
ಅಮೀನಗಡ: ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕುರಿ ಸಂತೆಯನ್ನೆ ನಂಬಿ ಬದುಕು ಕಟ್ಟಿಕೊಂಡು ಉಪ ಜೀವನ ಮಾಡುತ್ತಿದ್ದಾರೆ ಅದರಂತೆ ನೂರಾರು ಜನ ಬಿದಿಬದಿ ವ್ಯಾಪಾರಿಗಳು ಇದರಿಂದ ಜೀವನ ನಡೆಸುತ್ತಿದ್ದಾರೆ ,ಆದರೆ ಕರೋನಾ ದಿಂದ ಸಂತೆ ಸದ್ದಾಗಿ ೩ ತಿಂಗಳಾಯಿತು. ಈಗ ಕರೋನಾ ನಿಯಂತ್ರಣ ಬಂದಿದ್ದು ಸಾವಿರಾರು ಉದ್ಯೋಗ ಮತ್ತೆ ಪ್ರಾರಂಭವಾದರೆ ನೂರಾರು ಜನ ಬದಕುತ್ತಾರೆ,ಆದ ಕಾರಣ ಜಿಲ್ಲಾಧಿಕಾರಿಗಳು ಇತ್ತ ಆಧ್ಯ ಗಮನ ಹರಿಸಿ ತಕ್ಷಣ ಈ ವಾರ ಕುರಿ ಹಾಗೂ ದನದ ಸಂತೆ ಪ್ರಾರಂಭ ಮಾಡಬೇಕು ಎಂದು ಹುನಗುಂದ ತಾಲೂಕಿನ ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಸಂಜಯ್ ಐಹೊಳೆ ಹಾಗೂ ಕಾರ್ಯಕರ್ತರು ಇಂದು ಅಮೀನಗಡ ಉಪ ತಹಶಿಲ್ದಾರ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಮಾನ್ಯ ಜಿಲ್ಲಾ ಅಧಿಕಾರಿಗಳಿಗೆ ನಮ್ಮ BB News ವರದಿಗಾರ ಸಂಪರ್ಕ ಮಾಡಿದ ಈ ವಾರ ತಕ್ಷಣ ಈ ಬಗ್ಗೆ ಸಭೆ ಕರೆದು ಅಲ್ಲಿನ ಕರೋನಾ ಪರಿಸ್ಥಿತಿ ಅವಲೋಕಿಸಿ ಪ್ರಾರಂಭ ಮಾಡುವುದರ ಬಗ್ಗೆ ತಿಳಿಸುತ್ತೇವೆ,ನಾನು ರಜೆ ಇದ್ದೇನೆ ಎಡಿಸಿ ಅವರು ಈ ಬಗ್ಗೆ ಪರಿಸಿಲನೆ ಮಾಡಲು ಹೇಳುತ್ತೇನೆ ಎಂದರು.