Breaking News

ಕೊರೊನಾ ತವರು ಚೀನಾದ ಬೀಜಿಂಗ್‌ ಈಗ ಮಾಸ್ಕ್‌ ಮುಕ್ತ..! ಸತತ 13 ದಿನ ಹೊಸ ಕೇಸ್‌ ಇಲ್ಲ

ಚೀನಾದ ರಾಜಧಾನಿ ಬೀಜಿಂಗ್ ಮಾಸ್ಕ್‌ ಮುಕ್ತವಾಗಿದ್ದು, ಇನ್ಮೇಲೆ ಮಾಸ್ಕ್‌ ಇಲ್ಲದೆಯೂ ನಗರದಲ್ಲಿ ಹೊರಗಡೆ ಓಡಾಡಬಹುದು. ಸತತ 13 ದಿನ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್‌ ಮಾಸ್ಕ್‌ ಫ್ರೀ ಆಗಿದೆ.

ಬೀಜಿಂಗ್‌: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಇನ್ಮೇಲೆ ಮಾಸ್ಕ್‌ಇಲ್ಲದೆಯೂ ಹೊರಗಡೆ ಓಡಾಡಬಹುದು. ಹೌದು, ಸತತ 13 ದಿನ ಹೊಸ ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೊರಾಂಗಣದಲ್ಲಿ ಮಾಸ್ಕ್‌ ಧರಿಸುವ ನಿಯಮವನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಜಾರಿ ಮಾಡಿದ್ದ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ.

ಆರೋಗ್ಯ ಇಲಾಖೆ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರು ಬೀಜಿಂಗ್‌ನಲ್ಲಿ ಶುಕ್ರವಾರ ಹೆಚ್ಚಿನ ಜನ ಮಾಸ್ಕ್‌ ಧರಿಸಿರುವುದು ಕಂಡುಬಂದಿದೆ. ಮಾಸ್ಕ್‌ ನಮಗೆ ಸುರಕ್ಷಿತ ಭಾವ ತರಿಸುತ್ತದೆ ಎಂದು ಒಂದಿಷ್ಟು ಜನ ಹೇಳಿದರೆ, ಕೆಲ ಜನ ಸಾಮಾಜಿಕ ಒತ್ತಡಗಳು ಮಾಸ್ಕ್‌ ಧರಿಸಲು ಕಾರಣ ಎಂದು ತಿಳಿಸಿದರು.

ನಾನು ಯಾವಾಗ ಬೇಕಾದರೂ ನನ್ನ ಮಾಸ್ಕ್‌ ತೆಗೆಯಬಹುದೆಂದು ಯೋಚಿಸುತ್ತೇನೆ. ಆದರೆ, ಇತರರು ಅದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕಿದೆ. ನಾನು ಮಾಸ್ಕ್‌ ಧರಿಸಿಲ್ಲ ಎಂದರೆ ಜನ ನನ್ನ ನೋಡಿ ಭಯಬೀತರಾಗುತ್ತಾರೆ ಎಂಬ ಆತಂಕ ನನ್ನಲ್ಲಿದೆ ಎಂದು 24 ವರ್ಷದ ಮಹಿಳೆ ಕಾವೋ ಹೇಳಿದ್ದಾರೆ.

ಭಾರತಕ್ಕೆ ಎರಡನೇ ಕಂತಿನ 100 ವೆಂಟಿಲೇಟರ್ ರವಾನಿಸಿದ ಅಮೆರಿಕ: ಕೋವಿಡ್ ಹೋರಾಟಕ್ಕೆ ಸಾಥ್!

ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ರಾಜಧಾನಿಯಲ್ಲಿ ಮಾಸ್ಕ್‌ ಧರಿಸುವ ಬಗ್ಗೆ ಎರಡನೇ ಬಾರಿಗೆ ನಿರ್ಬಂಧಗಳನ್ನು ಸಡಿಲಗೊಳಿಸಿದ್ದಾರೆ. ಎರಡು ಸುತ್ತಿನ ಲಾಕ್‌ಡೌನ್‌ ನಂತರ ಬೀಜಿಂಗ್‌ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಬೀಜಿಂಗ್‌ನ ಮುನ್ಸಿಪಲ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮೊದಲು ಏಪ್ರಿಲ್ ಅಂತ್ಯದಲ್ಲಿ ನಿವಾಸಿಗಳು ಹೊರಾಂಗಣ ಪ್ರದೇಶಗಳಲ್ಲಿ ಮಾಸ್ಕ್‌ಗಳಿಲ್ಲದೇ ತೆರಳಬಹುದೆಂದು ಹೇಳಿತ್ತು.

ರಷ್ಯಾ ಬಳಿಕ ಕೊರೊನಾ ಲಸಿಕೆಗೆ ಅಸ್ತು ಎಂದ ಚೀನಾ: ಏನಿದು ಕ್ಯಾನ್ಸಿನೋ?

ಆದರೆ, ಜೂನ್‌ನಲ್ಲಿ ಬೀಜಿಂಗ್‌ನ ದೊಡ್ಡ ಸಗಟು ಮಾರುಕಟ್ಟೆಯಲ್ಲಿ ಕೊರೊನಾ ವೈರಸ್‌ ವೇಗವಾಗಿ ಹರಡಿದ ಹಿನ್ನೆಲೆ ನಿಯಮಗಳನ್ನು ತ್ವರಿತವಾಗಿ ಬದಲಾಯಿಸಲಾಯಿತು. ರಾಜಧಾನಿ, ಕ್ಸಿನ್‌ಜಿಯಾಂಗ್ ಮತ್ತು ಇತರೆಡೆಗಳಲ್ಲಿ ಕೊರೊನಾ ವೇಗವನ್ನು ಯಶಸ್ವಿಯಾಗಿ ನಿಯಂತ್ರಿಸಿದ ನಂತರ ಕಳೆದ ಐದು ದಿನಗಳಿಂದ ಚೀನಾದಲ್ಲಿ ಸ್ಥಳೀಯವಾಗಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.