Breaking News

ಕೆನರಾ ಬ್ಯಾಂಕ್ ಮ್ಯಾನೇಜರ್ ಯಮನಪ್ಪ ಆರ್ ಹಾಲವರ ಅವರಿಗೆ ಅತ್ಯುತ್ತಮ ಕರ್ತವ್ಯಪಾಲನೆ ರಾಜ್ಯ ಪ್ರಶಸ್ತಿ ಪ್ರಾದಾನ

ಅಮೀನಗಡ : ಕಳೆದ ಒಂದು ವರ್ಷಗಳಿಂದ ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾಗಿ ( ಮ್ಯಾನೇಜರ್) ಬಾಗಲಕೋಟೆ ನವನಗರದಿಂದ ಪ್ರೋಮೋಶನ್ ಹೊಂದಿ ಗ್ರಾಮಕ್ಕೆ ಬಂದ ಯಮನಪ್ಪ ಅವರು ಈ ಮೊದಲು ೨೪ ಕೋಟಿ ಸಿಂಡಿಕೇಟ್ ಬ್ಯಾಂಕ್ ವ್ಯವಹಾರ ನಡೆಸಿತ್ತು ಆದರೆ ಕೇವಲ ಒಂದೇ ವರ್ಷದಲ್ಲಿ ಗ್ರಾಮೀಣ ಮಟ್ಟದಲ್ಲಿ ಆ ವ್ಯವಹಾರವನ್ನು ೩೦ ಕೋಟಿ ರೂಪಾಯಿಗೆ ತಲುಪಿಸಿ ಅಮೀನಗಡ ಹಾಗೂ ಗುಡೂರು ಶಾಖೆ ವ್ಯವಹಾಕಿಂತ ಉತ್ತಮ ಕೆಲಸ ಮಾಡಿ ಸೈ ಎನ್ನಿಸಿಕೊಂಡರು ಮೇಲಾಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಯಿತು, ಇದರೊಂದಿಗೆ ಯಮನಪ್ಪ ಹಾಲವರ ಅವರು ಬರಿ ಬ್ಯಾಂಕ್ ವ್ಯವಹಾರ ಉನ್ನತೀಕರಿಸಲಿಲ್ಲ ಅದರೊಂದಿಗೆ ಗ್ರಾಮದಲ್ಲಿ ಅನೇಕ ಜನ ಬಡ ರೈತರಿಗೆ ವಿವಿಧ ಕೃಷಿ ಸಾಲ ,ಬೆಳೆ ಸಾಲ,ಕುರಿಸಾಲ,ಆಭರಣ ಸಾಲ, ನೀಡಿ ಅವರ ಬದುಕಿಗೆ ಆಶ್ರಯ ಕಲ್ಪಸಿದವರು,

ಸಕಾಲಕ್ಕೆ ಸಾಲ ನೀಡಿ ಬ್ಯಾಂಕ್ ವ್ಯವಹಾರದ ಉತ್ತಮ ಒಡನಾಟ ಹಾಗೂ ಸರಕಾರದ ಹತ್ತಾರು ಯೋಜನೆಯನ್ನು ಸಬ್ಸಿಡಿ ಸಹಿತ ಸಾಲಗಳ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಿ ತಮ್ಮ ಪ್ರಾಮಾಣಿಕತೆ ಮೆರೆದವರು, ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರೊಂದಿಗೆ ತಮ್ಮ ಉತ್ತಮ ನಡುವಳಿಗೆ ಹಾಗೂ ನಯವಿನಯದಿಂದ ಜನಮನ ಗೆದ್ದ ಯುವ ಬ್ಯಾಂಕ್ ಅಧಿಕಾರಿ ಬೆಳಗ್ಗೆ ಸರಿಯಾಗಿ ೮:೩೦ ರಿಂದ ೯ ಗಂಟೆಗೆ ಬ್ಯಾಂಕನಲ್ಲಿ ಬಂದು ರಾತ್ರಿ ೭:೩೦ ರ ವರೆಗೂ ಕೆಲಸ ಮಾಡಿ ಎಲ್ಲಾ ಬ್ಯಾಂಕ್ ಸಿಬ್ಬಂದಿಯೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡ ಯಮನಪ್ಪ ಹಾಲವರ ಅವರ ಈ ಪ್ರಾಮಾಣಿಕ ಸೇವೆ ಹಾಗೂ ಅವರ ಕರ್ತವ್ಯಪಾಲನೆ ಮೆಚ್ಚಿ ಬಾಗಲಕೋಟೆಯ ಕರ್ನಾಟಕ ಪತ್ರಕರ್ತರ ಸಂಘದಿಂದ ಪ್ರತಿವರ್ಷ ಕೊಡಮಾಡುವ ಈ ಅತ್ಯುತ್ತಮ ಕರ್ತವ್ಯಪಾಲನೆ ರಾಜ್ಯ ಪ್ರಶಸ್ತಿಯನ್ನು ಪ್ರತಿಕಾ ದಿನಾಚರಣೆಯ ಸವಿ ನೆನಪಿಗಾಗಿ ಈ ಪ್ರಶಸ್ತಿಯನ್ನು ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್,ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ನಿರ್ದೇಶಕ ಶ್ರೀ ಸಂಗಣ್ಣ ಎಚ್ ಗೌಡರ ಅವರು ಪ್ರಶಸ್ತಿ ಪ್ರಧಾನ ಮಾಡಿದರು. ಈ ಸಂಧರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ವಿಜಯಶಂಕರ ಅವರು ಕೆಲವು ಉನ್ನತ ಮಟ್ಟದ ಪ್ರತಿಷ್ಠಿತ ಸಂಘಸಂಸ್ಥೆಗಳು ಕೊಡಮಾಡುವ ಹಲವಾರು ಪ್ರಶಸ್ತಿಗಳನ್ನು ಕೆಲವು ಸಂಸ್ಥೆಗಳು ತಮ್ಮ ವಯಕ್ತಿಕ ಲಾಭ ಹಾಗೂ ರಾಜಕೀಯ ಲಾಭಕ್ಕಾಗಿ ಕೊಡುತ್ತಿರುವುದು ವಿಷಾದಕರ.

ಹಾಗೂ ಗಂಧಗಾಳಿ ಗೊತ್ತಿಲ್ಲದ ರಾಜಕೀಯ ಪ್ರಭಾವ ಬಳಿಸಿ ಸರಕಾರದ ಹಲವು ಕನ್ನಡ ರಾಜೋತ್ಸವ ಪ್ರಶಸ್ತಿ ಗಳು ಕಂಡವರ ಪಾಲಾಗುತ್ತಿರುವುದು ದುರಂತ ಆ ಮಟ್ಟದಲ್ಲಿ ನಮ್ಮ ಜಿಲ್ಲಾ ಹಾಗೂ ತಾಲೂಕು ಆಳಿತ ಈ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ಪ್ರತಿ ವರ್ಷವೂ ತಪ್ಪು ಮಾಡುತ್ತಿದೆ ನಿಜವಾದವ ಅರ್ಹತೆ ಉಳ್ಳ ವ್ಯಕ್ತಿಗಳಿಗೆ ಅವು ತಲುಪಬೇಕು ಹಾಗೆ ಈ ನಮ್ಮ ಪ್ರಶಸ್ತಿಯನ್ನು ನಾವು ಒಬ್ಬ ಪ್ರಾಮಾಣಿಕ ಹಾಗೂ ಉತ್ತಮ ಕರ್ತವ್ಯ ನಿರ್ವಹಿಸುವ ವ್ಯಕ್ತಿಯನ್ನು ಗುರುತಿಸಿದ್ದೇವೆ ಆ ಕಾರಣಕ್ಕೆ ಇಂದು ಪತ್ರಿಕಾ ದಿನಾಚರಣೆಯ ಸವಿ ನೆನಪಿಗಾಗಿ ಈ ರಾಜ್ಯ ಪ್ರಶಸ್ತಿಯನ್ನು ನಮ್ಮ ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದಿಂದ ಅತ್ಯಂತಹ ಗೌರವ ಪೂರ್ವಕವಾಗಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದೇವೆ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಶ್ರೀ ಯಮನಪ್ಪ ಆರ್,ಹಾಲವರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಹಾಲವರ

