

ಅಮೀನಗಡ : ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ನಾಳೆ ಶ್ರೀ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ೧೯೯೨ ರ ಬ್ಯಾಚ್ ಹಾಗೂ SSLC ೨೦೦೧ ಹಾಗೂ ೨೦೦೨ ರ ಬ್ಯಾಚ್ ಎಲ್ಲಾ ವಿಧ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿ ೨೦ ವರ್ಷಗಳ ನಂತರ ಈ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸೂಳೇಭಾವಿಯ ಎಲ್ಲಾ ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳ ಎಲ್ಲಾ ವಿಧ್ಯಾರ್ಥಿಗಳು ಸೇರಿದಂತೆ ತಳ್ಳಿಕೇರಿ, ಗೂರ್ಜನಾಳ, ಶಾಲೆಗಳ ಶಿಕ್ಷಕರು ಸೇರಿದಂತೆ ಸುಮಾರು ೭೫ ಜನ ಶಿಕ್ಷಕರನ್ನು ಗುರುತಿಸಲಾಗಿದೆ. ಹಾಗೆ ಎಲ್ಲಾ ಗುರುಗಳಿಗೆ ವಿಶೇಷ ಸನ್ಮಾನ ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀ ಮಹೇಶ ಮಾಶ್ಯಾಳ, ಅಬ್ದುಲಶೀಖರ್ ದೊಡಮನಿ, ಶ್ರೀ ಎಸ್,ಡಿ, ಭಜಂತ್ರಿ, ಶ್ರೀ ಮಂಜುನಾಥ ಕಳಸಾ,ಶ್ರೀ ರಾಘವೇಂದ್ರ ಜನಿವಾರದ, ಶಂಕರ್ ಗೌಡರ್, ಪರಶುರಾಮ ಹುಲ್ಯಾಳ, ಶಾಂತು ಹೂಗಾರ, ಪ್ರಪುಲ್ ರಾಮದುರ್ಗ, ಶ್ರೀಮತಿ ಸಂಗಮ್ಮ ನಿಡಗುಂದಿ, ಶ್ರೀಮತಿ ವಿಜಯಲಕ್ಷ್ಮಿ ನರಸಣ್ಣವರ,ಶ್ರೀಮತಿ ಲಕ್ಷ್ಮಿ ಕೆರಕಲಮಟ್ಟಿ, ಹಾಗೂ ಶ್ರೀಮತಿ ಭುವನೇಶ್ವರಿ ಧುತ್ತರಗಿ, ಶ್ರೀಮತಿ ಜ್ಯೋತಿ ಜಾಲಿಹಾಳ, ಶ್ರೀಮತಿ ಗೀತಾ ಪಾಟೀಲ ಅನೇಕ ಸ್ನೇಹಿತರು ನಾಳಿನ ಕಾರ್ಯಕ್ರಮಕ್ಕೆ ತಪ್ಪದೆ ತಾವೆಲ್ಲರೂ ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
