
ಗುಡೂರು: ಇಲಕಲ್ಲ ತಾಲೂಕಿನ ಗುಡೂರುsc ಗ್ರಾಮದ ಗ್ರಾಮ ಪಂಚಾಯತಿ ಆಡಳಿತ ಅಧಿಕಾರಿ ಬಸವರಾಜ ರೇವಡಿ ಅವರಿಗೆ ಇಂದು ಕರ್ನಾಟಕ ಪತ್ರಕರ್ತರ ಸಂಘದಿಂದ ಹಾಗೂ ಬಯಲು ಬಿರುಗಾಳಿ ಕನ್ನಡ ಪಾಕ್ಷಿಕ ಪತ್ರಿಕೆಯ ಸಹಯೋಗದಲ್ಲಿ ಸದರಿ ಅಭಿವೃದ್ಧಿ ಅಧಿಕಾರಿ ರೇವಡಿ ಅವರ ಕರ್ತವ್ಯ ಪಾಲನೆಯನ್ನು ಗುರುತಿಸಿ, ಪ್ರಸಕ್ತ ೨೦೧೪ರಿಂದ ಪಂಚಾಯತಿ ಕ್ಷೇತ್ರದಲ್ಲಿ ಗುರುಸಿಕೊಂಡವರು,ಅವರ ಸರಳತೆ ಹಾಗೂ ನೇರ ನುಡಿ ಮೂಲಕ ಎಲ್ಲಾ ಸದಸ್ಯರ ಹಾಗೂ ಸಾರ್ವಜನಿಕ ರಂಗದಲ್ಲಿ ಉತ್ತಮ ಸೇವೆ ಹಾಗೂ ಅಭಿವೃದ್ಧಿಯಿಂದ ಗುರುತಿಸಿಕೊಂಡ ಬಸವರಾಜ ಅವರಿಗೆ ಇಂದು ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಚಾಂದನಿ ಇಟಗಿ,ಉಪಾಧ್ಯಕ್ಷರಾದ ಹನಮಂತ ತೋಟ್ಲಪ್ಪನವರ, ಜಿಲ್ಲಾ ಕ,ಪ,ಸಂ,ಕಾರ್ಯದರ್ಶಿ ಶ್ರೀ ಹನಮಂತ ಹಿರೇಮನಿ, ಸೇರಿದಂತೆ ಕೆಲವು ಜನ ಗ್ರಾಮ ಪಂಚಾಯತಿ ಸದಸ್ಯರು ಸೇರಿ ಈ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿವರ್ಗ ಉಪಸ್ಥಿತಿ ಇದ್ದರು.
