
ಅಮೀನಗಡ :
ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ ಶಾಸಕರು ಹಾಗೂ ಉಪಾಧ್ಯಕ್ಷರು ಕೆಪಿಸಿಸಿ ಸನ್ಮಾನ್ಯ ಶ್ರೀ ಡಿ ಆರ್ ಪಾಟೀಲ ಅವರು ಅನಾವರಣ ಮಾಡಿದರು.
ಸಭೆಯ ಉಪಸ್ಥಿತಿ ವಹಿಸಿ ಮಾತನಾಡಿದ ಅವರು ಮಹಾತ್ಮಗಾಂಧಿಜಿಯವರಿಂದ ನಾನು ಪ್ರಭಾವಿತನಾಗಿದ್ದೇನೆ, ಅವರ ಅಹಿಂಸಾವಾದಿ ತತ್ವಗಳನ್ನು ಮೈಗೂಡಿಸಿಕೊಂಡು ನೋಡಿ ಜೀವನದ ನಿಜವಾದ ಸಂತೋಷ ತನ್ನಿಂದ ತಾನೆ ಬರುತ್ತದೆ,
ಪ್ರತಿಯೊಬ್ಬರು ಕ್ಷಮಾಗುಣವನ್ನು ಒಂದು ಸಲ ಜೀವನದಲ್ಲಿ ಅಳವಡಿಸಿಕೊಂಡು ನೋಡಿ ಆಗ ಯಾವುದೇ ಭಯ,ನಮಗೆ ಇರುವುದಿಲ್ಲ, ಎದುರಾಳಿ ಎಷ್ಟೇ ತಪ್ಪು ಮಾಡಿದರು ಒಂದು ಸಲ ನಗುತ್ತಾ ಅವರೊಂದಿಗೆ ಬೆರೆತು ನೋಡಿ ಆಗ ನಮಗೆ ಕ್ಷಣಿಕ ಏನೋ ಮುಜುಗರ ಅನಿಸಬಹುದು ದ್ವೇಷದಿಂದ ಏನೂ ಸಾಧಿಸಲು ಸಾಧ್ಯವಿಲ್ಲ, ನಾವು ಒಬ್ಬರನ್ನೊಬ್ಬರನ್ನು ಜಾತ್ಯಾತೀತವಾಗಿ ಗೌರವಿಸಬೇಕು
ಸಮಾಜದಲ್ಲಿ ಅದರ ಮೌಲ್ಯ ಯಾವಾಗಲೂ ಹೆಚ್ಚುತ್ತದೆ, ಎಂದು ಗಾಂಧಿಯವರ ಆದರ್ಶಗಳನ್ನು ನಾವು ಮೈಗೂಡಿಸಿಕೊಂಡು ಅವರು ನಡೆದಾಡಿದ ಈ ನಾಡಲ್ಲಿ ಹುಟ್ಟಿದ್ದು ನಾವೆ ಪುಣ್ಯವಂತರು ಎಂದರು.

ಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕರು, ಜಿಲ್ಲಾ ಅಧ್ಯಕ್ಷರು, ಕೆಪಿಸಿಸಿ ಬಾಗಲಕೋಟೆ, ಸನ್ಮಾನ್ಯ ಶ್ರೀ ಎಸ್ ಜಿ ನಂಜಯ್ಯನಮಠ ಅವರು ಮಾತನಾಡಿ ನಾನು ಕೂಡ ಜೀವನದಲ್ಲಿ ಒಂದು ಕೆಟ್ಟ ಹವ್ಯಾಸ ನನಗೂ ಇತ್ತು ಅದು ಎಂದರೆ ಯಾವಾಗಲಾದರೂ ಒಂದು ಸಲ ಸಿಗರೆಟ್ ಸೇಯುತ್ತಿದ್ದೆ ಒಂದು ಸಲ ನಮ್ಮ ಚಿತ್ತರಗಿಯ ಪರಮ ಪೂಜ್ಯ ಮಹಾಂತ ಸ್ವಾಮಿಗಳು ದುಶ್ಚಟ ಏನೆ ಇದ್ದರು ಬಿಟ್ಟು ಬಿಡಿ ಅದನ್ನು ನಮ್ಮ ಮಹಾಂತ ಜೋಳಿಗೆಗೆ ಹಾಕಿ ಎಂದಾಗ ನಾನೂ ಕೂಡ ಸಿಗರೆಟ್ ಹಾಕಿ ಬಿಟ್ಟೆ.

