
ಶೂಲೇಭಾವಿ : ಪುರಾತನ ೭ ನೇ ಶತಮಾನದ ಶಿವ ದೇವಾಲಯಕ್ಕೆ ಗ್ರಾಮದ ಕಿಲ್ಲಾ ಓಣಿಯ ಹಲವು ಮಹಿಳೆಯರು ಸೇರಿಕೊಂಡು ಶಿವಾಯಲಕ್ಕೆ ೧೦Kg ಬೊಗಾಣಿ,೨kg ಹಾಗೂ ೩kg ಬೊಗಾಣಿ,ಒಂದು ಬಾಕೆಟ್,ಒಂದು ಕೈಪಾಳೆ ,ಒಟ್ಟು ೫,೦೦೦,ಸಾವಿರ ರೂಪಾಯಿ ವೆಚ್ಚದಲ್ಲಿ ಎಲ್ಲಾ ಭಕ್ತರು ಹಣ ಹೊಂದಿಸಿ ಈ ಕೊಡುಗೆ ನೀಡಿದ್ದಾರೆ,ಪ್ರತಿ ವಾರ ಶಿವಾಲಯದಲ್ಲಿ ರದ್ರಾಭಿಶೇಖದ ಪೂಜೆ ಮಾಡಿದ ನಂದರ ೩ – ರಿಂದ ೫ kg ಉಪ್ಪಿಟ್ಟು ಹಾಗೂ ೨ ,kg ಸೀರಾ ಉಪಹಾಯ ಮಾಡಲು ಸಣ್ಣ ಪಾತ್ರೆಗಳ ಅವಶ್ಯಕತೆ ಇತ್ತು, ಹಾಗೂ ಪ್ರತಿ ಅಮವಾಸ್ಯೆ ದಿನ ಶಿವಾಲಯದಲ್ಲಿ ಮಹಾ ಅಣ್ಣ ಪ್ರಸಾದ ನಡೆಯುತ್ತದೆ

,ಇದನ್ನು ಅರಿತ ಭಕ್ತರು ಸ್ವತಹ ಅದನ್ನು ಗಮನಿಸಿ ಸೇವಾ ಸಮಿತಿ ಕೇಳದೇ ಇವುಗಳನ್ನು ಕೊಡಿಗೆ ನೀಡಿದ ಕಿಲ್ಲಾ ಓಣಿಯ ಶ್ರೀಮತಿ ಲಚ್ಚವ್ವ ಹ ಕೋಟಿಕಲ್ಲ,ಶ್ರೀಮತಿ ಸಾವಿತ್ರಿ ಉ ಸಜ್ಜನ ಶ್ರೀಮತಿ ನಿರ್ಮಲಾ ಈ ಸಜ್ಜನ,ಶ್ರೀಮತಿ ಕಮಲವ್ವ ಸ,ಹಲಗತ್ತಿ,ಶ್ರೀಮತಿ ಲಕ್ಷೀಬಾಯಿ ವಿ ನರಿ ಶ್ರೀಮತಿ ಪಮ್ಮವ್ವ ಮ ಹೊಸಮನಿ ಶ್ರೀಮತಿ ವಿಜಯಲಕ್ಷ್ಮಿ ಯ ಬಾರಕೇರ,ಶ್ರೀಮತಿ ಮನಂದವ್ವ ಮು ಜೀರಗಿ ಇನ್ನೂ ಹಲವಾರು ಮಹಿಳೆಯರು ಸೇರಿಕೊಂಡು ಈ ಕೊಡುಗೆ ನೀಡಿದರು.

ಈ ಸಂದರ್ಭದಲ್ಲಿ ಶೂಲೇಭಾವಿ ಜೀರ್ನೋದ್ದಾರ ಸೇವಾ ಸಮಿತಿ ಅಧ್ಯಕ್ಷ ದೇವರಾಜ ಕಮತಗಿ ಉಪಾಧ್ಯಕ್ಷ ನಾಗೇಶ ಗಂಜಿಹಾಳ ,ಅರ್ಚಕರಾದ ಮಹಾಂತಯ್ಯ ಹಿರೇಮಠ, ಯಮನಪ್ಪ ಬಾರಕೇರ,ಹಾಗೂ ಸಮಿತಿ ಸದಸ್ಯರು ಸೇರಿದಂತೆ ಹಲವಾರು ಭಕ್ತರು ಉಪಸ್ಥಿತರಿದ್ದರು.