
ಗುಡೂರುsc : ರಾಜ್ಯಾದ್ಯಂತ ಕುರುಬರ ಸಂಘಟನೆಯು ಜೋರಾಗಿ ಸದ್ದಿಲ್ಲದೆ ಸಮಾಜದ ಬಲವರ್ಧನೆ ಮಾಡುತ್ತಿದೆ,ಕರ್ನಾಟಕ ಪ್ರದೇಶ ಕುರುಬರ ಸಂಘದ ಸಂಘಟನೆಯನ್ನು ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದಲ್ಲಿ ಮೊಟ್ಟಮೊದಲ ಬಾರಿಗೆ ಗ್ರಾಮದಲ್ಲಿ ಗ್ರಾಮ ಘಟಕದ ಸಂಘಟನೆಗೆ ಚಾಲನೆ ನೀಡಲಾಯಿತು.ಗ್ರಾಮ ಘಟಕದ ಸಂಘಟನೆಯ ಅಧ್ಯಕ್ಷರಾಗಿ ಶ್ರೀ ಮಾಂತುಗೌಡ ಪಿ ಗೌಡರ ಇವರನ್ನು ಗ್ರಾಮ ಘಟಕದ ಅಧ್ಯಕ್ಷರಾಗಿ ಆಯ್ಕೆ (9686072591)ಮಾಡಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಈ ಸಂಘಟನೆಯ ಮಹಿಳಾ ರಾಜ್ಯ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಪಾಟೀಲ ಅವರು ನಮ್ಮ ಕುರುಬ ಸಮಾಜ ಈಗ ರಾಜ್ಯದಲ್ಲಿ ಎಲ್ಲಾ ಸಂಘಸಂಸ್ಥೆಗಳು, ರಾಜಕೀಯ ,ಹೋರಾಟ, ತಲೆ ತಲೆ ಮಾರುಗಳಿಂದ ಅನ್ಯಾಯದ ವಿರುದ್ದ ಹೋರಾಡಿದ ರಕ್ತ ನಮ್ಮದು ಅದರಂತೆ ಇವತ್ತು ಸಂಗೊಳ್ಳಿ ರಾಯಣ್ಣ ಇತಿಹಾಸದ ಪುಟ ಸೇರಿದ್ದಾರೆ, ನಾವು ಇಂದು ನಮ್ಮ ಜನಾಂಗದ ಸಮಗ್ರ ಅಭಿವೃದ್ಧಿ ಹಾಗೂ ಒಗ್ಗಟ್ಟಿನಿಂದ ಇತರೆ ಸಮಾಜದ ಬಾಂದವರ ಜೊತೆಗೆ ಸವಾರ್ಧಯುತ ಬದುಕು ಸಾಗಿಸಬೇಕಾಗಿ,ಗ್ರಾಮದಲ್ಲಿ ಶಾಂತಿ,ಮತ್ತು ಸಹ ಬಾಳ್ವೆಯಿಂದ ಬದುಕಬೇಕಾಗಿದೆ, ದೇಶದಲ್ಲಿ ಶೇಖಡಾ: ೧೦೦ಕ್ಕೆ ೯೦ ರಷ್ಟು ನಮ್ಮ ಜನಾಂಗದ ಬಡ ರೈತರು ಇವತ್ತು ತಮ್ಮ ತಮ್ಮ ಮನೆ,ಹೊಲ,ಗದ್ದೆಗಳಿಗಾಗಿ ಕೋರ್ಟ್ ಕಚೇರಿ ಎಂದು ಅಲೆದಾಟುತ್ತಿದ್ದಾರೆ,ಅವರಿಗೆ ಯಾವ ಸಂಘಟನೆಯ ನೇರಿವು ಇಲ್ಲ,ಕಾನೂನು ತಿಳುವಳಿಕೆಯ ಕೊರತೆ,ಸಕಾಲಕ್ಕೆ ಅವರಿಗೆ ಬುದ್ದಿ ಹೇಳಿ ಅದನ ತಡೆಯುವ ಬುದ್ದಿವಂತ ಯುವಕರು,ಸಮಾಜದ ಕಾಳಜಿ ಇರುವ ಯುವ ಪಡೆ ಇವತ್ತು ನಮ್ಮ ಸಮಸಜದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವ ಯುವಕರು ಮುಂದೆ ಬರಬೇಕು ಅವಾಗ ಮಾತ್ರ ನಮ್ಮ ಸಮಾಜ ಎಧದೇಳಲು ಸಾಧ್ಯ ಎಂದರು ,ಈ ದಿಸೆಯಲ್ಲಿ ಇವತ್ತು ಈ ಗ್ರಾಮದ ನಮ್ಮ ಜನಾಂಗದ ಏಳಿಗೆಗಾಗಿ ಕೆಲಸ ಮಾಡಲು ಮಾಂತುಗೌಡ ಗೌಡರ ಅವರನ್ನು ಆಯ್ಕೆ ಮಾಡಿದ್ದೇವೆ ಎಲ್ಲಾ ನಮ್ಮ ಯುವಕರು,ಸಮಾಜದ ಹಿರಿಯರು ಎಲ್ಲರೂ ಒಗ್ಗಟ್ಟಾಗಿ ಬದುಕಿ ಇತರೆ ಜನಾಂಗವನ್ನು ಗೌರವದಿಂದ ಕಂಡು ಸಮಾಜದ ಅಭಿವೃದ್ಧಿಗೆ ತಮ್ಮ ಸಹಕಾರ ನೀಡಬೇಕು ಎಂದು

