ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ “ಹರ್ ಘರ್ ತಿರಂಗಾ ” ನಗರದ ಪಟ್ಟಣ ಪಂಚಾಯತ ೧೪ ವಾರ್ಡಿನಲ್ಲಿ ಪ್ರತಿ ಮನೆ ಮನೆಗೆ ತೆರಳಿ೨೫೦ ಕ್ಕೂ ಹೆಚ್ವು ಉಚಿತ ರಾಷ್ಟ್ರ ಧ್ವಜಗಳನ್ನು ವಿತರಣೆ ಮಾಡಿ BB News ನೊಂದಿಗೆ ಮಾತನಾಡಿದ ಅವರು ಪ್ರತಿ ಒಂದು ಧ್ವಜಕ್ಕೆ ೨೫ ರೂಪಾಯಿ ಅಂತೆ ಸ್ಥಳೀಯ ಅಂಚೆ ಇಲಾಖೆಯಲ್ಲಿ ೨೫೦ ಧ್ವಜ ಕರಿದಿಸಿ ರಾಷ್ಟ್ರ ಪ್ರೇಮ ಮೆರೆದರು.

“ಹರ್ ಘರ್ ತಿರಾಂಗ ” ದೇಶದ ಪ್ರತಿಯೊಬ್ಬ ಭಾರತೀಯ ಮನೆ ಮನೆಯ ಮೇಲೆ ಬಣ್ಣದ ರಾಷ್ಟ್ರಧ್ವಜ ಹಾರಾಡಬೇಕೆಂದು ಕೇಂದ್ರ ಸರಕಾರದ ಆದೇಶದಂತೆ ೧೪ನೇ ವಾರ್ಡಿನ ಪಟ್ಟಣ ಪಂ,ಸದಸ್ಯ ಸಂಜಯ್ ಐಹೊಳೆ ಅವರು ಉಚಿತ ಧ್ವಜಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು “ಹರ್ ಘರ್ ತಿರಂಗಾ ” ಎoಬುದು ಆಜಾದಿ ಕಾ ಅಮೃತ್ ಮಹೋತ್ಸವದ ಆಶ್ರಯದಲ್ಲಿ ರಾಷ್ಟ್ರ ಧ್ವಜವನ್ನು ಮನೆ ಮನೆಗೆ ತರಲು ಮತ್ತು ಭಾರತದ 75 ನೇ ಸ್ವಾತಂತ್ರ್ಯದ ವರ್ಷವನ್ನು ಗುರುತಿಸಿ ಮತ್ತು ಅದನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಅಭಿಯಾನವನ್ನು ಜಾರಿಗೆ ತಂದಿದೆ.

ಎಂದರು. ಅಗಸ್ಟ್ ೧೩ರಿಂದ ಅಗಸ್ಟ್ ೧೫ರ ತನಕ ಪ್ರತಿ ಮನೆಯ ಮೇಲೆ ಈ ರಾಷ್ಟ್ರಧ್ವಜ ಹಾರಾಡಬೇಕು ಕೇಂದ್ರ ಸರಕಾರದ ಈ “ಹರ್ ಗರ್ ಘರ್ ತಿರಂಗಾ ” ಅಭಿಯಾನವನ್ನು ನಾವು ಯಶಸ್ವಿಯಾಗಿಸೋಣ ಎಂದರು . ಈ ಧ್ವಜಗಳನ್ನು ವಿತರಿಸು ಸಂದರ್ಭದಲ್ಲಿ ಪಟ್ಟಣ ಪಂ ಸದಸ್ಯರಾದ ಸಂಜಯ್ ಐಹೊಳೆ ದರ್ಶನ ಮೊಕಾಶಿ ವಿಜಯ್ ಬೆಂಡಿಗೇರಿ ಮಂಜುನಾಥ ಬಡಿಗೇರ ,ಶಿವು ಲಮಾಣಿ,ಮಂಜುನಾಥ ಭಜಂತ್ರಿ, ಹಾಗೂ ಅನೇಕ ದೇಶಾಭಿಮಟನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು.