ಯಾದಗಿರಿ | ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರು/ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಹುದ್ದೆಗಳನ್ನು 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಜೂನ್ 22ರಂದು ನೇರ ಸಂದರ್ಶನವನ್ನು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕಚೇರಿಯಲ್ಲಿ ಏರ್ಪಡಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೈದ್ಯಕೀಯ ತಜ್ಞರು-1, ಮೂಳೆ ತಜ್ಞರು-1, ಫಾರೆನ್ಸಿಕ್ ತಜ್ಞರು-1, ರೆಡಿಯೋಲೋಜಿಸ್ಟ್-1, ಮೈಕ್ರೊ ಬೈಯೋಲೊಜಿಸ್ಟ್ (ವೈದ್ಯಕೀಯ)-1, ವೈದ್ಯಾಧಿಕಾರಿ-11, ವೈದ್ಯಾಧಿಕಾರಿ (ಕೋವಿಡ್-19)-7, ಶುಶ್ರೂಷಕರು-12, ಕಿರಿಯ ಔಷಧ ತಜ್ಞರು-2, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು-1, ವೈದ್ಯಕೀಯ ಕ್ಷ-ಕಿರಣ ತಂತ್ರಜ್ಞರು-1, ಮೆಡಿಕಲ್ ರಿಕಾರ್ಡ್ ಟೆಕ್ನಿಷಿಯನ್-1, ಡಾಟಾ ಎಂಟ್ರಿ ಆಪರೇಟರ್-1, ವಾಹನ ಚಾಲಕ-1 ಮತ್ತು ಗ್ರೂಪ್ ಡಿ-3 ಹುದ್ದೆಗಳಿಗೆ ನೇರ ಸಂದರ್ಶನ ಏರ್ಪಡಿಸಲಾಗಿರುತ್ತದೆ.
ಸಂದರ್ಶನಕ್ಕೆ ಹಾಜರಾಗುವ ಅರ್ಹ ಅಭ್ಯರ್ಥಿಗಳು ಮೂಲ ದಾಖಲಾತಿಗಳು ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಚೇರಿಯ ದೂ:08473-252434 ಗೆ ಸಂಪರ್ಕಿಸಲು ಸೂಚಿಸಿದ್ದಾರೆ.