Breaking News

ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಣೆ, ಸರಳ ವಿಸರ್ಜನೆ ಕಾರ್ಯಕ್ರಮ ಮೂಲಕ ಮಾದರಿಯಾದ ಕಬ್ಬರಗಿ ಯುವಕರು

ಕುಷ್ಟಗಿ: ಹೌದು ತಾಲೂಕಿನ ಕಬ್ಬರಗಿ ಗ್ರಾಮದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ರಾಜ್ಯ ಸಂಚಾಲಕರಾದ
ಶ್ರೀಯುತ ಯಲ್ಲು ತೇಜಿ,ಅವರ ಸಾರಥ್ಯದಲ್ಲಿ ಗ್ರಾಮದ ಹಾಲುಮತ ಸಮಾಜದ ವತಿಯಿಂದ ಭವಣದಲ್ಲಿ ಇಂದು ಸರಳವಾಗಿ ಒಂದು ದಿನದ ಮಟ್ಟಿಗೆ ತರುಣರು ಸೇರಿ ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಿ ಅದ್ದೂರಿತನದಲಿ ಸರಳವಾಗಿ ಗ್ರಾಮಕ್ಕೆ ಮಾದರಿಯಾಗಿ ಇಂದು ಸಾಯಂಕಾಲ ೭ಗಂ, ಸುಮಾರಿಗೆ ಗಣಪತಿಯನ್ನು ವಿಸರ್ಜಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಕಾಯಿತು.

ಈ ಬಗ್ಗೆ ಮಾತನಾಡಿದ ರಾಜ್ಯ ಸಂಚಾಲಕ ಶ್ರೀ ಯಲ್ಲು ಅವರು ಸರಕಾರ ಕೋವಿಡ್ (೧೯) ನಿಯಮಾನುಸಾರ ನಮಗೆ ಭವಣದಲ್ಲಿ ಅನುಮತಿ ಕೊಟ್ಟಿತ್ತು ಕಳೆದ ವರ್ಷ ನಾವು ಅದ್ದೂರಿಯಾಗಿ ಐದು ದಿನ ಹಬ್ಬ ಆಚರಿಸಿ ಭಾವೈಕ್ಯತೆಯಿಂದ ಜಾತಿ ಬೇದ ಮರೆತು ಆಚರಿಸಿದ್ದೆವು ಆದರೆ ಕರೋನ ಪ್ರಕರಣಗಳು ದಿನೇ, ದಿನೇ ಎಚ್ಚುತ್ತಿರುವುದರಿಂದ ಸರಕಾರ ಸಾರ್ವಜನಿಕ ಇಂತಹ ಕಾರ್ಯಕ್ರಮಗಳ ಮೂಲಕ ಕರೋನಾಗೆ ಕಡಿವಾನ ಹಾಕಿದ್ದು ಸ್ವಾಗರ್ತಾ ಆದರೆ ಈ ವರ್ಷ ಹಬ್ಬ ಕಳೆ ಕಳೆಟ್ಟಿಲ್ಲ ಆ ಗಣಪತಿ ಈ ಕೆಟ್ಟ ಮಹಾ ಮಾರಿ ಕರೋನ ರೋಗ ಸಂಹಾರ ಮಾಡಿ ಜಗತ್ತನ್ನು ಕಾಪಾಡಲಿ ಎಂದರು.
ಈ ವಿಸರ್ಜನೆ ಕಾರ್ಯಕ್ರಮದಲ್ಲಿ ಶ್ರೀ ಯಲ್ಲು ಜೇಜಿ, ಹಾಗೂ ಮಲ್ಲಪ್ಪ ವಜ್ಜಲ,ಮಂಜು,ನಂದ್ಯಾಳ, ಮಂಜು,ಕುರಿ, ಸಂಘದ ಅನೇಕ ಯುವಕರು ಹಾಗೂ ಹಾಲುಮತ ಸಮಾಜದ ಗುರು ಹಿರಿಯರು ಉಪಸ್ಥಿತಿ ಇದ್ದರು.

About vijay_shankar

Check Also

ಸಂಪತಕುಮಾರನಿಗೆ ೬ ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ಕೋರಿದ ರಮೇಶ ವಾಯ್ ಭಜಂತ್ರಿ.

ಶ್ರೀ ರಮೇಶ ಯಲ್ಲಪ್ಪ ಭಜಂತ್ರಿ ಜಿಲ್ಲಾ ಸಮಿತಿ ಸದಸ್ಯರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ಹಾಗೂ ಅಧ್ಯಕ್ಷರು/ ಸಂಸ್ಥಾಪಕರು, ಪ್ರೀತಮ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.