
ಕಮತಗಿ : ಹುನಗುಂದ ತಾಲೂಕಿನ ಕಮತಗಿ ನಗರದ ಪಟ್ಟಣ ಪಂಚಾಯತ ಚುನಾವಣೆ ಯಲ್ಲಿ ವಾರ್ಡ ನಂಬರ್ ೦೭ ರಿಂದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಶ್ರೀ ದೇವಿಪ್ರಸಾದ ನಿಂಬಲಗುಂದಿ ಸ್ಪರ್ಧೆ ಮಾಡಿದರೆ ವಾರ್ಡ ನಂಬರ ೧೫ ರಲ್ಲಿ ಇವರ ಧರ್ಮಪತ್ನಿ ಶ್ರೀಮತಿ ನೇತ್ರಾವತಿ ದೆ ನಿಂಬಲಗುಂದಿ ಸ್ಪರ್ಧೆ ಮಾಡಿದ್ದರು,ಈ ದಿನದ ಫಲಿತಾಂಶದಲ್ಲಿ ಇಬ್ಬರೂ ಸಹ ಭರ್ಜರಿ ಗೆಲವು ಸಾಧಿಸಿದ್ದಾರೆ. ಕಮತಗಿ ಪಟ್ಟಣದಲ್ಲಿ ಇದೊಂದು ಹೊಸ ಮೈಲುಗಲ್ಲು & ಇತಿಹಾಸ ಎಂದರು ತಪ್ಪಾಗಲಾರದು,ಶ್ರೀ ದೇಪ್ರಸಾದ ಅವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಕ್ರಿಯ ನಿಷ್ಠಾವಂತ ಕಾರ್ಯಕರ್ತ ಹಾಗೂ ,Sc. ST ಘಟಕದ ರಾಜ್ಯ KPPC ಘಟಕದ

ಅಧ್ಯಕ್ಷರಾಗಿ ಕೆಲಸವನ್ನು ಮಾಡಿ ಪಕ್ಷದ ಬಲವರ್ಧನೆ ಮಾಡಿ ಇಂದು ಈ ಹೊಸ ವರ್ಷಕ್ಕೆ ವಿಜಯದ ಮಾಲೆಯನ್ನು ಧರಿಸಿದ್ದಾರೆ. ಸಾಮಾಜೀಕ ರಂದದಲ್ಲಿ ಹಲವಾರು ಹೋರಾಟ ಹಾಗೂ ಜನ ಸೇವೆ ಮೂಲಕ ಗುರುತಿಸಿಕೊಂಡ ದೇವಿಪ್ರಸಾದ ಅವರು ಮೊಟ್ಟ ಮೊದಲ ಪ್ರಯತ್ನದಲ್ಲಿ ತುಂಬಾ ದೊಡ್ಡ ಸಾಧನೆ ಮಾಡಿದ್ದಾರೆ, ಅವರ ಈ ರಾಜಕೀಯ ಜೀವನ ಹೊಸ ವರ್ಷಕ್ಕೆ ದೇವರ ಕೊಡುಗೆ, ಈ ಸಮಾಜದ ಹಾಗೂ ನಗರದ ಸಮಗ್ರ ಅಭಿವೃದ್ಧಿಗೆ ಇಂತಹ ಯುವ ಉತ್ಸಾಹಿಗಳು ತುಂಬಾ ಅವಶ್ಯಕತೆ ಇದೆ ದೇವಿಪ್ರಸಾದ ಅವರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಜನ ಸೇವೆ ಮಾಡಲಿ ಎಂದು ಜನರ ಆಶಯ ,

ನಾನು ಶ್ರೀಮತಿ ನೇತ್ರಾವತಿ ದೇವಿಪ್ರಸಾದ ನಿಂಬಲಗುಂದಿ ನೂತನವಾಗಿ ನನ್ನ & ನನ್ನ ಪತಿಯನ್ನು ಈ ನಗರದ ಪಟ್ಟಣ ಪಂಚಾಯತ ಸದಸ್ಯರನ್ನಾಗಿ ಮಾಡಿದ ನನ್ನ ಹಾಗೂ ನನ್ನ ಪತಿಯವರನ್ನು ಅತ್ಯಂತ ಗೌರವ ಪೂರ್ವಕವಾಗಿ ನಮಗೆ ತಮ್ಮ ಅಮೂಲ್ಯವಾದ ಮತ ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತಂದಿರಿ ನಿಮ್ಮ ಈ ನಂಬಿಕೆಯನ್ನು ನಾವು ಎಂದಿಗೂ ಕಳೆದುಕೊಳ್ಳುವುದಿಲ್ಲ ಈ ಸಮಾಜದ/ ನಗರದ ಸಮಗ್ರ ಅಭಿವೃದ್ಧಿಗಾಗಿ ನಾವು ಹಗಲು-ರಾತ್ರಿ ಶ್ರಮಿಸುತ್ತೇವೆ ನಿಮ್ಮ ಅಖಂಡ ಆರ್ಶಿವಾದವೇ ನಮಗೆ ಗೆಲುವು ತಮ್ಮೆಲ್ಲರಿಗೂ ಈ ಹೊಸ ವರ್ಷ ಹಾಗೂ ಮಕರ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು ಹಾಗೂ ವಾರ್ಡ ನಂಬರ ೧೫ ಹಾಗೂ ೦೭ ರ ಎಲ್ಲಾ ಕಾಂಗ್ರೆಸ್ ಮುಖಂಡರಿಗೆ ಹಾಗೂ ನಮ್ಮ ಸಮಾಜದ ಗುರುಹಿರಿಯಗೆ ಕಾರ್ಯಕರ್ತರಿಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು,
ಈ ಕಮತಗಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ನನ್ನ ಹಾಗೂ ನನ್ನ ಧರ್ಮಪತ್ನಿ ಅವರ ಗೆಲುವಿಗಾಗಿ ಹಗಲು ರಾತ್ರಿ ನಿರಂತರವಾಗಿ ಹೋರಾಟ ಮಾಡಿದ ಎಲ್ಲಾ ನನ್ನ ಆತ್ಮೀಯ ಮಿತ್ರರಿಗೆ ಹಾಗೂ ಪಕ್ಷದ ಮುಂಡರಿಗೆ ,ಕಾರ್ಯಕರ್ತರಿಗೆ ,ಮತ ದಾರ ಪ್ರಭುಗಳಿಗೆ ನಮ್ಮ ಕುಟುಂಬದ ಪರವಾಗಿ ಹೃಯ ಪೂರ್ವಕ ನಮನಗಳು