ಬಾಗಲಕೋಟೆ : ಇದೀಗ ತಾನೆ ಬೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ ಹುಬ್ಬಳ್ಳಿ ಹಾಗೂ ಕೋಲಾರ ರಾಜ್ಯ ಹೆದ್ದಾರಿಯಲ್ಲಿ ಇನೋವಾ ಕಾರ್ ಹಾಗೂ ಬೈಕ್ ಮಧ್ಯ ಮುಖಾ ಮುಖಿ ಅಪಘಾತ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲಿ ಸತ್ತಿದ್ದಾನೆ.

ವಾಹನ ರಭಸಕ್ಕೆ ರಸ್ತೆಯಿಂದ ೫೦ ಮೀಟರ್ ದೂರ ಬೈಕ್ ಹಾರಿ ಬಿದ್ದಿದ್ದು ಇನೋವಾ ಕಾರ್ ಕೂಡ ಪಕ್ಕದ ಜಮೀನಿನಲ್ಲಿ ಹೋಗಿ ನಿಂತಿದೆ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಬಂದಿದ್ದು ಮೃತ ವ್ಯಕ್ತಿಯ ಹೆಸರು ಶ್ರೀಶೈಲ ಬಸಪ್ಪ ಕೆಂಗನಾಳ ಮುಳವಾಡ ತಾಂಡ ನಿವಾಸಿ ಎಂದು ತಿಳಿದು ಬಂದಿದೆ.

ಈ ಬಗ್ಗೆ ಇಲಾಖೆ ತನಿಖೆ ಕೈಗೊಂಡಾಗ ಈ ಬಗ್ಗೆ ಪೂರ್ಣ ಮಾಹಿತಿ ಹೊರ ಬರಲಿದೆ ಈ ಬಗ್ಗೆ ಸ್ಥಾನಿಕ ಮಾಹಿತಿಯನ್ನು ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡ ಸಲೀಂ ಜಗನಾಥಪುರಿ ಅವರು ಮಾಹಿತಿ ನೀಡಿದರು.