ಕೊಪ್ಪ ತಾಲ್ಲೂಕಿನ ಜಯಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿನಾಯಕ ನಗರದ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಗುಡ್ಡ ರಸ್ತೆ ಮೇಲೆ ಕುಸಿದು 10 ದಿನದಿಂದ ಜನರು ಸಂಕಷ್ಟದಲ್ಲಿದ್ದರು . ಸ್ಥಳೀಯರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ದೂರು ನೀಡಿದ್ದರು ಇದನ್ನು ಗಮನಿಸಿ ಚಿಕ್ಕಮಗಳೂರಿಂದ ಪ್ರಯಾಣ ಬೆಳೆಸಿದ ಜಿಲ್ಲಾ ಸಂಘದ ಪದಾಧಿಕಾರಿಗಳು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಕೊಪ್ಪ ತಹಸೀಲ್ದಾರ್. ತಾಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಗಮನಕ್ಕೆ ತರಲಾಯಿತು ಆದರೂ .ತೆರವು ಕಾರ್ಯದ ವಿಳಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಹಾಗೂ ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಸಿಇಒ ಗಮನಕ್ಕೂ ಜಿಲ್ಲಾ ಪತ್ರಕರ್ತರ ಸಂಘ ತರಲಾಗಿತ್ತು . ಕೂಡಲೇ ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕ್ರಮ ಕೈಗೊಳ್ಳಲು ಸೂಚಿಸಿದರು ಹಿನ್ನೆಲೆಯಲ್ಲಿ ಕಳೆದ 10 ದಿವಸಗಳಿಂದ ರಸ್ತೆಯ ಮೇಲೆ ಬಿದ್ದಿದ್ದ ಮಣ್ಣು ರಾಶಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು . ಗುಡ್ಡ ಕುಸಿತದಿಂದ ರಸ್ತೆ ಮೇಲಿದ್ದ ಮಣ್ಣನ್ನು ತೆರವುಗೊಳಿಸಿದ್ದಕ್ಕೆ ಜಿಲ್ಲಾ ಸಂಘದ ಸ್ಪಂದನೆಗೆ ಸ್ಥಳೀಯರು ಕೃತಜ್ಞತೆ ಸಲ್ಲಿಸಿದ್ದಾರೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿ. ಎಂ ರಾಜಶೇಖರ್. ಪ್ರಧಾನ ಕಾರ್ಯದರ್ಶಿ ಬಿಆರ್ ಕುಮಾರ್ ಹಾಗೂ ಜಯಪುರ ಪತ್ರಕರ್ತರಾದ ಪ್ರಸನ್ನ .ಹೆಬ್ಬಾರ್ ಹಾಗೂ ಮಣಿಕಂಠ ಜಿಲ್ಲಾ ಸಂಘದೊಂದಿಗೆ ಸಮಸ್ಯೆಗೆ ಸ್ಪಂದಿಸಿದ್ದಾರೆ .
ಸಂಕಷ್ಟದಲ್ಲಿದ್ದ ಜನರ ಸಮಸ್ಯೆ ಬಗ್ಗೆ ಜಿಲ್ಲಾ ಸಂಘವು ಗಮನಕ್ಕೆ ತಂದಾಗ ಸಹಕರಿಸಿದ ಜಿಲ್ಲಾ ಉಸ್ತುವಾರಿ ಮಂತ್ರಿ ಸಿಟಿ ರವಿ ಹಾಗೂ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಜಿಲ್ಲಾ ಸಂಘವು ಕೃತಜ್ಞತೆ ಸಲ್ಲಿಸುತ್ತದೆ .
ಜಿಲ್ಲೆಯಲ್ಲಿ ಗಂಭೀರ ಸಮಸ್ಯೆಗಳಿದ್ದರೆ ಸಾರ್ವಜನಿಕರು ಜಿಲ್ಲಾ ಸಂಘಕ್ಕೆ ದೂರು ಸಲ್ಲಿಸಬಹುದಾಗಿದೆ
ಸುದ್ದಿಗಾರ ರಾಜಶೇಖರ್
94483 64949