ಅಮೀನಗಡ : ಬೀದಿ ಬದಿ ವ್ಯಾಪಾರಸ್ಥರಿಗೆ.ಮಾಸ್ಕ ಹಾಗೂ ಸೋಪು ವಿತರಣೆ ಅಮೀನಗಡ ಪಟ್ಟಣದಲ್ಲಿ 8-9-2020ರಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ cಸಂಘಟನೆಗಳ ಒಕ್ಕೂಟ (ರಿ )ಬೆಂಗಳೂರು ಹಾಗೂ ಬೀದಿ ಬದಿ ವ್ಯಾಪಾರಿಗಳ ಸಮಿತಿ ಅಮಿನಗಡ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಮಾಸ್ಕ್ ಹಾಗೂ ಡೆಟಾಲ್ ಸೋಪು ವಿತರಣೆ ಕಾರ್ಯಕ್ರಮ ಜರುಗಿತು ಅಮೀನಗಡ ಪಟ್ಟಣ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಆದ ಕೊನ್ನೂರು ಮಾತನಾಡಿ ಸರಕಾರದಿಂದ ಬರುವ ಸೌಲಭ್ಯಗಳನ್ನು ಪಡೆದು ಹಾಗೂ ಬ್ಯಾಂಕುಗಳಲ್ಲಿ ಹತ್ತು ಸಾವಿರ ರೂಪಾಯಿ ಸಾಲದ ಸಹಾಯಧನ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು, ಬೀದಿ ಬದಿ ವ್ಯಾಪಾರಸ್ಥರಿಗೆ ಹತ್ತು ಸಾವಿರ ರೂಪಾಯಿಯ ಚೆಕ್ ವಿತರಿಸಿ ಮಾತನಾಡಿದ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಭಾರತಿ ಗಜೇಂದ್ರಗಡ ಅವರು ಸರಿಯಾದ ಸಮಯಕ್ಕೆ ಮರುಪಾವತಿಸಿ ಬ್ಯಾಂಕಿನ ವಿಶ್ವಾಸಗಳಿಸಿ ಅಭಿವೃದ್ಧಿ ಹೊಂದಬೇಕು ಎಂದು ನುಡಿದರು. ಅಮೀನಗಡದ ಎಸ್ ಐ ಗೋಪಾಲ್ ಕುಪ್ಪಿ ಅವರು ಮಾತನಾಡಿ ಬೀದಿಯಲ್ಲಿ ವ್ಯಾಪಾರ ಮಾಡುವವರು,
ವ್ಯಾಪಾರಸ್ಥರು ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಬೇಕು ಮುಂಜಾಗೃತ ಕ್ರಮವಾಗಿ ಮಾಸ್ಕ ಧರಿಸಿ ಡೆಟಾಲ್ ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಹೇಳಿದರುಕಾರ್ಯಕ್ರಮ ದಲ್ಲಿಪತ್ರ ಕರ್ತರಾದ ಹಸನ್ ಬೇಪಾರಿ ಹಾಗೂ ಪ.ಪಂ ಸಿಬ್ಬಂದಿ ಮಂಜು ಪೂಜಾರ್ ಪೊಲೀಸ್ ರಾದ ರಮೇಶ್ ಅವರನ್ನು ಸನ್ಮಾನಿಸಲಾಯಿತು
ಸಭೆಯ ಅಧ್ಯಕ್ಷತೆಯನ್ನು ದಾವಲಸಾಬ್ ಬಾಗೇವಾಡಿ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಅಧ್ಯಕ್ಷರು ಅಮೀನಗಡ ವಹಿಸಿದ್ದರು ಮುಖ್ಯ ಅತಿಥಿ ಗಳಾಗಿ ಬಿ.ಬ. ವ್ಯಾ.ಸ. ಉಪಾಧ್ಯಕ್ಷರು ಮಮತಾಜ್ ಬೇಗಮ್ ಎಸ್. ಅಂಬಲಗಿ ಖಜಾಂಚಿ ರುದ್ರಮ್ಮ ಪ. ಕುಂಬಾರ.ಕಾರ್ಯದರ್ಶಿ ಮಲ್ಲೇಶ್ ನಿಡಗುಂದಿ ಹನುಮಂತ ಕತ್ತಿ. ಸದಸ್ಯರಾದ ರಾಘವೇಂದ್ರ ಮಬ್ರುಮ್ ಕರ, ಮುತ್ತಪ್ಪ ಮುಂದಿನಮನಿ ರಾಮಣ್ಣ ರಾಥೋಡ್ ಲಕ್ಷ್ಮೀಬಾಯಿ ಭಜಂತ್ರಿ. ಗಣೇಶ್ ಸಿಂಹಾಸನ ಸಿದ್ರಾಮ ತತ್ರಾಣಿ ಯವರು ಸ್ವಾಗತಿಸಿ ನಿರೂಪಿಸಿದರು ವಂದಿಸಿದರು