
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಆಡಳಿತದ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ,ಹೌಡು ಇಂದು ಇಡಿ ಗ್ರಾಮದ ಜನತೆ ತಲೆ ತಗ್ಗಿಸುವಂತಾಗಿದೆ ಸಾರ್ವಜನಿಕರ ಹೇಳಿಕೆ ಪ್ರಕಾರ ೩೨ ಲಕ್ಷ ರೂಪಾಯಿ ಪಾವತಿ ಮಾಡದೇ ಇದ್ದುದ್ದಕ್ಕಾಗಿ ಇಂದು ಮಧ್ಯಾಹ್ನ ಸಾರ್ವಜನಿಕ ಬಿದಿ ದೀಪಗಳನ್ನು ಸ್ಥಗಿತ ಮಾಡಲಾಗಿದೆ. ಇದರಿಂದ ಪ್ರತಿ ದಿನ ಜನ ಜಂಗುಳಿಯಿಂದ ಇರುತ್ತಿದ್ದ ಬಜಾರ ಕತ್ತಲೆಯಿಂದ ಮೌನವಾಗಿದೆ. ಈ ಬಗ್ಗೆ ಜನ ಪ್ರತಿನಿಧಿಗಳ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಷ್ಠಿತ ಮಾಜಿ ಶಾಸಕರ ಗ್ರಾಮ , KHDC ನಿಗಮ ಮಂಡಳಿ ಮಾಜಿ ಅಧ್ಯಕ್ಷರ ಗ್ರಾಮ ಇಂತಹ ಪ್ರತಿಷ್ಠಿತ ದಿಗ್ಗಜ ನಾಯಕರ ಗ್ರಾಮದಲ್ಲಿ ಇಂದು ಇಡಿ ಗ್ರಾಮ ಕತ್ತಲೆಯನ್ನು ನೋಡುವಂತಾಗಿದೆ. ಸ್ಥಳಿಯ ಭಾವೈಕ್ಯತ ವಾಟ್ಸ್ ಆಫ್ ಗೃಫ್ ನಲ್ಲಿ ಈ ಬಗ್ಗೆ ಕಾಮೆಂಟ್ ಗಳ ಸುರುಮಳಿ ಪ್ರಾರಂಭವಾಗಿದೆ ,

ಇಂತಹ ವ್ಯವಸ್ಥೆ ಗ್ರಾಮದಲ್ಲಿ ಎಂದು ಜನ ಕಂಡಿರಲಿಲ್ಲ ಇಂದು ನೋಡುವಂತವಾಗಿದೆ ಮೊದಲೆ ಗ್ರಾಮದಲ್ಲಿ ರಸ್ತೆ ಗುಂಡಿಗಳು, ತಗ್ಗು ,ರಸ್ತೆ ತಡೆ ಇರುವುದರಿಂದ ಜನತೆಗೆ ಓಡಾಡುವುದು ಕಷ್ಟವಾಗಿದೆ.ಈ ಬಗ್ಗೆ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಗಮನ ಹರಿಸಬೇಕಿತ್ತು ಇವರ ನಿರ್ಲಕ್ಷ್ಯತನದಿಂದ ಗ್ರಾಮ ಕತ್ತಲಾಗಿದೆ,ಈ ಬಗ್ಗೆ ಅಭಿವೃದ್ಧಿ ಅಧಿಕಾರಿ ಎಮ್,ಎ,ದಖನಿ ಅವರನ್ನು ದೂರವಾಣಿ ಮೂಲಕ ಕೇಳಿದಾಗ ಸರ್ ಯಾಕೆ ಈ ವ್ಯವಸ್ಥೆ ಎಂದಾಗ ಇಲ್ಲ ನಾಳೆ ಸರಿ ಪಡೆಸುತ್ತೇವೆ,ಜಿಲ್ಲೆಯಾದ್ಯಂತ ಈ ವ್ಯವಸ್ಥೆ ಇದೆ ನಮ್ಮ ಪಕ್ಕದ ಗ್ರಾಮ ಪಂಚಾಯತಿಗಳಾದ ಐಹೊಳೆ, ಅಮರಾವತಿ, ರಕ್ಕಸಗಿ, ಹೂವಿನಹಳ್ಳಿ, ವಿವಿಧ ಗ್ರಾಮದಲ್ಲಿ ನಿನ್ನೆ ವಿದ್ಯುತ್ ಇಲ್ಲ ಎಂದರು, ಸ್ವಾಮಿ ಅಭಿವೃದ್ಧಿ ಅಧಿಕಾ ರಿಗಳೇ, ಬೇರೆಯವರ ಉಸಾಬರಿ ನಮಗೆ ಬೇಡ ೧೫ನೇ ಹಣಕಾಸಿನಲ್ಲಿ ಹಣ ಇದ್ದರೂ ಬಿಲ್ ಯಾಕೆ ಕಟ್ಟಿಲ್ಲ ಮೊದಲು ಅದನ ಹೇಳಿ ? ಸರ್ ನಿಮ್ಮ ನಿರ್ಲಕ್ಷ್ಯತನದಿಂದ ಗ್ರಾಮ ಕತ್ತಲಾಗಿದೆ, ಜನ ತಮ್ಮ ನಿತ್ಯದ ಕೆಲಸಗಳಿಗೆ ಕೊತಾ ಬಿದ್ದಿದೆ , ಇಂತಹ ವ್ಯವಸ್ಥೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಿ,ಇಲ್ಲವಾದರೆ ಮುಂದೆ ಜನಾನೆ ತಕ್ಕ ಉತ್ತರ ನೀಡುತ್ತಾರೆ. ಈ ಬಗ್ಗೆ ಶಾಖಾ ಅಧಿಕಾರಿ ಮ್ಯಾಗೇರಿ ಅವರು ಸಾರ್ವಜನಿಕ ಪ್ರಕಟನೆ ನೀಡಿ ವಿದ್ಯುತ್ ಕಡಿತ ಮಾಡಬೇಕು ಈ ತರ ಏಕಾಕೆಕಿ ಸ್ಥಗಿತ ಮಾಡಬಾರದು ಎರಡು ದಿನ ರಜೆ ಇರುವುದರಿಂದ ಬಿಲ್ ತಡವಾಗಿದೆ ನಾಳೆ ಒಂದು ದಿನ ತಡೆದು ವಿಚಾರಿಸಿ ಬಿಲ್ ಮಾಡದೇ ಇದ್ದಾಗ ಕಟ್ ಮಾಡಬಹುದು ಇತ್ತು ಆದರೆ ಅಧಿಕಾರಿಗಳ ಇಂತಹ ಮುರ್ಖತನದ ನಿರ್ಧಾರಗಳಿಂದ ಜನ ಸಾಮಾನ್ಯರಿಗೆ ಎಷ್ಟು ತೊಂದರೆ ಆಗುತ್ತೆ ಅನ್ನೊದನ್ನು ಅಧಿಕಾರಿಗಳು ಅರ್ಧ ಮಾಡಿಕೊಳ್ಳಬೇಕು. ಎಂಬುದು ಬುದ್ದಿವಂತರ ಅಭಿಪ್ರಾಯ.