
ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ಶೂಲೇಶ್ವರ ಶಿವ ದೇವಾಲಯದಲ್ಲಿ ಪ್ರಥಮ ಶ್ರಾಣನ ಮಾಸದ ನಿಮಿತ್ತವಾಗಿ ಬೆಳಗಿನಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಜರುಗಿದವು ಈ ಸಂದರ್ಭದಲ್ಲಿ ಶಿವ ದೇವಾಲಯದಲ್ಲಿ ಪುಷ್ಕರಣಿ ಹೊಂಡ ತುಂಬಿ ಹರಿಯುತ್ತಿರು ವುದರಿಂದ, ಬಾಗಲಕೋಟೆಯ ಭಾರತೀಯ ಜನತಾ ಪಾರ್ಟಿ ಪಕ್ಷದ ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿಮಸ್ತಾನ್ ಬದಾಮಿ ಅವರು ಭಾಗಿ ಅರ್ಪಣೆ ಮಾಡಿ ಪ್ರಸಾದ ವ್ಯವಸ್ಥೆ ಮಾಡಿಸಿ ಕೊಟ್ಟು ಭಾವೈಕ್ಯತೆ ಮೆರೆದರು. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಕಮತಗಿ ಕಾರ್ಯದರ್ಶಿ ಶ್ರೀ ಎಸ್,ಡಿ,ಭಜಂತ್ರಿ.

ಹಾಗೂ ಸಮಿತಿ ಸದಸ್ಯರು ಉಪಸ್ಥಿತಿ ಇದ್ದರು ಅರ್ಚಕರಾದ ಮಂಜುಸ್ವಾಮಿ ಮುಂಡಾಸ್ ಅವರಿಂದ ಗಂಗಾ ಪೂಜೆ ನೆರವೇರಿಸಿಸಲಾಯತು. ಮತ್ತು ಶಿವಲಿಂಗವನ್ನು ವಿಶೇಷವಾಗಿ ಭಸ್ಮದಿಂದ ಅಲಂಕಾರ ಮಾಡಿ ಭಕ್ತರ ವಿಶೇಷ ಗಮನ ಸೇಳೆದರು.
