ಬೆಂಗಳೂರು : ಕೊರೊನಾ ವೈರಸ್ ಆತಂಕದ ನಡುವೆಯೇ ನಾಡಿನೆಲ್ಲೆಡೆ ಗೌರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹೂ, ಹಣ್ಣು ತರಕಾರಿ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ.
ಬೆಲೆ ಏರಿಕೆಯ ನಡುವೆಯೂ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿದಂತೆ ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಜೋರಾಗಿದ್ದು, ಒಂದು ಮೊಳ ಮಲ್ಲಿಗೆ ಹೂವಿನ ಬೆಲೆ 40 ರೂ. ಇದ್ದರೆ, ಕನಕಾಂಬರ ದರ 50 ರೂ. ಬಿಡಿಹೂವು ಕೆಜಿಗೆ 400 ರಿಂದ 450 ರೂ. ಇದೆ ಸೇವಂತಿಗೆ ಒಂದು ಮಾರಿಗೆ 200 ರಿಂದ 250 ರೂ. ಗೆ ಏರಿಕೆಯಾಗಿದೆ.
ಇನ್ನು ಹಣ್ಣಿನ ಬೆಲೆಯಲ್ಲೂ ಏರಿಕೆಯಾಗಿದ್ದು, ಕೆಜಿ ಸೇಬಿಗೆ 200 ರಿಂದ 250 ರೂ. ಕಿತ್ತಳೆ ಕೆಜಿಗೆ 150 ರೂ. ದಾಳಿಂಬೆ ಹಣ್ಣು ಕೆಜಿಗೆ 160 ರೂ. ಇದೆ ಮೊಸಂಬಿ ಹಣ್ಣು 80 ರಿಂದ 100 ರೂ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೆಜಿಗೆ 80 ರೂ. ತಲುಪಿದೆ.