Breaking News

ಸಿ.ಡಿ ಕೇಸ್: ವಿಚಾರಣೆಗೆ ಬರುವಂತೆ ಯುವತಿಗೆ ಮತ್ತೊಂದು ನೋಟಿಸ್ ಜಾರಿಮತ್ತೊಂದು ನೋಟಿಸ್ ಜಾರಿ

ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ವಿಡಿಯೋ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಮಾ.30) 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಯುವತಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಲೈಂಗಿಕವಾಗಿ ಬಳಸಿಕೊಂಡ ವಿಚಾರದಲ್ಲಿ ಜಾರಕಿಹೊಳಿ ಮೋಸ ಮಾಡಿದ್ದಾರೆ ಎಂದು ತಮ್ಮ ವಕೀ ಜಗದೀಶ್ ಮುಖಾಂತರ ಲಿಖಿತ ರೂಪದಲ್ಲಿ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಕಲಂ 354ಎ 417, 504, 506, 67ಎ, ಐಟಿ ಅಧಿನಿಯಮ 2000 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿತ್ತು.

ಇದೀಗ ಕಲಂ 161 ಅಡಿ ಯುವತಿಯೂ ತನಿಖಾಧಿಕಾರಿ ಮುಂದೆ ಹೇಳಿಕೆ ನೀಡಬೇಕು. ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಕಲಂ 164 ಅಡಿ ಯುವತಿ ನ್ಯಾಯಾಂಗ ದಂಡಾಧಿಕಾರಿ ಸಮಕ್ಷಮದಲ್ಲಿ ಹೇಳಿಕೆ ನೀಡಬೇಕು. ಜತೆಗೆ ಅಪರಾಧ ನಡೆದ ಸ್ಥಳಗಳ ಗುರುತಿಸುವಿಕೆ ಹಾಗೂ ಪಂಚನಾಮೆ ಮಾಡಲು ಯುವತಿ ಹಾಜರಿರಬೇಕು. ಒಂದು ವೇಳೆ ವಿಚಾರಣಾ ಸ್ಥಳಕ್ಕೆ ಬರಲಾಗದಿದ್ದಲ್ಲಿ ಯುವತಿ ಬಯಸಿದ ಸ್ಥಳದಲ್ಲಿ ಅವರ ಇಷ್ಟದ ವ್ಯಕ್ತಿಗಳ ಸಮಕ್ಷಮದಲ್ಲಿ ಹೇಳಿಕೆ ನೀಡಲು ಇಚ್ಛಿಸಿದ್ದಲ್ಲಿ ಸ್ಥಳ ಮತ್ತು ಸಮಯದ ಮಾಹಿತಿ ನೀಡಿದರೆ, ತನಿಖಾಧಿಕಾರಿಗಳು ಅಲ್ಲಿಯೇ ಹೇಳಿಕೆ ಪಡೆಯಲಿದ್ದಾರೆ.

ಇದಕ್ಕಾಗಿ ಮಹಿಳಾ ಅಧಿಕಾರಿಗಳು ಮತ್ತು ಮಹಿಳಾ ಸಿಬ್ಬಂದಿ ಒದಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಲಾಗಿದೆ. ಯುವತಿ ವಕೀಲರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಈ ಮಧ್ಯೆ, ಸಿ.ಡಿ ಪ್ರಕರಣದ ಸಂಬಂಧ ಸ್ವ-ಇಚ್ಚಾ ಹೇಳಿಕೆ ನೀಡಲು ಸಂತ್ರಸ್ತ ಯುವತಿಗೆ ನ್ಯಾಯಾಲಯ ಅನುಮತಿ ನೀಡಿದೆ ಎನ್ನಲಾಗಿದೆ. ಹಾಗಾಗಿ, ಯುವತಿ ಶೀಘ್ರ ನ್ಯಾಯಾಲಯದ ಮುಂದೆ ಹಾಜರಾಗುವ ನಿರೀಕ್ಷೆ ಇದೆ. 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಅಥವಾ ನ್ಯಾಯಾಧೀಶರ ಮನೆಯಲ್ಲಿಯೇ ಯುವತಿ ಹಾಜರಾಗಿ ಹೇಳಿಕೆ ನೀಡಬಹುದೆಂದು ಹೇಳಲಾಗುತ್ತಿದೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.