ಗ್ರಾಮ ಘಟಕವನ್ನು ಉದ್ಘಾಟನೆ ಮಾಡಿದರು.ಜಿಲ್ಲಾ ಅಧ್ಯಕ್ಷರಾದ ಬಸುವರಾಜ ಅಲ್ಪಿ ಮಾತನಾಡಿ ನಮ್ಮ ಸಮಾಜದ ಒಗ್ಗಟ್ಟಿಗೆ ನಾವು ಶ್ರಮಿಸಬೇಕು ನಮ್ಮವರೆ ನಮ್ಮ ಜನಾಂಗದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ಸಿ ಎಂ ಆಗಬೇಕು ಅಂದರೆ ನಾವು ಜಾಗೃತರಾಗಬೇಕು,ನಮ್ಮ ನಮ್ಮಲ್ಲಿ ರಾಜಕೀಯ ಜಗಳ ಹಚ್ಚುವ ಅನೇಕ ಶಕುನಿಗಳು ನಮ್ಮ ಮದ್ದೆ ಇದ್ದಾರೆ ರಾಜಕಾರಣ ಎರಡು ದಿನದ ಹಬ್ಬ ಅಲ್ಲಿ ದ್ವೇಷ, ಸೇಡು ನಮ್ಮ ನಮ್ಮಲ್ಲಿ ಇರಬಾರದು ಮೊದಲು ಜಾತೀಯ ಅಭಿಮಾನ ಇರಬೇಕು,ಎಲ್ಲರೂ ಒಗ್ಗಟ್ಟಾಗಿ ಈ ಗ್ರಾಮದಲ್ಲಿ ಒಬ್ಬ ಯುವ ನಾಯಕನನ್ನು ಹುಟ್ಟಿ ಹಾಕಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾದಾನ ಕಾರ್ಯದರ್ಶಿ ಶ್ರೀ ಮೈಲಾರಪ್ಪ ತುಂಬದ ಮಾತನಾಡಿ ಈ ವಡಗೇರಿ ಗ್ರಾಮ ನಮ್ಮ ಜಿಲ್ಲೆಯಲ್ಲಿಯೇ ಒಗ್ಗಟ್ಟಿಗೆ ಹೆಸರು ವಾಸಿಯಾಗಿದೆ,ಪ್ರತಿ ವರ್ಷ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ಗ್ರಾಮದಲ್ಲಿ ಸಾಮೂಹಿಕ ಮದುವೆ ಮಾಡಿ ಈಗ ನೂರಾರು ಮಂದಿಗೆ ನಮ್ಮ ಸಮಾಜ ನೆರಳಾಗಿದೆ,ಮುಂದೆನೂ ಕೂಡ ಹೀಗೆ ನಮ್ಮ ಸಮಾಜ ರಾಜ್ಯಾದ್ಯಂತ ಸಮಾಜ ಒಗ್ಗಟ್ಟಾಗಬೇಕು,ಸಮಾಜದ ಆರ್ಥಿಕತೆಯು ಹೆಚ್ಚಾಗಬೇಕು,ಸಮಾಜದ ಸಮಗ್ರ ಅಭಿವೃದ್ಧಿಗೆ ಯುವಕರು ಮುಂದೆ ಬರಬೇಕು,ಪ್ರತಿ ಗ್ರಾಮ,ಹಳ್ಳಿ ಹಳ್ಳಿಯಲ್ಲಿ ನಮ್ಮ ಕರ್ನಾಟಕ ಪ್ರದೇಶ ಕುರುಬರ ಸಂಘದ ಯುವ ಪಡೆ ಹುಟ್ಟಬೇಕು ಎಂದರು,

ಈ ಸಂಧರ್ಭದಲ್ಲಿ ಸಂಘದ ನೂತನ ಅನೇಕ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವಡಗೇರಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಗ್ರಾಮ ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ನೇಮಕ ನಡೆಯಿತು. ಈ ವೇಳೆ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಬ ಪೊಲೀಸ ಪಾಟೀಲ ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಬಸವರಾಜ ಹಲ್ಪಿ ತಾಲೂಕ ಅಧ್ಯಕ್ಷರಾದ ಹುಲ್ಲಪ್ಪ ಹಾವರಗಿ ಹಾಗೂ ಬಾಗಲಕೋಟೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಮೈಲಾರಪ್ಪ ತುಂಬದ,ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಶ್ರೀ ಮಂಜುನಾಥ ನಾಲಗಾರ,ಕುಷ್ಟಗಿ ತಾಲೂಕ ಅದ್ಯಕ್ಷರಾದ ಶ್ರೀ ಶಂಕರ ಉಪನಾಳ ,ಶ್ರೀ ಮುತ್ತಣ್ಣ ಹಂಡಿ ಹಾಗೂ ವಡಗೇರಿ ಗ್ರಾಮದ ಗುರು ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.