
ಶ್ರೀ ದೇಸಾಯಿ ಗುರಪ್ಪ ಯರಕಲ್ಲ ಸುಫರ್ ವೈಜರ್ ಸುಕ್ಷೇತ್ರ ಶ್ರೀ ಕೂಡಲಸಂಗಮ ದೇವಸ್ಥಾನ ಸ್ವಚ್ಚತಾ ವಿಭಾಗ, ಇವರಿಂದ ಸಮಸ್ತ ಜನತೆಗೆ ಹಾಗೂ ಪ್ರವಾಸಿಗರಿಗೆ ಈ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು, ಹಾಗೂ ಈ ಶ್ರಾವಣಮಾಸದಲ್ಲಿ ಈ ಕ್ಷೇತ್ರಕ್ಕೆ ಬೇಟಿ ನೀಡುವ ಎಲ್ಲಾ ಭಕ್ತರು ಹಾಗೂ ಪ್ರವಾಸಿಗರಿಗೆ ಹಾರ್ದಿಕ ಸ್ವಾಗತ

ಈ ಕ್ಷೇತ್ರದಲ್ಲಿ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ಈ ಕ್ಷೇತ್ರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು,ಎಲ್ಲೆಂದರಲ್ಲಿ ತಾವು ತಂದ ಆಹಾರ ಪ್ಲಾಸ್ಟಿಕ್ ಹಾಳೆ ,ಎಲೆ,ಗ್ಲಾಸ್,ಇತ್ಯಾದಿ ತ್ಯಾಜ್ಯವನ್ನು ಎಸೆಯಬಾರದು ಹಾಗೂ ನದಿ ದಂಡೆಯಲ್ಲಿ ಕುಳಿತು ಊಟ ಮಾಡಬಾರದು ,ಸ್ನಾನದ ಬಟ್ಟೆಗಳನ್ನು ದಂಡೆಯ ಮೇಲೆ ಬಿಟ್ಟು ಹೋಗಬಾರದು ಪವಿತ್ರ ತ್ರಿ ಸಂಗಮದ ನದಿಯ ಪಾವಿತ್ರ್ಯವನ್ನು ನಾವು ನೀವೆಲ್ಲರು ಕಾಯ್ದುಕೊಳ್ಳಬೇಕು, ವಿಶ್ವ ಗುರು ಬಸವಣ್ಣನವರ ಈ ಪುಣ್ಯಕ್ಷೇತ್ರಕ್ಕೆ ಬಂದವರಿಗೆ ಎಲ್ಲರಿಗೂ ಒಳ್ಳೆಯದಾಗಲಿ ಬರುವ ಎಲ್ಲಾ ಭಕ್ತರು ಹಾಗೂ ನಮ್ಮ ಕೂಲಿ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕು ಹಾಗೆ ನಮ್ಮ ಕೆಲಸಗಾರರು ಸಹ ಮಾಸ್ಕ್ ಧರಿಸಿ ಕೆಲಸ ಮಾಡಲಿ,ಎಲ್ಲರಿಗೂ ಮತ್ತೊಮ್ಮೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಶಯಗಳು,
