Breaking News

ಅಮೀನಗಡ ನಗರದಲ್ಲಿ ದೇಶದ ಅತೀ ದೊಡ್ಡ ಮಾಸ್ಕ್ & 108 ಉದ್ದನೆಯ ಧ್ವಜದ ಅನಾವರಣಕ್ಕೆ ಕ್ಷಣಗಣನೆ,

ಅಮೀನಗಡ : ಮಾರ್ಚ್ ತಿಂಗಳು ಮಲ್ಲಯ್ಯನ ಪಾದಯಾತ್ರೆ ಮಾಡುವ ಭಕ್ತರಿಗೆ ಶ್ರೀಶೈಲ ಮಲ್ಲಿಕಾರ್ಜುನದೇ ಧ್ಯಾನ, ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದಿಂದ ಪಾದಯಾತ್ರೆ ಕೈಗೊಳ್ಳುವುದಕ್ಕೆ ಶತ ಶತಮಾನಗಳ ಇತಿಹಾಸವಿದೆ.

ಆದ್ರೆ ರಾಜಧಾನಿ ಬೆಂಗಳೂರಿಗೂ ಈ ಭಕ್ತಿ ನಂಟನ್ನು ಹಚ್ಚಿಸಿ ಅಲ್ಲಿಂದ ಪ್ರತಿವರ್ಷ 25ಜನರನ್ನು ಕರೆತಂದು 450 KM ನಡೆಸಿ ಅವರಲ್ಲಿ ಭಕ್ತಿ ಬೀಜವನ್ನು ಬಿತ್ತುತ್ತಿದ್ದಾರೆ ಅಮೀನಗಡದ ಯುವ ಉದ್ಯಮಿ ಮಂಜುನಾಥ್ ಬಂಡಿ.

ಈ ಬಾರಿ ಮಾರ್ಚ್ 29ರಂದು ಸೋಮವಾರ ಆರಂಭಗೊಳ್ಳಲಿರುವ ಈ ಪಾದಯಾತ್ರೆಗಾಗಿ ವಿಶೇಷ ತಯಾರಿ ನಡೆಯುತ್ತಿದ್ದು ಬೆಂಗಳೂರಿನ ಅಮ್ಮ ಫೌಂಡೇಶನ್ ಮತ್ತು ಅಮೀನಗಡ ಶ್ರೀಶೈಲ ಪಾದಯಾತ್ರೆ ಸದ್ಭಕ್ತ ಮಂಡಳಿ ಈ ಬಾರಿ ವಿಶೇಷ ಕಾರ್ಯಕ್ರಮ ವೊಂದನ್ನು ಹಾಕಿಕೊಂಡಿದ್ದು ದೇಶ ದಲ್ಲಿ ಕರೋನ ಹಾವಳಿ ಹೆಚ್ಚಾಗುತ್ತಿರುವುದರ ಹಿನ್ನಲೆಯಲ್ಲಿ 8ಅಡಿ ಉದ್ದನೆಯ 6ಅಡಿ ಅಗಲನೆಯ ದೇಶದ ಅತೀ ದೊಡ್ಡ ಮಾಸ್ಕ್ ತಯಾರಿಸಿದ್ದು, ಅವತ್ತು ಅಮೀನಗಡ ಗ್ರಾಮದಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಜಾಗೃತಿ ಅಭಿಯಾನ ಜೊತೆಗೆ 108 ಅಡಿಗಳ ಉದ್ದನೆಯ ಶ್ರೀಶೈಲ ಮಲ್ಲಯ್ಯನ ಧ್ವಜ ಮಾಡಿ ಜನರಲ್ಲಿ ಪಾದಯಾತ್ರೆ ಜಾಗೃತಿ ಮತ್ತು ಕರೋಣ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭರದ ತಯಾರಿ ನಡೆಯುತ್ತಿದೆ.