ಕೆಲವು ದಿನಗಳ ನಂತರ ಆಕಸ್ಮಿಕವಾಗಿ ಮರೆತು ಸಿಗರೆಟ್ ಸೆದು ಬಿಟ್ಟೆ ಆ ನಂತರ ನಾನು ಪೂಜ್ಯರಿಗೆ ಪತ್ರ ಬರೆದು ಕ್ಷೆಮೆ ಕೊರಿದೆ ,ಇಂದು ನಮ್ಮ ಡಿ ಆರ್ ಪಾಟೀಲ ಅವರಿಂದ ಸಾಕಷ್ಟು ವಿಷಯಗಳನ್ನು ನಾನೂ ತಿಳಿದುಕೊಂಡೆ ಈ ಸಂದರ್ಭದಲ್ಲಿ ನಾನು ಕೂಡ ಅವರಿಗೆ ಮಾತು ಕೊಡತಿನಿ ಕೆಲವೆ ದಿನಗಳಲ್ಲಿ ಮತ್ತೆ ಆರಂಬಿಸಿದ ಈ ಸಿಗರೆಟ್ ಹವ್ಯಾಸವನ್ನು ಕ್ರಮೇಣವಾಗಿ ಬಿಟ್ಟು ಬಿಡುತ್ತೆಂದು ನಗೆ ಚಾಟಿ ಬಿಸಿದರು, ಈ ಸಂದರ್ಭದಲ್ಲಿ ಡಿಸೆಂಬರ್ ೩೧ ರಂದು ಪ್ರತಿ ವರ್ಷ ಎಸ,ಜಿ,ನಂಜಯ್ಯನಮಠ ಅವರ ಹುಟ್ಟು ಹಬ್ಬದ ಪ್ರಯುಕ್ತ ಕಡು ಬಡವರಿಗೆ ಕಣ್ಣಿನ ತಪಾಸಣೆ ಮಾಡಿ ಅವರಿಗೆ ಉಚಿತ ಕಣ್ಣಡಕವನ್ನು ವಿತರಿಸಲಾಗುತ್ತದೆ.
ಅಂದು ವಿತರಿಸಬೇಕಾದ ಆ ಕನ್ನಡಕವನ್ನು ಇಂದು ಮಾಜಿ ಶಾಸಕರಾದ ಡಿ,ಆರ್ ಪಾಟೀಲ ಅವರು ಕಣ್ಣಡಕವನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಕಿ ಮಾಜಿ ಎಪಿಎಮ್ಸಿ ಅಧ್ಯಕ್ಷರಾದ ಹಿರಿಯ ಮುಖಂಡರಾದ ಗುರಣ್ಣವರ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ ಪಿಡ್ಡಪ್ಪ ಕುರಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಹೆಮಾನಸಾಬ ದೊಡಮನಿ, ಕೆ,ಎಸ್,ಗೌಡರ್,ದುರಗಪ್ಪ ಹೊಸಮನಿ, ಅಜ್ಮೀರ ಮುಲ್ಲಾ, ತುಕಾರಾಮ ಪವಾರ್, ಎಚ,ಎನ್ ಮಾಚಾ ಉಪಾಧ್ಯಕ್ಷರು ಗಾ,ಪ,ಸ, ಹಾಗೂ ಬಸಪ್ಪ ಕತ್ತಿ, ಅದ್ಯಕ್ಷರು,ಪಿಕೆಪಿಎಸ್, ಹಾಗೂ ಗ್ರಾಮದ ವಿವಿಧ ಸಂಸ್ಥೆಯ ಪ್ರಮುಖರು ಉಪಸ್ಥಿತಿ ಇದ್ದರು

