
ಅಮೀನಗಡ: ಸಮೀಪದ ಸೊಳೇಭಾವಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ನಿನ್ನೆಯ ದಿನ ಆಧ್ಯಾತ್ಮಿಕ ಬಹಿರಂಗ ಪ್ರವಚನವನ್ನು ಗುಳೇದಗುಡ್ಡ ನಗರದ ಸದ್ಗುರು ಸದಾನಂದ ಶಿವಯೋಗಿಮಠದ ಪ,ಪೊ,ನಾಗಭೂಷಣ ಸ್ವಾಮಿಜಿ ಪ್ರವಚನ ಮಾಡಿದರು,ಕೊರಮ ಜನಾಂಗದ ಕುಲ ಗುರುಗಳಾದ ಶಿವಶರಣ ನೊಲಿ ಚಂದಯ್ಯನವರ ವಂಶಜರಾದ ನೀವೆ ಧನ್ಯರು ಸಾಕ್ಷಾತ್ ಭಗವಂತನನ್ನೆ ಕಾಯಕ ಮಾಡಿಸಿಕೊಂಡ ಚಂದಯ್ಯನವರು ಕಾಯಕ ಯೋಗಿ,ಶಿವಶರಣ ನೂಲಿ ಚಂದಯ್ಯ ಎಂದು ನಾಮಕರಣ ಗೊಂಡರು ಶಿವ ಭಕ್ತಿ,ಧ್ಯಾನ,ಪೊಜೆ ಗಿಂತ ಮೊದಲು ಕಾಯಕ ಶ್ರೇಷ್ಟ ಎಂದು ಮೊದಲು ಸಾರಿದ ಶಿವರಶರಣ ನೂಲಿ ಚಂದಯ್ಯನವರು ಇಂತಹ ಕಾಯಕ ನಿಷ್ಠೆ ಬೇರೆ ಯಾವ ಶರಣರರಿಗೂ ಇರಲಿಲ್ಲ .

ಅವರಂತೆ ನೀವು ಕೂಡ ಮೊದಲು ಒಗ್ಗಟ್ಟಾಗಿ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ,ನೀಡಿ ಬದುಕು ಬಹಳ ಸುಂದರ ಅದನ ಅನುಭವಿಸಲು ಜ್ಙಾನ ಅವಶ್ಯಕತೆ ಇದೆ ,ಸಂಸ್ಕಾರ ಅವಶ್ಯಕತೆ ಇದೆ ,ಎಲ್ಲರೊಂದಿಗೆ ನಾವು ಉತ್ತಮ ಬದುಕು ಕಟ್ಟಿಕೊಂಡು ನಮ್ಮ ಮನಸ್ಸು ,ಶೆರೀರ ಮಂತ್ರ ಮುಗ್ದವಾಗಬೇಕು ಆಗಲೇ ಭಗವಂತನ ಕೃಪಾ ನಮ್ಮೆಲ್ಲರ ಮೇಲೆ ಚಲ್ಲುತ್ತದೆ ಎಂದರು.

ಪ್ರತಿ ತಿಂಗಳು ನಡೆಯುವ ಈ ಬಹಿರಂಗ ಪ್ರವಚನ ಅದು ನಮ್ಮ ಜನಾಂಗ ಮಾಡುತ್ತಿರುವುದು ಬಹಳ ಆನಂದವಾಗಿದೆ ಶರಣರ ಅನೇಕ ಚಿಂತನೆಗಳು,ಅವರ ಮಾರ್ಗದರ್ಶನ ನೀಡಲು ಇದೊಂದು ಉತ್ತಮ ವೇದಿಕೆ ಎಂದರು.

ಮೇಲಾಗಿ ಈ ಗ್ರಾಮದಲ್ಲಿ ಕೊರಮ ಜನಾಂಗ ಇದೆ ಎಂಬುದು ನಮಗೆ ತಿಳಿದಿರಲಿಲ್ಲ ಮುಂದಿನ ದಿನಮಾನದಲ್ಲಿ ಉತ್ತಮ ಕಾರ್ಯಕ್ರಮ ನೀಡುವ ಭರವಸೆಯನ್ನು ಶ್ರೀ ಗಳು ನೀಡಿದರು. ಕಾರ್ಯಕ್ರಮದ ನೇತ್ರುತ್ವವನ್ನು ವಹಿಸಿದ ಡಿ,ಬಿ,ವಿಜಯಶಂಕರ್ ಅವರು ಇದೂಂದು ಉತ್ತಮ ಶ್ರೇಷ್ಠ ಕಾರ್ಯಕ್ರಮ ಇದಾಗಿದ್ದು ನೀಜಕ್ಕೂ ಖುಷಿ ತಂದಿದೆ, ಮುಂದಿನ ದಿನಮಾನದಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ಸಮಾಜ ಭಲಪಡಿಸಲು ನಾನು ಮತ್ತೆ ಅನೇಕ ಕಾರ್ಯಕ್ರಮಗಳ ಮೂಲಕ ನಮ್ಮ ಸಮೂದಾಯ ಒಗ್ಗೂಡಿಸಬೇಕಾಗಿದೆ,ಅದ್ದರಿಂದ ನಮ್ಮ ಜನಾಂಗದ ಸ್ಥಿತಿಗತಿ ಇಂತಹ ವೇದಿಕೆಗಳ ಮೂಲಕ ಅಧಿಕಾರಿ ಶಾಹೀ ಇಲಾಖೆಯಿಂದ ಹಿಡಿದು ಎಲ್ಲಾ ಆಡಳಿತ ಪ್ರತಿನಿಧಿಗಳ ಗಮನಕ್ಕೆ ಜನಾಂಗದ ಕೂಗು ಏನು ಎಂಬುದು ಮನವರಿಕೆ ಆಗಬೇಕಿದೆ ಎಂದರು .