ಈ ಪ್ರಶಸ್ತಿ ಪ್ರಾಧಾನ ಸರಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅಥಿತಿಗಳಾಗಿದ್ದ ನಾಗೇಶ ಗಂಜಿಹಾಳ ಅವರು ಬ್ಯಾಂಕ್ ಸ್ಥಳಾಂತರಗೊಂಡಾಗ ನಾನು ಮತ್ತು ನನ್ನೂರಿನ ಅನೇಕ ಪ್ರಮುಖರು ಹಿರಿಯರು ಸೇರಿ ವಿಜಯಪುರ ವರೆಗೂ ಹೋರಾಟ ಮಾಡಿ ಮತ್ತೆ ಬ್ಯಾಂಕ್ ತಂದಿದ್ದಕ್ಕೂ ಇಂದು ಸಾರ್ಥಕವಾಯಿತು,ನಮ್ಮ ಗ್ರಾಮದಲ್ಲಿ ತೀರಾ ಬಡ ರೈತರು ಬಡ ನೇಕಾರರು ಮಧ್ಯಮ ಜನಾಂಗ ಇದ್ದ ಗ್ರಾಮ ಸರಕಾರದ ಹಲವಾರು ವಿಮೆಗಳ ಬಗ್ಗೆ ಸಾಲಗಳ ಬಗ್ಗೆ ಇನ್ನೂ ಹೆಚ್ಚಿನ ಯೋಜನೆಯನ್ನು ಬಡವರಿಗೆ ತಲುಪಿಸಿ ಹಾಗೂ ಈ ಪ್ರಶಸ್ತಿಗೆ ತಾವು ಭಾಜನರಾಗಿರಿ ನಿಮ್ಮ ಕರ್ತವ್ಯಪಾಲನೆ ಬಗ್ಗೆ ನಮ್ಮಗೂ ಹೆಮ್ನೆ ಇದೆ ಆ ಪ್ರಶಸ್ತಿಯನ್ನು ಕೊಡಮಾಡಿದ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನಮ್ಮ ಗ್ರಾಮದ ಪರವಾಗಿ ಧನ್ಯವಾದಗಳು ಎಂದರು.

ನಂತರ ಮಾತನಾಡಿದ ಬಿಜೆಪಿ ಪಕ್ಷದ ಹಿರಿಯ ನಾಯಕ ಹನಮಂತಗೌಡ ಎಚ್ ಬೇವೂರು ಅವರು ಗ್ರಾಮದಲ್ಲಿ ಯಮನಪ್ಪ ಹಾಲವರ ಅವರು ಬಂದ ನಂತರ ಹಲವಾರು ಸವಾಲುಗಳನ್ನು ಎದರಿಸಿದ್ದಾರೆ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕನೊಂದಿಗೆ ವಿಲೀನವಾಗಿ ಎಲ್ಲಾ ಬ್ಯಾಂಕುಗಳ ರುಲ್ಸ್ ಬದಲಾಗಿ ಎಲ್ಲಾ ಗ್ರಾಹಕರು ಸ್ವಲ್ಪ ದಿನ ಗೊಂದಲಕ್ಕೆ ಇಡಾಗಿದ್ದರು,ಕೆಲವು ಜನ ಠೇವಣಿಗಳನ್ನು ಕಿತ್ತುಕೊಳಲು ಪ್ರಾರಂಭ ಮಾಡಿದರು,ಅಂತ ಗ್ರಾಹಕರ ಮನವೊಲಿಸಿ ಇಂದು ಗ್ರಾಮದಲ್ಲಿ ಮತ್ತೆ ಬ್ಯಾಂಕ್ ವ್ಯವಹಾರ ಇಂದು ಅಮೀನಗಡ ನಗರಕ್ಕಿತ ೪ ಕೋಟಿ ಹೆಚ್ಚಳವಾಗಿದೆ, ಇದು ಅವರ ಸಮಯ ಪ್ರಜ್ಞೆಯನ್ನು ಹಾಗೂ ಅವರ ಕರ್ತವ್ಯಪಾಲನೆಯನದನು ತೋರಿಸುತ್ತದೆ,ನಿಜಕ್ಕೂ ಈ ಪ್ರಶಸ್ತಿಯನ್ನು ಕೊಟ್ಟಿದ್ದು ಆ ಪ್ರಶಸ್ತಿಗೆ ಅವರು ಭಾಜನರು ಇದೆ ರೀತಿ ಉತ್ತಮ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ಈ ಸರಳ ಸಮಾರಂಭದಲ್ಲಿ ಬ್ಯಾಂಕ್ ಉತ್ತಮ ಗ್ರಾಹಕರು ಹಾಗೂ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಶ್ರೀ ಯಂಕಣ್ಣ ವಜ್ಜರಮಟ್ಟಿ ಶಿಕ್ಷಕರು ಈ ಪ್ರಶಸ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಇವರ ಸೇವೆಯನ್ನು ಗುರುತು ಮಾಡಿ ಪ್ರಶಸ್ತಿ ನೀಡುತ್ತಿರುವುದು ಸ್ವಾಗತರ್ಹ ನಾನು ಈ ಮೊದಲು ಇವರು ಗ್ರಾಮಕ್ಕೆ ಬಂದಾಗ ಇವರು ನಮ್ಮ ಗ್ರಾಮದಲ್ಲಿ ಎರಡು ದಿನ ನಿಲ್ಲಲ್ಲ ಚಿಕ್ಕ ಹುಡುಗ ಸಾಮಾಜಿಕ ಪ್ರಜ್ಞೆ ಕಡಿಮೆ ಎಂದು ಮಾತನಾಡಿದ್ದೆ ಆದರೆ ಅವರು ಒಂದೆ ತಿಂಗಳಲ್ಲಿ ಅದನ್ನು ಉಸಿ ಮಾಡಿ ತಮ್ಮ ಕರ್ತವ್ಯಪಾಲನೆ ಮೂಲಕ ಇಂದು ಸಾರ್ವಜನಿಕರಿಗೆ ಉತ್ತಮ ಸ್ಪಂಧನೆ ಮಾಡುತ್ತಿದ್ದಾರೆ,ಇನ್ನೂ ಹೆಚ್ಚಿನ ಲಾಭವನ್ನು ಜನರಿಗೆ ತುಪಿಸಲಿ ಹಾಗೂ ಈ ಪ್ರಶಸ್ತಿಯನ್ನು ಕೊಟ್ಟಿದ್ದು ಅವರಿಗಲ್ಲ ನಮ್ಮ ಗ್ರಾಮಕ್ಕೆ ಇವರ ಈ ಉತ್ತಮ ಕೆಲಸದಿಂದ ನಮ್ಮ ಗ್ರಾಮದಕ್ಕೆ ಸಂದ ಗೌರವ ಇದು ಅವರಿಗೆ ಶುಭವಾಗಿ ಎಂದು ಹಾರೈಸಿದರು.

ನಂತರ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ದೇವರಾಜ ಕಮತಗಿ ಅವರು ಗ್ರಾಮದಲ್ಲಿ ಹಾಲವರ ಅವರು ಬಂದ ನಂತರ ಬ್ಯಾಂಕ್ ವ್ಯವಹಾರದ ಜೊತೆಗೆ ಗ್ರಾಮದಲ್ಲಿ ಅವರು ಭಾವೈಕ್ಯಯಿಂದ ಎಲ್ಲರೊಂದಿಗೆ ಎಲ್ಲಾ ಸಮಾಜದೊಂದಿಗೆ ಉತ್ತಮ ಸಂಭಂದ ಹಾಗೂ ವ್ಯವಹಾರದ ಜೊತೆಗೆ ಗ್ರಾಮದಲ್ಲಿ ಇರುವ ಪುರಾತನ ಐತಿಹಾಸಿಕ ಶೂಲೇಶ್ವರ ಶಿವ ದೇವಾಲಯಕ್ಕೆ ೨೬ ಸಾವಿರ ರೂಪಾಯಿ ಖರ್ಚ ಮಾಡಿ UPS ಕೊಡುಗೆ ನೀಡಿ ಧಾರ್ಮಿಕವಾಗಿ ನಮಗೆ ಪ್ರೋತ್ಸಾಹ ನೀಡಿ ಇಂದು ಶ್ರವಣ ೨ನೇ ಸೋಮವಾರ ದೇವಾಲಯಕ್ಕೆ ಅನ್ನಸಂತರ್ಪಣೆ ಮಾಡಿ ಮಹಾ ರುದ್ದಾಭಿಶೇಖ ಮಾಡಿಸಿದರು,ಅವರ ಈ ಭಕ್ತಿಗೆ ಒಲಿದ ಈ ಗೌರವೇ ಈ ಪ್ರಶಸ್ತಿ ಬಂದಿರಬಹುದು ಅವರಿಗೆ ನಮ್ಮ ಗ್ರಾಮದ ಪರವಾಗಿ ಅಭಿನಂದನೆಗಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಗದಗಯ್ಯ ನಂಜಯ್ಯನಮಠ ಅವರು ನಮ್ಮ ಹಾಲವರ ಸಾಹೇಬ ವಯಸ್ಸು ಚಿಕ್ಕದಾದರು ಅನೂಭವ ದೊಡ್ಡದು ಅವರು ಸಿಬ್ಬಂದಿ ವಿಚಾರದಲ್ಲಿ ನನ್ನೊಂದಿಗೆ ಗ್ರಾಮ ಹಿತರಕ್ಷಣಾ ಸಮಿತಿ ಸಿಬ್ಬಂದಿ ವಿಚಾರದಲ್ಲಿ ಬ್ಯಾಂಕ್ ಮುಂದೆ ಧರಣಿ ಮಾಡಲು ಅರ್ಜಿ ನೀಡಿದ್ದು ತಾವು ಮೆಲಾಧಿಕಾರಿಗಳೊಂದಿಗೆ ಮಾತನಾಡಿ ಎಂದಾಗ ಇದೆ ಅಗಸ್ಟ್ ತಿಂಗಳಲಿ ಸಿಬ್ಬಂದಿ ನೀಡುವುದಾಗಿ ಭರವಸೆ ಇಟ್ಟಿದ್ದರು,ಆದರೆ ಈಗ ಅವರಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ ನಾವು ನಿವೆಲ್ಲರೂ ಸೇರಿ ಉಬ್ಬಳಿಯ ಮುಖ್ಯ ಕಛೇರಿಗೆ ತೆರಳಿ ಈ ಸಿಬ್ಬಂದಿ ಕೊರತೆ ಬಗ್ಗೆ ಮಾತನಾಡುನು ಇದಲ್ಲದೆ ಕೆವಕ ಇಬ್ಬರು ಸಿಬ್ಬಂದಿ ಇಟ್ಟುಕೊಂಡು ಹಾಲವರ ಅವರು ಇಂದು ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ,

ಅವರ ಹಾಗೂ ಬ್ಯಾಂಕ್ ಸ್ಥತಿ ಅವಲೋಕಿಸಿ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ,ಅಲ್ಪ ಸಮಯದಲ್ಲಿ ಕೊಟ್ಯಾಂತರ ರೂಪಾಯಿ ವ್ಯವಹಾರ ಮಾಡಿ ಬ್ಯಾಂಕ್ ಪ್ರಗತಿಯನ್ನು ಹೆಚ್ಚಿಸಿದ್ದು ಶ್ಲಾಘನೀಯ ಇಂತಹ ಪ್ರಾಮಾಣಿಕ ಅಧಿಕಾರಿಗಳನ್ನು ಗ್ರಾಮದ ಸಂಘ ಸಂಸ್ಥೆಗಳು ಗುರುತಿಸಬೇಕು,ಈ ರಾಜ್ಯ ಪ್ರಶಸ್ತಿ ನೀಡುತ್ತಿರುವುದು ಬಹಳ ಸಂತಸ ಅಲ್ಲದೆ ಈ ಸಮಾರಂಭದಲ್ಲಿ ನನ್ನನ್ನು ಈ ಸಭೆ ಅಧ್ಯಕ್ಷತೆ ನೀಡಿ ಪ್ರಶಸ್ತಿ ಪ್ರದಾನ ಮಾಡಲು ಬಂದಿದ್ದು ಖುಷಿಯಾಗಿದೆ ,ಈ ಅವಾರ್ಡ್ ಪಡೆಯಲು ನಿಜಕ್ಕೂ ಯಮನಪ್ಪ ಹಾಲವರ ಸಾಹೇಬ ಅರ್ಹಯ ಹೊಂದಿದ್ದಾರೆ ಅವರಿಗೆ ನಮ್ಮ ಗ್ರಾಮದ ಪರವಾಗಿ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಪರವಾಗಿ ಅಭಿನಂದನೆಗಳು ಎಂದರು.

