
BB News
ಮಂಗಳೂರು : ಕೊರೊನಾ ಸೋಂಕು ಬಂದಿದ್ದ ಅಣ್ಣನನ್ನೇ ತಮ್ಮನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸಾ ತಾಲೂಕಿನ ಮಸರಣಿಗೆ ಗ್ರಾಮದಲ್ಲಿ ನಡೆದಿದೆ.
ಮಹಾವೀರ ಹತ್ಯೆಯಾದ ಸೋಂಕಿತ. ಕೆಲದಿನಗಳಿಂದ ಮಹಾವೀರ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಹಟ ಹಿಡಿದ ಮಹಾವೀರ ತನ್ನನ್ನು ಡಿಸ್ಚಾರ್ಜ್ ಮಾಡುವಂತೆ ಒತ್ತಾಯಿಸಿದ್ದಾನೆ. ಅಲ್ಲದೇ ಡಿಸ್ಚಾರ್ಜ್ ಅಗಿ ಮನೆಗೆ ಬಂದಿದ್ದಾನೆ.
ಸೋಂಕು ಕಡಿಮೆಯಾಗದಿದ್ದರೂ ಆಸ್ಪತ್ರೆಯಿಂದ ಮನೆಗೆ ಬಂದ ಅಣ್ಣನ ನಡೆಗೆ ತಮ್ಮನಿಗೆ ಕೋಪ ನೆತ್ತಿಗೇರಿದೆ. ಇಬ್ಬರ ನಡುವೆ ಜಗಳ ಆರಂಭವಾಗಿ ತಮ್ಮ ತನ್ನ ಅಣ್ಣ ಮಹಾವೀರನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಈ ವರ್ತನೆಗೆ ತಮ್ಮ ಕೊಲೆಯಲ್ಲಿ ಅಂತ್ಯ ಹಾಡಿದ್ದಾನೆ ಒಂದು ಕ್ಷಣದ ಕೋಪಕ್ಕೆ ಅಣ್ಣ ಮಸನ ಸೇರಿದರೆ ತಮ್ಮ ಜೈಲುಪಾಲು ವಿಧಿಯ ಈ ಆಟಕ್ಕೆ ಲಕ್ಷಾಂತರ ಕುಟುಂಬಗಳು ಇನ್ನೂ ಕತ್ತಲಾಗುತ್ತಾ ಸಾಗಿವೆ ಇಂತಹ ಸಮಯದಲ್ಲಿ ಕರೋನ ಸೋಂಕಿತರು ಇಂದಿನ ಪರಿಸ್ಥಿತಿಯನ್ನು ಅವಲೋಕನ ಮಾಡಿಕೊಂಡು ತಾಳ್ಮೆ ಕಳೆದುಕೊಳ್ಳದೇ ಶಾಂತಿಯಿಂದ ಈ ಘಳಿಗೆಯನ್ನು ಕಳೆಯಬೇಕಾಗಿದೆ, ಅಲ್ಲದೆ ಈ ಮಹಾ ಮಾರಿ ಕರೋನ ವಿರುದ್ದ ತುಂಬಾ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕಾಗಿದೆ.