ಅಮೀನಗಡ: ಬೇಕಾಬಿಟ್ಟಿಯಾಗಿ ಓಡಾಡುವ ವಾಹನ ಸವಾರರಿಗೆ ಇಂದು ಬೆಳಗ್ಗಿನಿಂದ ಹುನಗುಂದ ತಾಲೂಕಿನ ಅಮೀನಗಡ ಪೊಲೀಸ್ ಠಾಣೆಯ ಮುಂದೆ ಅನಾವಶ್ಯಕವಾಗಿ ತಿರುಗಾಡುವ ವಾಹನಗಳ ತಪಾಸಣೆಯನ್ನು ಪಿ,ಎಸ್,ಐ ಶ್ರೀ ಎಮ್ ಜೆ ಕುಲಕರ್ಣಿ ಅವರು ಮಾಡಿದರು, ಬೈಕ್, ಕಾರ್, ಇತರೆ ಗುಡ್ಸ್ ವಾಹನಗಳ ತಪಾಸಣೆ ಮಾಡಿ ಕೆಲವು ವಾಹನಗಳ ಸವಾರರಿಗೆ ದಂಡ ಹಾಗೂ ಬೈಕ್ ಸಿಜ್ ಮಾಡುವ ಮೂಲಕ ಖಡಕ್ ಎಚ್ಚರಿಕೆ ನೀಡಿದರು.
ಬೆಳಗ್ಗೆ ೬ ರಿಂದ ೧೦ ಗಂಟೆಯ ವರೆಗೆ ಸಾರ್ವಜನಿಕರು ಅಗತ್ಯ ವಸ್ತುಗಳ ಸಲುವಾಗಿ ಸಂಚಾರ ಮಾಡಬಹುದು ಹಾಗೂ ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಅಧಿಕೃತ ಗುರುತಿನ ಕಾಡ್೯ ಹಾಗೂ ಸ್ಪಷ್ಟವಾಗಿ ನೀಕರ ಕಾರಣ (ಆಸ್ಪತ್ರೆ) ಇದ್ದವರು ಸಂಚಾರ ಮಾಡಬಹುದು, ಅನಾವಶ್ಯಕ ಬೈಕ್ ತೆಗೆದುಕೊಂಡು ಕುಂಟು ನೆಪ ಹೇಳಿ ತಿರುಗಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸುವ ಕಾರ್ಯವನ್ನು PSI ಕುಲಕರ್ಣಿ ಅವರು ಹಾಗೂ ನಗರದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ ದಂಡ ಹಾಕುವ ಮೂಲಕ ಕೋವಿಡ್(೧೯) ನಿಯಮ ಪಾಲನೆ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸಿದರು.

ಅನಾವಶ್ಯಕ ವಾಹನಗಳು ತಿರುಗಾಡುವುದು ಕಡಿಮೆ ಆಗಿಲ್ಲ ಇದಕ್ಕೆ ಕಾರಣ ಬ್ಯಾಂಕ್ ಸೇವೆ ೧೦ರಿಂದ ೨ ಗಂಟೆಗೆ ಇದನೆ ನೆಪ ಮಾಡಿಕೊಂಡು ಕೆಲವರು ಸುಕಾ ಸುಮ್ಮನೆ ವಾಹನ ಸಂಚಾರ ಮಾಡುತ್ತಿದ್ದಾರೆ ಎಂದು ಕೆಲವರ ಅಭಿಪ್ರಾಯ, ಇದಕ್ಕೆ ತಕ್ಕ ಉತ್ತರ ನೀಡಲು ಅಮೀನಗಡ ಪೋಲಿಸ್ ಸಿಬ್ಬಂದಿ ಪಡೆ ನಗರವನ್ನು ಸುತ್ತು ವರೆದು ಅನಾವಶ್ಯಕ ವಾಹನ, ಅಂಗಡಿ ಮುಗ್ಗಟ್ಟು ಬಂದ್ ಮಾಡಿಸಿ ದಂಡ ಹಾಕುವ ಮೂಲಕ ಕಟ್ಟು ನಿಟ್ಟಿನ ಪಾಲನೆಗೆ ಎಚ್ಚರಿಕೆ ನೀಡುತ್ತಿದ್ದಾರೆ. ನಗರದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿ ಅನಾವಶ್ಯಕವಾಗಿ ಓಡಾಡುವ ಸಾರ್ವಜನಿಕರಿಗೆ ದಂಡ ಹಾಕಿ ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.