ಈ ಸಂಧರ್ಭದಲ್ಲಿ ಪ್ರಶಸ್ತಿಯನ್ನು ಪಡೆದು ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಯಮನಪ್ಪ ಹಾಲವರ ಅವರು BB News ನೊಂದಿಗೆ ಮಾತನಾಡಿ ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ,ನನ್ನ ಸೇವೆಯನ್ನು ಗುರುತಿಸಿ ಇಂದು ಬಾಗಲಕೋಟೆಯ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ,ಬಿ,ವಿಜಯಶಂಕರ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ,ಹಾಗೂ ನನ್ನ ಉತ್ಸಾಹವನ್ನು ಇನ್ನೂ ಇಮ್ಮಡಿಗೊಳಿಸಿರಿ ನನ್ನ ಮೇಲೆ ಹೆಚ್ಚಿನ ಸಾಮಾಜಿಕ ಜವಬ್ದಾರಿ ಹಾಕಿರಿ ಖಂಡಿತವಾಗಿ ನಾನು ನನ್ನ ಕೈಲಾದಷ್ಟು ಸರಕಾರದ ಯೋಜನೆಯನ್ನು ಪ್ರಾಮಾಣಿಕವಾಗಿ ಜನತೆಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ ಎಂದರು ,ಈ ಪ್ರಶಸ್ತಿಯನ್ನು ಕೊಡಮಾಡಿದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಕೆ,ಜಿ ಪಂಡಿತ ಹಾಗೂ ರಾಜ್ಯ ಅಧ್ಯಕ್ಷರಾದ ಶ್ರೀ ಎಮ್,ಶಿವಪೂಜಿ ಅವರಿಗೆ ಹಾಗೂ ಬಾಗಲಕೋಟೆ ಜಿಲ್ಲೆಯ ಕರ್ನಾಟಕ ಪತ್ರಕರ್ತರ ಸಂಘದ ಸರ್ವ ಸದಸ್ಯರಿಗೆ ಮತ್ತು ಎಲ್ಲಾ ಮಾಧ್ಯಮ ಮಿತ್ರರಿಗೆ ನನ್ನ ಅನಂತ ನಮನಗಳು ಎಂದರು.

ಈ ಪ್ರಶಸ್ತಿ ಸರಳ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ PKPS ಸಂಘದ ಅಧ್ಯಕ್ಷ ಶ್ರೀ ಗದಗಯ್ಯ ನಂಜಯ್ಯನಮಠ ಹಾಗೂ ಉದ್ಘಾಟಕರಾಗಿ ಕ,ಪ,ಸಂ,ರಾಷ್ಟ್ರೀಯ ನಿರ್ದೇಶಕ ಶ್ರೀ ಎಸ್,ಎಚ್,ಗೌಡರ, ಕ,ಪ,ಸಂ,ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್,ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಗ್ಯಾನವ್ವ ಮಾದರ, ಬಿಜೆಪಿ ಪಕ್ಷದ ಹಿರಿಯ ಮುಖಂಡ ಶ್ರೀ ಹನಮಂತಗೌಡ ಬೇವೂರ, ಭಾರತೀಯ ಜನತಾ ಪಾರ್ಟಿ ತಾಲೂಕು OBC ಘಟಕದ ಅಧ್ಯಕ್ಷ ನಾಗೇಶ ಗಂಜಿಹಾಳ, ಕಾಂಗ್ರೆಸ್ ಪಕ್ಷದ ಯುವ ನಾಯಕ ದೇವರಾಜ ಕಮತಗಿ, ಶಿಕ್ಷಕರಾದ ಶ್ರೀ ಯಂಕಣ್ಣ ವಜ್ಜರಮಟ್ಟಿ, ಶ್ರೀ ಮಾಚಾ ಶಿಕ್ಷಕರು ,ಹಾಲುಮತ ಸಮಾಜದ ಹಿರಿಯರಾದ ಶ್ರೀ ಭೀಮಸಿ ಘಂಟಿ, ಮತ್ತು ಗ್ರಾಂ,ಪ,ಸದಸ್ಯರಾದ,ಶ್ರೀ ಹನಮಂತ ಮಿಣಜಗಿ,ಜಹಾಂಗೀರ್ ಜಾಗೀರದಾರ,ಹಾಗೂ ಶ್ರೀ ಯಮನಪ್ಪ ಬಾರಕೇರ, ಶ್ರೀ ಮೈನಪ್ಪ ಸಿಂಗಾಡಿ,ಶ್ರೀ ಮುತ್ತಪ್ಪ ಹಡಪದ,ಶ್ರೀ ಯಮನಪ್ಪ ಬೊ ಭಜಂತ್ರಿ ಉಪಸ್ಥಿತರಿದ್ದರು.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.