
ಹುನಗುಂದ : ವೃತ್ತ ನೀರಿಕ್ಷಕರಾದ CPI ಹೊಸಕೇರಪ್ಪ ಕೆ ಅವರ ಅಧ್ಯಕ್ಷತೆಯಲ್ಲಿ ಇಂದು ಸಾಯಂಕಾಲ ೨೬/೧೦/೨೦೨೧ ರ ಮಂಗಳವಾರ ೦೬ ಗಂಟೆಗೆ ಹುನಗುಂದ ತಾಲೂಕಿನ ಎಲ್ಲಾ ಗ್ರಾಮಗಳಿಂದ ದಲಿತ ಮುಖಂಡರ ಕುಂದು ಕೊರತೆ ಸಭೆ ನಡೆಯಿತು, ಸಭೆಯಲ್ಲಿ ಇದ್ದಲಗಿ ಗ್ರಾಮದ ಮಲ್ಲಿಕಾರ್ಜುನ ಹೊಸಮನಿ,ಮಾತನಾಡಿ ದಲಿತರು ಅಟ್ರಾಸಿಟಿ ಕೇಸ್ ಮಾಡಿದಾಗ ತಾವು ಆರೋಪಿ ತರ ಪರವಾಗಿ ಕೌಂಟರ್ ಕೇಸ್ ಯಾಕೆ ಮಾಡುತ್ತಿರಿ ? ನಂತರ ಕೇಸ್ ಡೀ ಫಾಲ್ಸ್ ಆಗುತ್ತಿವೆ,ಇದರಿಂದ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಯಾಕೆ ಈ ವ್ಯವಸ್ಥೆ ಎಂದು ಪ್ರಶ್ನೆ ಮಾಡಿದರು.

ಈ ವಿಚಾರವಾಗಿ ಮಾತನಾಡಿದ CPI ಅವರು ಯಾರೇ ಪಿರಿಯಾದೆ ಕೊಟ್ಟರು ನಾವು ಅದನ ತಿರಸ್ಕಾರ ಮಾಡಲು ಬರುವುದಿಲ್ಲ ಕೇಸ್ ಕೊಟ್ಟ ಮೇಲೆ ಅದರ ತನಿಖೆಯನ್ನು ನಾವು ಮಾಡಲ್ಲ ದನ್ನು DSP ಸಾಹೇಬರು ಮಾಡತಾರ ಇಲ್ಲಿಯ ವರೆಗೂ ನಾವು ಕಾನೂನು ರೀತಿಯಲ್ಲಿ ಆರೋಪಿತರ ಮೇಲೆ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಕೆಲಸ ಮಾಡತಿವಿ ಎಂದರು. ನಂತರ ಮಾತನಾಡಿದ ಪತ್ರಕರ್ತ ಶ್ರೀ ಡಿ,ಬಿ,ವಿಜಯಶಂಕರ ಅವರು ಜಿಲ್ಲೆಯಲ್ಲಿ ಇಲ್ಲಿಯವರೆಗೆ ಕಳೆದ ೨ ತಿಂಗಳಲ್ಲಿ ೦೬ ದಲುತರ ಕೋಲೆಯಾಗಿವೆ ,ಇಲ್ಲಿಯ ವರೆಗೂ ೨೦ ವರ್ಷಗಳ ದಲಿತರ ವಿವಿಧ ಪ್ರಕರಣಗಳನ್ನು ಅವಲೋಕನ ಮಾಡಿ ನೋಡಿ ಒಂದು ಒಬ್ಬ ಆರೋಪಿಗೂ ಶಿಕ್ಷೆಯಾಗಿಲ್ಲ ,ಯಾಕೆ ? ಎಂದರು ಹಲವಾರು SC ಕೇಸಗಳು ಡಿ ಫಾಲ್ಸ್ ಆಗುತ್ತಿವೆ, ಇದಕ್ಕೆ ಕಾರಣ ಏನು ಸರ್ ,? ಕಾನೂನು ಅರಿವು – ನೇರವು ಪ್ರತಿ ದಲಿತರ ಕೇರಿಯಲ್ಲಿ ಗ್ರಾಮದ ಸವರ್ನಿಯರನ್ನು ಕರೆಯಿಸಿ,ಅವರ ಸಮ್ಮುಖದಲ್ಲಿ ಕಾರ್ಯಕ್ರಮ ರೂಪಿಸಿ ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಿ ಎಂದರು,