ಬಹಿರಂಗ ಪ್ರವಚನ ಕಾರ್ಯಕ್ರಮವನ್ನು ಚಾಂದ್ ನಧಾಪ್ ಅವರು ಉದ್ಘಾಟನೆ ಮಾಡಿದರು ನೂತನ ಪಿ,ಕೆ,ಪಿ,ಎಸ್,ಅಧ್ಯಕ್ಷರಾದ ಗದಗಯ್ಯ ನಂಜಯ್ಯನಮಠ ಅವರು ಕುಲ ಗುರು ನೂಲಿ ಚಂದಯ್ಯನವರ ಭಾವ ಚಿತ್ರಕ್ಕೆ ಹೊವು ಹಾರ ಹಾಕಿ ದೀಪ ಬೇಳಗಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕರೋಕೆ ಭಕ್ತಿ ಗೀತೆ ಹಾಡುವ ಮೂಲಕ ಅಲ್ಲಿದ್ದ ಭಕ್ತರ ಮನ ತಣಿಸುವ ಮೂಲಕ ವೇದಿಕೆಗೆ ಕೇಂದ್ರ ಬಿಂದುವಾದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಪ್ಪ ದು ಭಜಂತ್ರಿ ಮಾತನಾಡಿ ಸಮಾಜದ ಒಗ್ಗಟ್ಟಿಗೆ ನಾವು ಹಗಲು ರಾತ್ರಿ ಶ್ರಮಿಸುತ್ತೇವೆ ಮುಂದಿನ ದಿನಮಾನದಲ್ಲಿ ಇನ್ನೂ ಉತ್ತಮ ಕಾರ್ಯಕ್ರಮ ರೂಪಿಸುತ್ತೇವೆ ಪೊಜ್ಯರು ತಾವು ಮತ್ತೆ ಬಂದು ನಮ್ಮ ಜನಾಂಗದ ಜಾಗೃತ ಮಾಡಬೇಕು ಎಂದು ಪೊಜ್ಯರಿಗೆ ಕರೆ ಕೊಟ್ಟರು. ಮುಖ್ಯಅಥಿತಿಗಳಾಗಿ ಬಸಪ್ಪ ಗದಿಗೆಪ್ಪ,ಜಂಗಿನ, ಎಮ್,ಎಚ್,ಪಾರೂಖಿ,ಹಾಗೂ ಬಸವರಾಜ್ ತುಂಬರಮಟ್ಟಿ ವಹಿಸಿದ್ದರು,


ಈ ಸಂಧರ್ಭದಲ್ಲಿ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗದಗಯ್ಯ ನಂಜಯ್ಯನಮಠ, ಹಾಗೂ ಉಪಾಧ್ಯಕ್ಷರಾದ ಬಸಪ್ಪ ಜಂಗಿನ ಅವರಿಗೆ ಸಮಾಜದಿಂದ ಗೌರವ ಸನ್ಮಾನ ಮಾಡಲಾಯಿತು. ಹಾಗೂ ಬದಾಮಿ ತಾಲೂಕಿನ ಚೋಳಚಗುಡ್ಡದ ಗೃಹ ರಕ್ಷಕ ದಳದ ಘಟಕಾಧಿಕಾರಿಯಾದ ಎಮ್,ಎಚ್,ಪಾರೂಖಿ ಹಾಗೂ ಗುಡೂರು ಗ್ರಾಮದ ಸಮಾಜ ಸೇವಕರಾದ ಬಸವರಾಜ ತುಂಬರಮಟ್ಟಿ ಅವರಿಗೆ ಸಮಾಜದ ಪರವಾಗಿ ಗೌರವ ಸನ್ಮಾನ ಮಾಡಲಾಯಿತು,

ಕಾರ್ಯಕ್ರಮದ ನೇತೃತ್ವ ಡಿ,ಬಿ,ವಿಜಯಶಂಕರ ವಹಿಸಿದ್ದರು, ಸಮಾಜದ ಅಧ್ಯಕ್ಷರಾದದ ಬಸಪ್ಪ ಭಜಂತ್ರಿ, ಯಮನಪ್ಪ ಫ,ಭಜಂತ್ರಿ,ಹನಮಂತ ಹರೇಮನಿ, ಯಮನೂರ ,ಬೊ,ಭಜಂತ್ರಿ, ರೋಮಣ್ಣ,ಭಜಂತ್ರಿ, ಯಶೋಧರ ಭಜಂತ್ರಿ, ಶರಣಪ್ಪ,ಭಜಂತ್ರಿ, ಯಲ್ಲಪ್ಪ ಬಾ,ಭಜಂತ್ರಿ ಸಣ್ಣಭೀಮಪ್ಪ ಭಜಂತ್ರಿ,ರಮೇಶ ಹಂಗರಗಿ, ಉಪಸ್ಥಿತಿ ಇದ್ದರು ,ಕಾರ್ಯಕ್ರಮದ ನಿರೂಪಣೆ ಹನಮಂತ,ಹು,ಹಂಗರಗಿ ಮಾಡಿದರು.