾಂತವನ್ನು ನೀಡಿ ಅವಳಂತೆ ಸಾಧನೆ ಮಾಡಬೇಕೆಂದು ಸೂಳೇಭಾವಿಯ ರಾಣಿ ಚನ್ನಮ ವಸತಿ ಶಾಕೆಯ ವಾರ್ಷಿಕೋತ್ಸವ ಸಮಾರಂಭರದ ಮುಖ್ಯ ಅಥಿತಿಗಳಾಗಿ ಚನ್ನಬಸಪ್ಪ ಲಕ್ಕಿಹಾಳ ,ತಾ: ಅಧ್ಯಕ್ಷರು ಜನಪದ ಪರಿಷ್ಯತ್ ಇವರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿಸರು.

ನಿರೂಪಣೆ : ಶ್ರೀಮತಿ ಪೂರ್ಣಿಮಾ /ಶ್ರೀಮತಿ ಶಾಹೀದಾಬೇಗಂ ನದಾಫ್,,,,,,,,,,,

ಕಳೆದ ವರ್ಷಕಿಂತೆ ಈ ವರ್ಷ ಮಕ್ಕಳು ನೂರಕ್ಕೆ ನೂರರಷ್ಟು ಉತ್ತಮ ಫಲಿತಾಂಶ ತರಬೇಕು ,ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣದ ಗಣಮಟ್ಟಕ್ಕಾಗಿ ಈ ವಸತಿ ಶಾಲೆಗಳಗೆ ಸಾಕಷ್ಟು ಸೌಲಭ್ಯಗಳನ್ನು ತಮಗೆ ನೀಡಿದೆ, ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಂಡು ಈ ದೇಶದ ಉತ್ತಮ ಪ್ರಜೆಗಳಾಗಿ ಬೆಳಗಬೇಕು

ಹಾಗೆ ಮಕ್ಕಳ ಶಿಕ್ಷಣ ಹಾಗೂ ಅವರ ಬದಲಾವಣೆ ಬಗ್ಗೆ ಪಾಲಕರು ಆಗ ಆಗ ಗಮನಿಸಿ ಮಕ್ಕಳ ಬಗ್ಗೆ ಶಿಕ್ಷಕರ ಹತ್ತಿರ ವಿಚಾರಣೆ ಮಾಡಿ ಸೂಕ್ತ ಸಲಹೆ ನೀಡಬೇಕು ಎಂದು ಅಥಿಗಳಾಗಿ ಆಗಮಿಸಿದ ಶ್ರೀ ಎಮ್,ಎಚ್ ಹಡಪದ ಗುರುಗಳು ವಿಧ್ಯಾರ್ಥಿಗಳಿಗೆ/ ಪಾಲಕರಿಗೆ ಸಲಹೆ ನೀಡಿದರು.

ಇತ್ತಿಚ್ಚಿಗೆ ಈ ವಸತಿ ಶಾಲೆಯ ಪ್ರಾಂಶುಪಾಲರಾಗಿ ಬಂದ ಶ್ರೀ ವಿಜಯಕುಮಾರ್ ಬಿರಾದರ್ ಅವರು ಮಕ್ಕಳನ್ನು ಉದ್ದೇಶಿಸಿ ಸಮಯದ ಅಭಾವದಿಂದ ಎರಡೇ ಮಾತಲ್ಲಿ ಹೇಳುವುದಾದರೆ ಮಕ್ಕಳ ಉತ್ತಮ ಪಠ್ಯೇತರ ಚಟುವಟಿಕೆಗಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನಾವು ಅವರಿಗೆ ಉತ್ತಮ ಅವಕಾಶ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಇಲ್ಲಿ ಇದೆ, ಹೀಗಾಗಿ ಮಕ್ಕಳು ಈ ಸಮಾಜದ ಆಸ್ತಿ, ಈ ಉತ್ತಮ ಪರಿಸರದಲ್ಲಿ ತಾವು ಚನ್ನಾಗಿ ಓದಿ ಸೋಲಿರಲಿ,ಗೆಲುವು ಇರ್ಲಿ ಎಲ್ಲದರಲ್ಲಿ ತಾವು ಭಾಗವಹಿಸಿಸುವ ಪ್ರಯತ್ನ ಮಾಡಬೇಕು,

ಏನೇ ಸಂದೇಹವಿದ್ದಲ್ಲಿ ಕೇಳಬೇಕು ,ನಿಮ್ಮ ಉತ್ತಮ ಸಾಧನೆಯಿಂದ ಈ ವಸತಿ ಶಾಲೆ ,ಈ ಗ್ರಾಮ, ತಾಲ್ಲೂಕು, ಜಿಲ್ಲೆ ಅಷ್ಟೇ ಅಲ್ಲ ಈ ನಾಡು ಮೆಚ್ಚುವಂತಹ ಸಾಧನೆ ನೀವು ಮಾಡಬೇಕೆಂದು ಕರೆ ಕೊಟ್ಟರು.

