ಯಾದಗಿರಿ | ಯಾದಗಿರಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳ ಕೋವಿಡ್-19 ತಪಾಸಣೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯಾಲಯದಲ್ಲಿ ಸೋಮವಾರ ಪತ್ರಕರ್ತರ ಗಂಟಲು ದ್ರವ ಮಾದರಿ ಸಂಗ್ರಹ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಒಟ್ಟು 25 ಪತ್ರಕರ್ತರು ಪಾಲ್ಗೊಂಡು ಗಂಟಲು ದ್ರವ ಮಾದರಿಗಳನ್ನು ನೀಡಿದರು. ಆರೋಗ್ಯ ಇಲಾಖೆಯ ಪ್ರಯೋಗಾಲಯ ತಂತ್ರಜ್ಞರಾದ ನಾಗೇಶ್, ಕೇದಾರನಾಥ, ದೇವರಾಜ ಅವರು ಮಾದರಿಗಳನ್ನು ಸಂಗ್ರಹಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್.ಪಾಟೀಲ್, ಡಾ.ರಾಮನಗೌಡ ನಾಗನೂರ, ಮೊಬೈಲ್ ಸ್ವಾಬ್ ಟೀಮ್ ಸಂಯೋಜಕರಾದ ಡಾ.ಪ್ರಮೋದ್ ಅವರು ಉಪಸ್ಥಿತರಿದ್ದರು.
