ಹನಮನಾಳ : ಸಾರ್ವಜನಿಕ ಸಂಘ ಸಂಸ್ಥೆಗಳು ಯಾವಾಗ ಹೇಗೆ ಯಾವ ಸ್ಥಿತಿ ತಲುಪುತ್ತವೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ ಕಳೆದ ಐದು ವರ್ಷಗಳ ಹಿಂದಿನ ಆಡಳಿತಕ್ಕೆ ಹೂಲಿಸಿದರೆ ಸಂಪೂರ್ಣ ನಷ್ಟದಲ್ಲಿದ್ದ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿ ಹೊಗಿದ್ದ ಸಂಘ ಯಾವತ್ತು ರೈತರಿಗೆ ಸರಿಯಾಗಿ ಸಾಲ ನೀಡದೆ ಸಂಸ್ಥೆಯ ಸ್ಥಿತಿ ಇಡೀ ಊರ ಜನತೆ ರೈತರು ಸಂಘದ ಕಡೆ ತಿರುಗಿ ನೋಡಿದಂತೆ ಮಾಡಿದ್ದ ಸಂಸ್ಥೆಯ ಕಾರ್ಯದರ್ಶಿ ದಿ: ಸಿದ್ದರಾಮಯ್ಯ ಶಾಸ್ತ್ರಿ ಹಿರೇಮಠ ಅವರು ತಿಂದು ತೆಗಿ ಸಂಪೂರ್ಣ ಸಂಘವನ್ನು ಮುಚ್ಚಿ ಸಂಘದ ಕಾರ್ಯಾಲಯವನ್ನು ತನ್ನ ಸ್ವಂತ ಮನೆ ಮಾಡಿ ಕೊಂಡು ಅಲ್ಲಿಯೇ ವಾಸವಿದ್ದು.
ಬಹುಶಃ ಅಲ್ಲಿನ ಯಾವ ಒಬ್ಬ ರೈತರೂ ಸಹ ಈತ ಜೀವಿತಾ ಅವಧಿವರೆಗೊ ಯಾರೂ ಇತನ ಭ್ರಷ್ಟಾಚಾರದ ಕರಿತು ಧ್ವನಿ ಎತ್ತಿರಲಿಲ್ಲ ಆತ ನಿವೃತ್ತಿ ಹೊಂದಿ ಈಗ ಮರಣ ಹೊಂದಿದ್ದಾರೆ. ಈತನ ಜೊತೆ ಈ ಸಂಸ್ಥೆಯು ಸಹ ಮಣ್ಣಾಗುವಷ್ಠರಲ್ಲಿ ಪ್ರಜ್ಞವಂತ, ವಿದ್ಯಾವಂತ, ಚಾಣಕ್ಯ ಈ ಸಂಘದ ಅಧ್ಯಕ್ಷನಾಗಿದ್ದ ಆತನ ಮುಂಜಾಗ್ರತ ಕ್ರಮದಿಂದ ಇಂದು ಮುಳುಗಿ ಹೋಗಬೇಕಿದ್ದ ಸಂಸ್ಥೆ ಮತ್ತೆ ರೈತರ ಮುಖದಲ್ಲಿ ಮಂದಹಾಸ ಬಿರುತವಂತೆ ಮಾಡಿದೆ.