ಈ ವಾರ್ಷಿಕೋತ್ಸವ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಮುಖ್ಯ ಅಥಿಗಳಾದ ಶ್ರೀ ಚನ್ನಬಸವ ಲಕ್ಕಿಹಾಳ ಹಾಗೂ ಅಥಿತಿಗಳಾದ ಶ್ರೀ ಎಮ್, ಎಚ್ ಹಡಪದ ಸರ್ , ಹಾಗೂ ಈ ವಸತಿ ಶಾಲೆಯ ಮುಖ್ಯಗುರುಗಾಳಾದ ಶ್ರೀ ವಿಜಯಕುಮಾರ ಬಿರಾದರ್ ಇವರೀರ್ವರೂ ಸೇರಿ ಕಾರ್ಯಕ್ರಮ ಉದ್ಘಾಟನೆ ಮಾಡಿ ,ಉಪಸ್ಥಿತಿ ವಹಿಸಿದ್ದರು.
ಮಕ್ಕಳು ಅನೇಕ ಶಾಲಾ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅನೇಕ ಸ್ಪರ್ಧಾತ್ಮಕ ಚಟುವಟಿಕೆಗಳಾದ ಚಿತ್ರಕಲಾ ವಿಭಾಗ, ಸ್ಪೂಟ್ಸ್, ಕಲಾ ವಿಭಾಗ, ಉತ್ತಮ ಅಂಕ ಪಡೆದ ವಿವಿಧ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಹಾಗೂ ಕಫ್ ನೀಡಿ ಸನ್ಮಾಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ನೂರಾರು ಮಕ್ಕಳು ಪ್ರಶಸ್ತಿ ಪಡೆದು ಸಂಭ್ರಮಿಸಿದರು.

ಮಕ್ಕಳ ಸಾಧನೆ ನೋಡಿ ಪಾಲಕರು, ಕೆಲವು ಜನ ಖುಷಿ ಪಟ್ಟು ಸಂಭ್ರಮಿಸಿದರೆ ಕೆಲವು ತಾಯಿಂದಿರು ಮಕ್ಕಳ ಸಾಧನೆ ನೀಡಿ ಸಂತೋಷದ ಕಣ್ಣಿರು ಹಾಕಿ ಸಂಭ್ರಮಿಸಿದರು,
ಬಾಗಲಕೋಟೆ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ, ವಿಜಯಶಂಕರ್, ಹಾಗೂ ಅರ್ಚಕರಾದ ಶ್ರೀ ಮಹಾಂತಯ್ಯ ಹಿರೇಮಠ, ಶ್ರೀ ಸುಭಾಸ ರಾಠೋಡ, ಹಾಗೂ ರಮೇಶ ಲಮಾಣಿ ಸೇರಿದಂತೆ ಅನೇಕ ಪಾಲಕರು ಈ ವಸತಿ ಶಾಲೆಯ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಮಕ್ಕಳ ಈ ಸಾಧನೆಗೆ ಕಾರಣಿ ಭೂತರಾದ ಈ ವಸತಿ ಶಾಲೆಯ ಎಲ್ಲಾ ಗುರುಗಳಿಗೆ / ಗುರುಮಾತೆಯರಿಗೆ ಈ ಪತ್ರಿಕಾ ಮಾದ್ಯಮದ ಮೂಲಕ ಅಭಿನಂದನೆ ಹೇಳಿದರು.

ಈ ಕಾರ್ಯಕ್ರಮ ನಿರೂಪಣೆಯನ್ನು ಶ್ರೀಮತಿ ಪೂರ್ಣಿಮಾ ಕಟ್ಟಿಮನಿ ಹಾಗೂ ಶ್ರೀಮತಿ ಶಾಹೀದಾಬೇಗಂ ನದಾಫ್ ಅವರು ನಿರೂಪಿಸಿದರು. ವಂದನಾರ್ಪರ್ಣೆಯನ್ನು ಶಿಕ್ಷಕರಾದ ಶ್ರೀ ವಿರೇಶ ಕೆಲೂರು ಅವರು ವಂದಿಸಿದರು.