ಸಭೆ ಉದ್ದೇಶಿಸಿ ಮಾತನಾಡಿದ ಅಮೀನಗಡ PSI ಮಲ್ಲಿಕಾರ್ಜುನ ಕುಲಕರ್ಣಿ ಅವರು ಏನೇ ನಿಮ್ಮಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಇದ್ದರು ನಮ್ಮ ಗಮನಕ್ಕೆ ತನ್ನಿ ಅಟ್ರ್ಯಾಸಿಟಿ ವಿಚಾರದಲ್ಲಿ ತಾವು ಏನೆ ಪಿರಾಯಾದೆ ಕೊಟ್ಟರು ಅದನ್ನು ಸ್ವೀಕಾರ ಮಾಡಿ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ ಅಲ್ಲದೆ ಪ್ರತಿ ತಿಂಗಳು ಈ ದಲಿತ ಸಭೆಗಳನ್ನು ಇನ್ನೂ ಮುಂದೆ ಖಂಡಿತ ಮಾಡತಿವಿ ಎಂದರು. ಈ ಸಭೆಯಲ್ಲಿ ದಲಿತ ಮುಖಂಡರಾದ ಶ್ರೀ ಹಣಮಂತ ಹಿರೇಮನಿ,ಶ್ರೀ ಡಿ,ಬಿ, ವಿಜಯಶಂಕರ ಶ್ರೀ ಲಕ್ಷ್ಮಣ್ಣ ಚಂದ್ರಗೀರಿ,ಶ್ರೀ ಮಲ್ಲಿಕಾರ್ಜುನ ಹೊಸಮನಿ,ಶ್ರೀ ಕೋಣಪ್ಪ ಮಾದರ,ಶ್ರೀ ಸಣ್ಣಪ್ಪ ಮಾದರ, ಶ್ರೀ ಭೀಮಸಿ ಕೊರವರ,ಶ್ರೀ ಯಮನಪ್ಪ ಭಜಂತ್ರಿ, ಶ್ರೀ ಹನಮಂತ ಪೂಜಾರಿ ,ಶ್ರೀ ದೊಡ್ಡಪ್ಪ ಕಾರಬಾರಿ , ಅನೇಕ ಮುಖಂಡರು ಭಾಗಿಯಾಗಿದ್ದರು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ಹೊಸಕೇರಪ್ಪ ಕೆ,CPI ವಹಿಸಿದ್ದರು ಅಲ್ಲದೆ ಈ ದಲಿತ ಸಭೆಯಲ್ಲಿ ಶ್ರೀ ಮಲ್ಲಿಕಾರ್ಜುನ, ಶ್ರೀ ಕುಲಕರ್ಣಿ, PSI ,ಶ್ರೀ ಎಸ್,ಬಿ,ಪಾಟೀಲ,PSI ಶ್ರೀಮತಿ ಎಸ್,ಆರ್, ನಾಯಕ PSI ಶ್ರೀ ರಾವತ್ ತಮಗೊಂಡ RSI ಶ್ರೀ ಕೆ,ವಾಯ್,ವಾಲಿಕರ,ASI ಇಲಕಲ್ಲ,ಹಾಗೂ ಸಿಬ್ಬಂದಿಗಳಾದ ಶ್ರೀ C C ಪಾಟೀಲ, ಶ್ರೀ ಶರಣಪ್ಪ ಹುಲ್ಯಾಳ, ಶ್ರೀ ಬಸವರಾಜ ನಿಂಗೋಳ್ಳಿ, ಶ್ರೀ ಶಿವು ಕಟ್ಟಿಮನಿ,ಶ್ರೀ ವ್ವಿ,ಡಿ,ಗೌಡರ, ಹಾಗೂ ಇತರೆ ಸಿಬ್ಬಂದಿ ಉಪಸ್ಥಿತಿ ಇದ್ದರು,