ಹೌದು ಕುಷ್ಟಗಿ ತಾಲೂಕಿನ ಜಹಗೀರ ಗುಡದೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಮಹಾಂತೇಶ.ಜಿ, ಹವಾಲ್ದಾರ್ ಅವರ ಧಕ್ಷ ಹಾಗೂ ಪ್ರಾಮಾಣಿಕ ಸೇವಾ ಕಾರ್ಯದ ದಕ್ಷತೆಗೆ ರೈತರು ಜೈಕಾರ ಹಾಕುತ್ತಿದ್ದಾರೆ,

ಉತ್ತಮ ಕೆಲಸ ರೈತರಿಗೆ ಸಕಾಲಕ್ಕೆ ಸಾಲ ನೀಡಿ ಈ ಸಂಸ್ಥೆಯಿಂದ ರೈತರಿಗೆ ವಿವಿಧ ಸಾಲ ಸೌಲಭ್ಯಗಳು ಸಿಗಬಹುದು ಎಂದುಕೊಂಡಿದ್ದ ರೈತರಿಗೆ ಈ ಸಂಸ್ಥೆ ಇಂದು ನೇರಳಾಗಿದೆ, ಕಾರಣ ಈ ಸಂಘ ಪ್ರಾರಂಭವಾಗಿದ್ದರಿಂದ ಇಲ್ಲಿ ಒಕ್ಕರಿಸಿದ್ದ ಸಿದ್ದರಾಮಯ್ಯ ಶಾಸ್ತ್ರಿಗಳು ಎಲ್ಲವನ್ನು ಗುಡಿಸಿ ಗುಂಡಾಂತರ ಮಾಡಿದ್ದಲ್ಲದೆ, ಸಂಘದ ಕಾರ್ಯಲಯವೇ ಇವರ ಮನೆ ಮಾಡಿದ್ದ, ಇನ್ನು ಸ್ವಲ್ಪ ದಿನ ಬಿಟ್ಟಿದ್ದರೆ ಬಹುಶಃ ಆಎಲ್ಲಾ ಸಂಸ್ಥೆಯ ಆಸ್ತಿಯನ್ನು ಕೊಡ ಮಾರಿ ಬಿಡುತ್ತಿದ್ದರೂ ಎಂದು ರೈತರು ಆರೋಪ ಮಾಡುತ್ತಿದ್ದಾರೆ , ಈ ಸಂಧರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ಇಲ್ಲಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬಂದ ಶ್ರೀ ಸಂಗಮೇಶ ಗುಜ್ಜಲ್ ಅವರು ಸಮಯ ಸಾಧನೆಯಿಂದ ಇಂದು ನೂರಾರು ರೈತರ ಕೆಸಿಸಿ ಸಾಲ ಪಡೆದಿದ್ದಾರೆ, ಕನಿಷ್ಠ ಒಂದುವರೆ ಕೋಟಿ ರೂಪಾಯಿ ಹನಕಾಸಿನ ವ್ಯವಹಾರ ಹೊಂದಿದೆ, ಅಧ್ಯಕ್ಷರ ಉತ್ತಮ ಆಡಳಿತ ಹಾಗೂ ಅವರ ಸಂಪೂರ್ಣ ಸಹಕಾರದಿಂದ ಈಗ ಸಂಘವು ಉತ್ತಮ ಆರ್ಥಿಕ ಸ್ಥಿತಿಯಿಂದ ಸಾಲ ತಿರಿಸುತ್ತಾ ಚೇತರಿಸಿ ಕೊಳ್ಳುತ್ತಿದೆ.
ಬಿಡಿಆರ್ ಸಾಲ : ಸ್ಥಗೀತಗೊಂಡಿದ್ದು ಸದ್ಯದಲ್ಲಿ ಅದನ್ನೂ ಕೊಡ ರೈತರಿಗೆ ಸಾಲ ಕೊಡುವ ಯೋಜನೆ ರೂಪಿಸಲಾಗಿದೆ ಎಂದರು
