
ಅಮೀನಗಡ: ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಮೊಟ್ಟ ಮೊದಲ ಬಾರಿಗೆ (ಡಿಸ್ಟನ್ಸ್ ಎಜ್ಯುಕೇಶನ್) ಅಂದರೆ ಶಿಕ್ಷಣದಿಂದ ವಂಚಿತರಾಗಿ ತಮ್ಮ ಶಿಕ್ಷಣ ಪೂರ್ಣ ಗೊಳಿಸದೇ ಅಪೂರ್ಣವಾಗಿ ಮಾನಸಿಕವಾಗಿ ನೊಂದವರಿಗೆ ಇದೊಂದು ಸುವರ್ಣ ಅವಕಾಶ ಇಂತಹ ಅವಕಾಶವನ್ನು ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆ ಮೈಸೂರಿನ ಕರ್ನಾಟಕ ಮುಕ್ತ ವಿಧ್ಯಾಲಯ ( KOS) ಇದರ ಶಾಖೆಯನ್ನು ಬಡವರ ಬಂದು ರಾಜಕೀಯ ಹಿತ ಚಿಂತಕರು,ರಾಜಕೀಯ ಎಸಯುವ ನಾಯಕರಾದ ಸನ್ಮಾನ್ಯ ಶ್ರೀ ಬಸವಪ್ರಭು ಸರನಾಡಗೌಡ ಅವರು ಉದ್ಘಾಟನೆ ಮಾಡಿದರು.

ಡಾ: ಪ್ರಶಾಂತ ಅವರು ಒಬ್ಬ ಸಮಾಜ ಸೇವಕ ಕೇವಲ ಒಂದು ಚಹಾ ಅಂಗಡಿ ಮೂಲಕ ಇಂತಹ ಶಿಕ್ಣಣ ಸಂಸ್ಥೆಯನ್ನು ಕಟ್ಟಲು ಶ್ರಮ ವಹಿಸುತ್ತಿದ್ದಾರೆ,ಅವರ ಬಗ್ಗೆ ರಾಜ್ಯದ ಎಲ್ಲಾ ಟಿವಿ ಮಾಧ್ಯಮದಲ್ಲಿ ನೋಡಿ ಖುಷಿ ಆಯಿತು.ಅವರ ಈ ಸಾಹಸಕ್ಕೆ ಹಾಗೂ ಸಾಮಾಜಿಕ ಚಿಂತನೆಗೆ ನಾವು ತಲೆ ಬಾಗಬೇಕು, ಒಬ್ಬ ಸಾಮಾನ್ಯ ವರ್ಗದಲ್ಲಿ ಹುಟ್ಟಿ PHd ಮಾಡಿ ಲಕ್ಷಾಂತರ ರೂಪಾಯಿ ಖರ್ಚ ಮಾಡಿ ಕೋವಿಡ್ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಗೆ ೧೧ ಸಿಲಿಂಡರ್ ಆಕ್ಸಿಜನ್ ದಾನ ಮಾಡಿದ್ದರು, ಇವರ ಈ ನಡೆಯ ಜೊತೆಗೆ ಯಾವತ್ತು ನಾವು ಅವರ ಜೊತೆಗೆ ಇದ್ದೇವೆ ,ಅವರು ಪ್ರಾಮಾಣಿಕವಾಗಿ ಈ ಸಂಸ್ಥೆಯನ್ನು ಮುನ್ನಡೆಸಲಿ ಎಂದು ನಾಡಗೌಡರು ಈ ಸಂಸ್ಥೆಯು ಉತ್ತಮವಾಗಿ ಬೆಳವಣಿಗೆ ಆಗಲಿ ಎಂದು ಶುಭ ಕೋರಿದರು.

