
ಅಮೀನಗಡ : ನಗರದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು,ಇದರ ಜೊತೆಗೆ ಶಾಲಾ ಮಕ್ಕಳ ಬಿಳ್ಕೋಡಿಗೆ ಸಮಾರಂಭ ಕೂಡ ನಡೆಯಿತು ,ಮಹಿಳಾ ದಿನಾಚರಣೆ ಅಂಗವಾಗಿ ನಗರದ ಪಟ್ಟಣ ಪಂಚಾಯತ ಮಹಿಳಾ ಪೌರ ಕಾರ್ಮಿಕರು ಹಾಗೂ ನಗರದ ಆಟೊ ಚಾಲಕರು,ಆಶಾ ಕಾರ್ಯಕರ್ತರು, ಸಾಧಕರು,ಹಾಗೂ ಅಥಿತಿ ಗಣ್ಯರಿಗೆ ಸಂಸ್ಥೆಯಿಂದ ಅದ್ದೂರಿ ಸನ್ಮಾನವನ್ನು ಮಾಡಲಾಯಿತು.

ಇದರೊಂದಿಗೆ ಸಾರ್ವಜನಿಕರಿಗೆ ಹಮ್ಮಾಆದ್ಮಿ ಟೀ ಪಾಯಿಂಟ್ ನಲ್ಲಿ ಶುದ್ದ ಕುಡಿಯುವ ನೀರಿನ ಅರವಟಿಗೆ ತೆರೆಯಲಾಯಿತು. ಬಸ್ ನಿಲ್ದಾನದಲ್ಲಿದ್ದ ವೃದ್ದರಿಗೆ,ಹಾಗೂ ಅಸಹಾಕ ವೃದ್ದರಿಗೆ ಊರುಗೋಲು ನೀಡಲಾಯಿತು, ಈತ ಸಾಲು ಸಾಲು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ನಗರದ ಪ್ರತಿಷ್ಟಿತ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆ, ಈ ಸಂಸ್ಥೆಯ ಸಂಸ್ಥಾಪಕರು ಹಾಗೂ ಕಾರ್ಯದರ್ಶಿಗಳಾದ ಶ್ರೀ ಡಾ: ಪ್ರಶಾಂತ್ ನಾಯಕವರು ನಗರದಲ್ಲಿ ತಮ್ಮ ಶಾಲೆಯ ಕಾರ್ಯಕ್ರಮದ ಜೊತೆಗೆ ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಗುರಿತಿಸಿಕೊಂಡವರು, ಇಂತಹ ಸಾಮಾಜಿಕ ಸೇವೆಯಿಂದಲೇ ಸಂಸ್ಥೆ ಗುರುತಿಸಿಕೊಂಡಿದೆ, ಈ ಮಹಿಳಾ ದಿನಾಚರಣೆ ಅಂಗವಾಗಿ ನೂರಾರು ಸನ್ಮಾನಿತರನ್ನು ಗುರುತಿಸಿ ಗೌರವಿಸಲಾಯಿತು.

ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಾಡು ,ಡಾನ್ಸ್ ,ಜಾದು,ಭಾಷಣ ಸ್ಪರ್ಧೆ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ವಿಧ್ಯಾರ್ಥಿಗಳನ್ನು ರಂಜಿಸಿದವು, ಈ ಕಾರ್ಯಕ್ರಮದ ಸಾನಿದ್ಯವನ್ನು ಪ,ಪೂ ಶ್ರೀ ಕೆ ಪವಿತ್ರಾ ವಹಿಸಿದ್ದರು ಉದ್ಘಾಟನೆಯನ್ನು ಸಂಸ್ಥೆಯ ಅದ್ಯಕ್ಷರಾದ ಶ್ರೀಮತಿ ಶಾಂತಾದೇವಿ ಅಮ್ಮನವರು ಉದ್ಘಾಟನೆ ಮಾಡಿದರು ಮುಖ್ಯ ಅಥಿತಿಗಳಾಗಿ PSI ಕುಮಾರಿ ರೇಣುಕಾ ವಡ್ಡರ ಹಾಗೂ ಶ್ರೀ ಅಜಮೀರ್ ಮುಲ್ಲಾ, ಶ್ರೀ ಸಂತೋಷ ಐಹೊಳಿ,ಶ್ರೀ ಸಂಜಯ್ ಐಹೊಳೆ, ಶ್ರೀ ಯೊಗೇಶ ಲಮಾನಿ ,ಸಾಹಿತಿಗಳಾದ ಶ್ರೀ ಮಹಾದೇವ ಬಸರಕೋಡ,ಶ್ರೀ ಮಾರೆಪ್ಪ ಮಂತ್ರಿ ,ಶ್ರೀ ಹುಸೇನಸಾಬ ಮಾಗಿ ,ಶ್ರೀ ಶ್ರೀಮತಿ ಮಂಜುಳಾ ನಾಯಕ, ಶ್ರೀಮತಿ ಡಾ: ಕಾವ್ಯಾ ಪ್ರಶಾಂತ ನಾಯಕ ಹಾಗೂ ಶ್ರೀಮತಿ ಡಾ: ಸರಸ್ವತಿ ಪಿ ನಾಯಕ ,ಶ್ರೀ ಅಮರೇಶ ಮಡ್ಡಿಕಟ್ಟಿ ,ಗಾಯಕರಾದ ಮಾನು ಹೊಸಮನಿ,ನಾರಾಯಣ ಹುಣಶ್ಯಾಳ ಮುಂತಾದವರು ಉಪಸ್ಥಿತಿ ಇದ್ದರು.