
ಅಮೀನಗಡ : ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಎರ್ ಸಲೂನ್ ಮಾಲೀಕ ಶ್ರೀ ಮುತ್ತಪ್ಪ ಹಡಪದ ಇಂದು ೭೫ ನೇ ಸ್ವಾತಂತ್ರ್ಯೋತ್ಸವ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತವಾಗಿ ಕಟಿಂಗ್ ಮಾಡಿ ದೇಶ ಸೇವೆ ಮಾಡುತ್ತಿದ್ದಾರೆ,ಸೈನಿಕರು ದೇಶವನ್ನು ಕಾಯ್ದು ರಕ್ಷಣೆ ಮಾಡಿದರೆ,ನಾನು ಬಡವ ಈ ಸಮಾಜದ ಜನರ ಸೇವೆ ಸೇವೆಯನ್ನು ಈ ರೀತಿಯಾಗಿ ಮಾಡುತ್ತಿದ್ದೇನೆ.

ಇದರ ಮಧ್ಯ ಬೇಡ ಅಂದ್ರು ಕೆಲವು ಜನ ಹಣ ಕೋಡುತ್ತಾರೆ,ಆ ಹಣವನ್ನು ಗ್ರಾಮದ ದೇವಸ್ಥಾನಕ್ಕೆ ದೇಣಿಗೆ ನೀಡುತ್ತೇನೆ ಎಂದರು,ಬೆಳಗ್ಗೆ ೬ಗಂಟೆಗೆ ಪ್ರಾರಂಭವಾಗಿ ೦೧ ಗಂಟೆಯ ವರೆಗೆ ಕನಿಷ್ಟ ೨೩ ರಿಂದ ೩೦ ಜನರಿಗೆ ಈ ಸೇವೆಯನ್ನು ಮಾಡುತ್ತೇನೆ ಎಂದರು ಕಳೇದ ೧೫ ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಿದ್ದೇನೆ ಎಂದರು ಇವರ ಈ ಸೇವೆಯನ್ನು ಮೆಚ್ಚಿ ಗ್ರಾಮ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶ್ರೀ ದೇವರಾಜ ಆರ್ ಕಮತಗಿ ಹಾಗೂ BJP ಪಕ್ಷದ ತಾಲ್ಲೂಕು OBC ಘಟಕದ ಅಧ್ಯಕ್ಷ ಶ್ರೀ ನಾಗೇಶ ಗಂಜಿಹಾಳ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಗ್ಯಾನಪ್ಪ ಗೋನಾಳ, ಪತ್ರಕರ್ತ ಹನಮಂತ ಹಿರೇಮನಿ ,ಶ್ರೀ ಸಂಗಯ್ಯ ಪಾಟೀಲ, ಹಾಗೂ ಪ್ರಮುಖರು ಪ್ರಶಂಸೆ ವ್ಯಕ್ತಪಡಿಸಿದರು.