ಕನಿಷ್ಠ 855 ಶೇರುದಾರನ್ನು ಹೊಂದಿರುವ ಈ ಸಂಘವು ಆಬಲಕಟ್ಟಿ, ತುಮರಿಕೊಪ್ಪ, ವೆಂಕಟಾಪೂರ, ಬುದಿಹಾಳ, ಮತ್ತು ಜಾ,ತಿಮ್ಮನಟ್ಟಿ ಪರಮನಟ್ಟಿ ಕೋನಾಪೂರ ಸೇರಿ ಒಟ್ಟು 08 ಹಳ್ಳಿ ಒಳಗೊಂಡ ಉತ್ತಮ ಸಂಘ ಇದಾಗಿದೆ. ಸದರಿ ಸಂಘಕ್ಕೆ ಇತರೆ ಯಾವುದೇ ಆದಾಯ ಇಲ್ಲ ಮುಂದಿನ ತಿಂಗಳು ಗೊಬ್ಬರ ಹಾಗೂ ರೇಶನ ವಿತರಿಸುವ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದು ಹಿಂದಿನ ಕಾರ್ಯ ದರ್ಶಿಯವರ ಆಡಳಿತಕ್ಕೆ ಬೇಸತ್ತ,
ಜನ ಸಂಘದ ಬಗ್ಗೆ ತಪ್ಪು ತಿಳಿಯಲಾಗಿದೆ, ಜನತೆಯು ಸಹ ಏನೇ ಸಮಸ್ಯೆ ಇರಲ್ಲಿ ಮುಂದೆ ಎಂದೂ ಸಹ ಆ ರೀತಿ ಆಗದಂತೆ ಎಚ್ಚರಿಕೆ ಜೊತೆ ಸಂಘದ ಏಳಿಗೆಗೆ ಅವೀರತ ಶ್ರಮ ಹಾಕುತ್ತಿದ್ದವೆ. ರೈತರ ನಿರಂತ ಸಹಕಾರ ನೀಡಬೇಕು ಸಂಘದ ಏನೇ ಸಮಸ್ಯ ಇದ್ದರೂ ನಮ್ಮ ಕಾರ್ಯದರ್ಶಿಗಳು ದಿನದ ಕೆಲಸದ ಸಮಯದಲ್ಲಿ ಬೆಳಗೆ ೧೦ ಘಂಟೆ ಯಿಂದ ಸಾಯಂಕಾಲ ವರೆಗೂ ಸಂಘದ ಕಾರ್ಯಾಲಯದಲ್ಲಿ ಇರುತ್ತಾರೆ, ತಮ್ಮ ಸಮಸ್ಯ ಹಾಗೂ ಪ್ರಶ್ನೆಗೆ ಸ್ಪಂದಿಸುತ್ತಾರೆ, ಇದು ಬರೀ ಸಂಘದ ಪ್ರತಿನಿಧಿಗಳಿಗೆ ಮಾತ್ರ ಸಂಸ್ಥೆಯ ಖಾಳಜಿ ಅಲ್ಲ ಇದು ಪ್ರತಿಯೊಬ್ಬ ರೈತರ ಆಸ್ತಿ ಈ ಸಂಘವನ್ನು ಎಲ್ಲರೂ ಸೇರಿ ಬೆಳೆಸಬೇಕು ಮುಂದಿನ ದಿನಮಾನದಲ್ಲಿ ಇದು ಸಾವಿರಾರು ರೈತರ ಮನೆ ಬೆಳಗೂ ದೀಪವಾಗಬೇಕು .
ಈ ಸಂಘದ ಸಮಗ್ರ ಅಭಿವೃದ್ಧಿಗೆ ನಾನು ಕಂಕಣ ಬದ್ದವಾಗಿ ಪ್ರಾಮಾಣಿಕ ಸೇವೆ ಮಾಡುತ್ತಿದ್ದೆನೆ, ಎಂದು ಸಂಘದ ಅಧ್ಯಕ್ಷ ಮಹಾಂತೇಶ ಹಾಗೂ ಕಾರ್ಯದರ್ಶಿ ಸಂಗಮೇಶ ಸಂಘದ ಸಮಗ್ರ ಕುಂಠಿತ ಹಾಗೂ ಅಭಿವೃದ್ಧಿ ವಿಚಾರವಾಗಿ ನಮ್ಮೊಂದಿಗೆ ಹಂಚಿಕೊಂಡರು.ಕಾರ್ಯದರ್ಶಿ ಸಂಗಮೇಶ ಅವರ ಕಾರ್ಯಕ್ಷಮತೆ ಮೆಚ್ಚಿ ನಮ್ಮ ಪತ್ರಿಕಾ ಯುನಿಯನ್ ಹಾಗೂ ಪತ್ರಿಕೆಯಿಂದ “ಅತ್ಯುತ್ತಮ ಕಾರ್ಯನಿರ್ವಾಹಕ. ಪ್ರಶಸ್ತಿ ಇದೇ ತಿಂಗಳ ಸಪ್ಟೆಂಬರ್ ೧೪ ರಂದು ಸೋಮವಾರ ನೀಡಲಾಗುತ್ತಿದೆ, ಇವರ ಈ ಪ್ರಾಮಾಣಿಕ ಸೇವೆ ಯಾವತ್ತು ಸಂಘದ ಬೆಳವಣಿಗೆಗೆ ದಾರಿ ದೀಪವಾಗಲಿ ಎಂದು ಪತ್ರಿಕೆ ಹಾರೈಸುತ್ತದೆ.