
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ಶಾಲು ಸಮವಸ್ತ್ರ ಸಂಘರ್ಷ ಇವತ್ತು ನ್ಯಾಯದೇಗುಲದ ಮುಂದೆ ಮತ್ತೆ ಬರುತ್ತಿದೆ. ಇವತ್ತು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ಇಂದು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ಪ್ರಶ್ನೆ ಕೇಳಿದ್ರೆ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಎಜಿ ವಿವರಣೆ ಕೊಡಲಿದ್ದಾರೆ. ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಇವತ್ತು ವಾದ ಮುಂದುವರಿಸಲಿದ್ದಾರೆ.
ಇವತ್ತೇ ವಾದಮಂಡನೆ ಪೂರ್ಣವಾಗುವ ಸಾಧ್ಯತೆ ಇಲ್ಲ. ಯಾಕಂದ್ರೆ, ಹಲವು ಅರ್ಜಿಗಳಿರುವುದರಿಂದ ವಾದಮಂಡನೆ ಪೂರ್ಣಗೊಳಿಸಲು ಕೆಲ ದಿನ ಬೇಕು. ಎಲ್ಲರ ವಾದ ಕೇಳಿದ ನಂತರ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ. ಒಟ್ಟಾರೆ, ಒಂದ್ಕಡೆ ಶಾಲೆ ಓಪನ್ ಆಗಿದ್ದು ಮತ್ತೊಂದ್ಕಡೆ ಸದನ ಕದನ ಇದೆ. ಈ ನಡುವೆ ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ಹೀಗಾಗಿ ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್‌ನತ್ತ ನೆಟ್ಟಿದೆ.ಈ ತೀರ್ಪು ಯಾರ ಆದರೂ ಸಾರ್ವಜನಿಕರು ಘನ ನ್ಯಾಯಾಲಯದ ತೀರ್ಪನ್ನು ಗೌರವಿಸಿ ದೇಶದಲ್ಲಿ ಶಾಂತಿಯನ್ನು ಕಾಪಡಬೇಕು ಎಂಬುದು BB News ಕಳಕಳಿ.