
ಕಮತಗಿ: ನಗರದ ಬಂಜಾರ ಸಮಾಜದ ಯುವ ನಾಯಕ ಹಾಗೂ ಪತ್ರಕರ್ತ ರಮೇಶ ಚವ್ಹಾನ್ ಅವರ ಏಕಮಾತ್ರ ಸುಪುತ್ರಿ ಚಿ,ಕು, ಪವಿತ್ರಾ ಹಾಗೂ ಇದೆ ಗ್ರಾಮದ ಚಾಂದಿಬಾಯಿ ಶಂಕ್ರಪ್ಪ ರಾಠೋಡ ಅವರ ಸುಪುತ್ರ ಮಂಜುನಾಥ ಅವರೊಂದಿಗೆ ಇಂದು ರಮೇಶ ಅವರ ಸ್ವ- ಗೃಹದಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೇರವೇರಿತು.

ಕಮತಗಿ ಹಾಗೂ ಅಮೀನಗಡ ನಗರದ ಬಂಜಾರ ಸಮಾಜದ ಗುರು ಹಿರಿಯರ ಆರ್ಸಿವಾದ ಅವರ ಸಮ್ಮುಖದಲ್ಲಿ ಇಂದು ಸರಳವಾಗಿ ಹಾಗೂ ಅಷ್ಟೇ ಅದ್ದೂರಿಯಾಗಿ ನಡೆಯಿತು. ನಗರದ ವಿವಿಧ ಗಣ್ಯರು ಹಾಗೂ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಸಮಾಜದ ಪ್ರಮುಖರು ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ್

ಹಾಗೂ ರಾಷ್ಟ್ರೀಯ ಮಂಡಳಿ ನಿರ್ದೇಶ ಶ್ರೀ ಸಂಗಣ್ಣ ಎಚ್ ಗೌಡರ್,ಪತ್ರಕರ್ತ ಶ್ರೀ ಹಾಜಿಮಸ್ತಾನ್ ಬದಾಮಿ, ಸಣ್ಣ & ಮಧ್ಯಮ ಪತ್ರಿಕೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಶ್ರೀ ದಾನಯ್ಯಸ್ವಾಮಿ ಹಿರೇಮಠ ಹಾಗೂ ಅನೇಕ ಮಿತ್ರರು ಈ ಶುಭ ಸಮಾರಂಭಲ್ಲಿ ಭಾಗವಹಿಸಿ ಶುಭ ಕೋರಿದರು.