ಈ ಸಂದರ್ಭದಲ್ಲಿ ಶಿಕ್ಷಣ ವಂಚಿತರಿಗಾಗಿ ಶಿಕ್ಣ ಣ ಕೇಂದ್ರವನ್ನು ಅನಾವರಣ ಗೋಳಿಸಿ ಉದ್ಘಾಟನೆ ಮಾಡಿದ ರಾಜಕೀಯ ಯುವ ನಾಯಕ ಸನ್ಮಾನ್ಯ ಶ್ರೀ ಸಂತೋಷ ಹೊಕ್ರಾಣಿ ಅವರಿಗೆ ಡಾ: ಪ್ರಾಶಾಂತ ನಾಯಕ ಅವರು ಗೌರವ ಸನ್ಮಾನ ಮಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಡಾ: ಪ್ರಶಾಂತ ಅವರ ಬಗ್ಗೆ ಹಲವು ನಾಯಕರು ಮಾತನಾಡಿದ್ದನ್ನು ಕೇಳಿ ನಮಗೂ ಖುಷಿ – ಆಶ್ಚರ್ಯ ಆಯಿತು,PHD ಮಾಡಿ ರಸ್ತೆ ಬದಿ ಟೀ ಅಂಗಡಿ ಒಬ್ಬ ಸಾಮಾನ್ಯ ಯುವಕ ಇಂತಹ ಶಿಕ್ಷಣ ಸಂಸ್ಥೆ ಕಟ್ಟುವುದು ಸುಲಭವಲ್ಲ, ಅದರಲ್ಲಿ ಈ ಡಿಸ್ಟನ್ಸ್ ಎಜುಕೇಶನ್ ಬಹಳ ಜನರಿಗೆ ಇದು ಅನುಕೂಲ ಆಗಲಿದೆ,ವಿಶೇಷವಾಗಿ ಮಹಿಳೆಯರು ತಮ್ಮ ಶಿಕ್ಷಣ ಈ ಕೇಂದ್ರದ ಮೂಲಕ ಪೂರ್ತಿ ಮಾಡಬಹುದು ಎಂದರು. ಡಾ: ಪ್ರಶಾಂತ ಅವರ ಈ ಶಿಕ್ಷಣ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿ ಡಾ: ಪ್ರಶಾಂತ ಅವರ ಸಾಮಾಜಿಕ ಸೇವೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪ,ಪೂ,ಕುಮಾರ ಮಹಾರಾಜರು ನಮ್ಮ ಅಮೀನಗಡ ನಗರದಲ್ಲಿ ನಮ್ಮ ಬಂಜಾರ ಸಮಾಜದಲ್ಲಿ ಡಾ: ಪ್ರಶಾಂತ ನಾಯಕ ಅವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಕಾವೇರಿ ಅವರು ಕೂಡ PHD ಪದವಿ ಪಡೆದಿದ್ದಾರೆ. ಇದು ನಮ್ಮ ಬಂಜಾರ ಸಮಾಜಕ್ಕೆ ದೊಡ್ಡ ಗೌರವ ಯಾರು ಕೂಡ ಇಷ್ಟು ಶಿಕ್ಷಣ ಪಡೆದಿಲ್ಲ ತಾವು ಕಲಿತು ಇತರ ಬಡ ಮಕ್ಕಳಿಗೆ ಅನುಕೂಲ ಆಗಲಿ ಎಂದು ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿದ್ದು ನಮ್ಮ ಸಮಾಜದ ಕೀರ್ತಿ ಹೆಚ್ಚಿಸಿದ ಡಾ: ಪ್ರಶಾಂತ ಅವರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಆರ್ಶಿವದಿಸುತ್ತೇನೆ,ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಬಸವರಾಜ ಅಂಟರತಾನಿ, ವಿಜಯಪುರ ಜಿಲ್ಲಾ ಅಂಚೆ ಇಲಾಖೆ ಅಧಿಕ್ಷಕರಾದ ಶ್ರೀ ಶ್ರೀಕಾಂತ ಜಾದವ,ಹಾಗೂ ಶ್ರೀಮತಿ ಜಯಶ್ರೀ ಸಾಲಿಮಠ , ಅವರು ಡಾ: ಪ್ರಶಾಂತ ಅವರ ಸಾಮಾಜಿಕ ಕಳಕಳಿ ಬಗ್ಗೆ ಶ್ಲಾಘೀಸಿದರು. ಶ್ರೀ ಸಿದ್ದು ಭದ್ರಶಟ್ಟಿ ಅವರು ಕೂಡ ಇಂತಹ ಡಿಸ್ಟನ್ಸ್ ಎಜುಕೇಶನ್ ಶಿಕ್ಷಣ ಸಂಸ್ಥೆಯಲ್ಲಿ ಪರೀಕ್ಷೆ ಬರೆದು ಕಳೆದ ೭ ವರ್ಷಗಳಿಂದ ನಗರದ ಸಂಗಮೇಶ್ವರ ಕಾಲೇಜನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇನೆ,ಎಂದರು. ಈ ಸಂದರ್ಭದಲ್ಲಿ ಡಾ: ಪ್ರಶಾಂತ ಅವರು ಸಿದ್ದು ಅವರಿಗೆ ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಶ್ರೀ ಪ್ರವೀಣ ಎಸ್ ಪತ್ರಿ, ಹಾಗೂ ಶ್ರೀ ಎಮ್,ಎನ್,ವಂದಾಲ ಪ್ರಾಚ್ಚಾರ್ಯರು,ಶ್ರೀ ಎಮ್,ಡಿ,ಪಟಾನ್, ಶ್ರೀ ರೀಯಾಜ್, ಹುನಗುಂದ, ಶ್ರೀಮತಿ ಸೋನುಬಾಯಿ ಲಮಾನಿ, ಶ್ರೀಮತಿ ಶಂಕ್ರಮ್ಮ ಬೇನ್ನೂರು ಶ್ರೀ ಶಿವಕುಮಾರ ಜಾಲಿಹಾಳ, ಮುಂತಾದವರು ಉಪಸ್ಥಿತಿ ಇದ್ದರು , ಈ ಕಾರ್ಯಕ್ರಮದಲ್ಲಿ ಗಾಯಕರು ಮಾನು ಹೊಸಮನಿ, ಜೂನಿಯರ್ ಯಶ್, ಆನಂದ ರಾಂಪೂರು ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು,