ಬಾಗಲಕೋಟೆಯ ಖ್ಯಾತ ಕಲಾವಿದ ಅಸ್ಲಾಂ ಕಲಾದಗಿ ಅವರು ಆಕರ್ಷಕ ಮಲ್ಲಯ್ಯನ ಚಿತ್ರ ಮಾಸ್ಕ್ ಜಾಗ್ರತಿಯ ಸಂದೇಶ ಗಳನ್ನು ಬಿ ಡಿಸಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

29 ರ ಸಂಜೆ 4 ಗಂಟೆಗೆ 108ಅಡಿಗಳ ಧ್ವಜ ಅನಾವರಣಕ್ಕೆ ಬಾಗಲಕೋಟ ಸಂಸದರಾದ ಶ್ರೀ ಪಿ.ಸಿ.ಗದ್ದಿಗೌಡರ್ ಚಾಲನೆ ನೀಡಲಿದ್ದಾರೆ… ಅಮೀನಗಡ ಪ್ರಭು ಶಂಕರೇಶ್ವರ ಮಠದ ಜಗದ್ಗುರು ಶ್ರೀ ಶಂಕರ್ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀಶೈಲ ಜಗದ್ಗುರು ಪೀಠದ ಶಾಖಾ ಮಠ ಬಳ್ಳಾರಿ ಜಿಲ್ಲೆಯ ಸಂಡೂರ್ ತಾಲೂಕಿನ ಡಿ.ಅಂತಾಪುರದ ಕುಮಾರ ಪಂಡಿತಾರಾಧ್ಯ ಸ್ವಾಮೀಜಿ ಗಳು ಸಾನಿಧ್ಯ ವಹಿಸಲಿದ್ದಾರೆ. ಬೆಂಗಳೂರ್ ನಾಗಾರ್ಜುನ ವಿ. ವಿ. ಯ ಡೈರೆಕ್ಟರ್ ಶ್ರೀ ಮನೋಹರ್ ನರೋಜಿ. ರಾಷ್ಟ್ರೀಯ ವಾಲಿಬಾಲ್ ಮಾಜಿ ಆಟಗಾರ ರೋಹಿತ್ ಕೆಂಪೇಗೌಡ… ರಾಷ್ಟ್ರೀಯ ಓಟಗಾರ್ತಿ ಪ್ರಮೀಳಾ ಗಟ್ಟಿ, ಸಂಪನ್ಮೂಲಗಳ ವ್ಯಕ್ತಿ ರಮೇಶ್ ಉಮ್ರಾಣಿ,, ಜ್ಞಾನಜ್ಯೋತಿ ಕಾಲೇಜ್ ಪ್ರಾಂಶುಪಾಲ ಶ್ರೀ ರಮೇಶ್ ಸೇರಿದಂತೆ ಅಮೀನಗಡ ಪಟ್ಟಣದ ಅನೇಕ ಗಣ್ಯ ಮಾನ್ಯರ ಸಮ್ಮುಖದಲ್ಲಿ 150ಕೆ. ಜಿ. ಹೂ ಗಳ ಪುಷ್ಪರ್ಚನೆ ಮೂಲಕ ಪಥ ಸಂಚಲನ ನಡೆಯಲಿದೆ ಎಂದು ಕಾರ್ಯಕ್ರಮ ರೂವಾರಿ ಮಂಜುನಾಥ್ ಬಂಡಿ ತಿಳಿಸಿದ್ದಾರೆ.

About vijay_shankar

Check Also

ಆಸಂಗಿ ಗ್ರಾಮದಲ್ಲಿ ರಾಜಶೇಖರ್ ಶೀಲವಂತ ಇವರಿಂದ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ ವಿತರಣೆ

ಗುಳೇದಗುಡ್ಡ : ತಾಲೂಕಿನ ಸಮಿಪದ ಆಸಂಗಿ ಗ್ರಾಮದಲ್ಲಿ ಇಂದು ಶ್ರೀ ಮಾರುತೇಶ್ವರ ಜೀರ್ಣೋದ್ದಾರ ಸೇವಾ ಸಮಿತಿ ಸದಸ್ಯರಿಗೆ ಬಾಗಲಕೋಟೆ ಜಿಲ್ಲಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.