ಭಾರತ ದೇಶದ ಕಾನೂನನ್ನು ನಾವು ಗೌರವಿಸಬೇಕು ನ್ಯಾಯವಾದಿ ರಮಜಾನ್ ನದಾಫ್
ಅಮೀನಗಡ : ಈ ದೇಶದ ಕಾನೂನನ್ನು ನಾವು ಏನೂ ಎಂಬುದನ್ನು ಮೊದಕು ನಾವು ಅರ್ಥ ಮಾಡಿಕೊಳ್ಳಬೇಕು ಈ ಸಮಾಜದಲ್ಲಿ ಯಾರೂ ದೇಶ ವಿರೋಧಿ ಹಾಗೂ ಸಮಾಜ ವಿರೋದಿ ಸಂದೇಶಗಳನ್ನು ಜಾಲತಾನ ಮೂಲಕ ಹರಿಬಿಡೊದು ತಪ್ಪು ಭಾರತದ ನೆಲದಲ್ಲಿ ಅನೇಕ ಧರ್ಮದ ಅನೇಕ ರೀತಿಯ ಸಾಮಾನ್ಯ ಕಾನೂನುಗಳು ಇವೆ ಅವುಗಳ ಬಗ್ಗೆ ನಾವು ಮೊದಲು ತಿಳಿದುಕೊಂಡು ಉಲ್ಲಂಘನೆ ಮಾಡದಂತೆ ಈ ಸಮಾಜದಲ್ಲಿ ಭಾವೈಕ್ಯತೆಯಿಂದ ಕೂಡಿ ಬಾಳಬೇಕು ಮೊದಲು ನಮ್ಮ ಧರ್ಮವನ್ನು ಧರ್ಮದ ಉತ್ತಮ ಸಂದೇಶಗಳನ್ನು ನಾವು ಅರ್ಥ ಮಾಡಿಕೊಂಡಿರಬೇಕು ಆಗ ಮಾತ್ರ ನಾವು ಇತರರಿಗೆ ಉತ್ತಮ ಸಂದೇಶ ಹಾಗೂ ಮಾರ್ಗದರ್ಶನ ಮಾಡಲು ಸಾಧ್ಯ ಹಾಗೆ ಈ ಜಗತ್ದಿಗೆ ಒಂದು ಪುಟ್ಟ ರಾಷ್ಟ್ರ ಇಂಗ್ಲೆಂಡ್ ಕಾನೂನು ಅರಿವನ್ನು ಮೂಡಿಸುತ್ತದೆ. ಮೊಟ್ಟ ಮೊದಲು ಇಡೀ ವಿಶ್ವ ಇಂಗ್ಲೆಂಡ್ ನಂತಹ ಸಣ್ಣ ದೇಶದ ಕಾನೂನು ಹಾಗೂ ಅಲ್ಲಿನ ಜನರ ತಿಳುವಳಿಕೆ ಮೊಟ್ಟವನ್ನು ನಾವು ಮೆಚ್ಚಬೇಕು

,ಸುಮಾರು ೧೦೦ ವರ್ಷಗಳ ಹಿಂದೆ ಇವತ್ತಿನ ಅತ್ಯಾಧುನಿಕ ಮೈಕ್,ಸೌಂಡ್ ಲೇಸ್ ಮೈಕ್ ಅವರು ಉಪಯೋಗಿಸಿ ಬಿಟ್ಟಿದ್ದಾರೆ, ನಾವು ಇವುಗಳನ್ನು ಇತ್ತಿಚ್ಚಿಗೆ ಉಪಯೋಗ ಮಾಡುತ್ತಿದ್ದೇವೆ. ಎಂದು ಸೂಳೇಭಾವಿ ಗ್ರಾಮದ ಅಂಜುಮನ್ ಇಸ್ಲಾ ಕಮೀಟಿಯ ಶಾದಿ ಮಹಲ್ ನಲ್ಲಿ ಹಜರತ್ ಟಿಪುಸುಲ್ತಾನ್ ಯುತ್ ಕಮೀಟಿಯಿಂದ ಸಾಮಾನ್ಯ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯವಾದಿ ರಮ್ಮಜಾನ್ ನದಾಫದ ಅವರು ಮಾತಾಡಿದರು. ಈ ಸಂದರ್ಭದಲ್ಲಿ ರಾಜು ಮುಲ್ಲಾ, ಡಿ,ಬಿ,ವಿಜಯಶಂಕರ, ಈರಣ್ಣ ಬಡಿಗೇರ, ಅನೇಕರು ಸಲಹೆ ನೀಡಿದರು, ಈ ಸರಳ ಸಮಾರಂಭದಲ್ಲಿ ಸಮಾಜದ ಹಿರಿಯರಾದ ಶ್ರೀ ಆದೀಮಸಾಬ ತಂಗಡಗಿ,ಮೈನುದಿನ್ನ್ ಮುದ್ದೇಬಿಹಾಳ, ಖಾಜಾವಲಿ ಮುಲ್ಲಾ,ಮೌಲಾಲಿ ಮುಲ್ಲಾ,ರಾಜು ನದಾಫ್ ,ಮೈಬೂಬ , ಶಕೇಲಿ,ಮಲಿಕಸಾಬ ಬೂವಾಜಿ,ಖಾಸೀಮಸಾಬ ಬೂದಿಹಾಳ,ನಭಿಸಾಬ ಮಾಗಿ,ಜಹಾಂಗೀರ್ ಜಾಗೀರದಾರ್, ಡಿ,ಬಿ,ವಿಜಯಶಂಕರ್, ನ್ಯಾಯವಾದಿಗಳಾದ ನಭಿ ತಹಶಿಲ್ದಾರರ, ಈರಣ್ಣ ಬಡಿಗೇರ ಹಾಗೂ ಹಜರತ್ ಟಿಪ್ಪುಸುಲ್ತಾನನ ಯುತ್ ಕಮಿಟಿಯ ಸರ್ವ ಸದಸ್ಯರು ಉಪಸ್ಥಿತಿ ಇದ್ದರು. ಕೊನೆಯಲ್ಲಿ ನ್ಯಾಯವಾದಿ ಶ್ರೀ ರಮ್ಮಜಾನ್ ನದಾಫ್ ಹಾಗೂ ನಭಿ ತಹಶಿಲ್ದಾರರ ಅವರಿಗೆ ಗೌರವ ಸನ್ಮಾನ ಮಾಡಿದರು.