ಬೆಂಗಳೂರು: ವಿವಿಧ ಬೇಡಿಕೆಗಳನ್ನು ಇರಿಸಿಕೊಂಡು ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ ಆಪರೇಟರ್‌ಗಳನ್ನು ಮುಂದಿರಿಕೊಂಡು ಟಕ್ಕರ್ ನೀಡಲು ಸರ್ಕಾರ ಮುಂದಾಗಿದೆ. ಏಪ್ರಿಲ್ 7 ರಂದು ಸರ್ಕಾರಿ ಬಸ್ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಖಾಸಗಿ ಬಸ್‌ಗಳ ಜತೆ ಕೈಜೋಡಿಸಲು ಸಿದ್ಧವಾಗಿದೆ. ರಾಜ್ಯದಲ್ಲಿ 10 ಸಾವಿರ ಖಾಸಗಿ ಬಸ್ ಹಾಗೂ 1 ಲಕ್ಷ ಟ್ಯಾಕ್ಸಿಗಳಿದ್ದು, ಒಂದೊಮ್ಮೆ ಬಸ್‌ಗಳನ್ನು ನಿಲ್ಲಿಸಿದ್ದೇ ಆದಲ್ಲಿ ಈ ಖಾಸಗಿ ಬಸ್‌ಗಳು ಸಂಚರಿಸಲಿವೆ ಎಂದು ಹೇಳುವ ಮೂಲಕ ಸಾರಿಗೆ ನೌಕರರಿಗೆ ಶಾಕ್ ನೀಡಿದೆ.
ಸಾರಿಗೆ ಆಯುಕ್ತ ಒಂದು ದಿನದ ಹಿಂದಷ್ಟೇ ಖಾಸಗಿ ಬಸ್‌ಗಳ ಮಾಲೀಕರ ಸಭೆ ಕರೆದಿದ್ದರು. ಒಂದು ತಿಂಗಳುಗಳ ಕಾಲ ನಗರದೊಳಗೆ ಬಸ್‌ಗಳನ್ನು ಓಡಿಸಲು ಖಾಸಗಿ ಬಸ್‌ಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ. ಸಾರಿಗೆ ನೌಕರರ ಸಂಬಳಕ್ಕಾಗಿ 1700 ಕೋಟಿ ವ್ಯಯಿಸುತ್ತಿದ್ದೇವೆ, ಅವರ ಕೆಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಕೂಡ ತಿಳಿಸಿದ್ದೇವೆ. ಆದರೂ ಮುಷ್ಕರ ಹಮ್ಮಿಕೊಳ್ಳುತ್ತಿರುವುದು ಬೇಸರ ಉಂಟು ಮಾಡಿದೆ.. ನಮ್ಮ ಬಳಿಯೂ ಖಾಸಗಿ ಬಸ್ಸುಗಳಿಗೆ ಅನುಮತಿ ನೀಡುವುದಲ್ಲದೆ ಬೇರೆ ದಾರಿ ಇಲ್ಲ ಎಂದು ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ. ಯಾರೇ ಒಪ್ಪಿದರೂ, ಒಪ್ಪದೇ ಇದ್ದರೂ ಇದು ಜಾರಿಗೆ ಬರಲಿದೆ. ಮುಷ್ಕರದ ಸಮಯದಲ್ಲಿ ಖಾಸಗಿ ಬಸ್‌ಗಳು ಸಂಚಾರ ನಡೆಸಲಿವೆ ಎಂದು ತಿಳಿಸಿದ್ದಾರೆ.