ಮುದ್ದೇಬಿಹಾಳ : ತಾಲೂಕಿನ ಪ್ರತಿಷ್ಠಿತ ಅಭ್ಯುದಯ ಪಿ,ಯು,ಶಿಕ್ಷಣ ಸಂಸ್ಥೆಯ ವಿಧ್ಯಾರ್ಥಿನಿ ಕುಮಾರಿ ರೇಖಾ ,ಅಮರಯ್ಯ ತಿಮ್ಮಾಪೂರಮಠ ಇವರು ಕಳೆದ ಪಿ,ಯು ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕ ಪಡೆದು ಕನಿಷ್ಠ ೮೨ ‘/. ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಸಂಸ್ಥೆಯ ಹಿರಿಮೆ ಹಾಗೂ ಇವಳ ಸಹೋದರಿ

ಕುಮಾರಿ : ಭಾಗ್ಯಲಕ್ಷ್ಮೀ ತಂ/ ಕಲ್ಲಯ್ಯ ಹಿರೇಮಠ ಸಾ!! ಬಿಜ್ಜೂರು ,ತಾಲೂಕಿನ ಆಕ್ಸಫಡ್೯ ಆಂಗ್ಲ ಮಾಧ್ಯಮ ಶಾಲೆ ನಾಗರಬೆಟ್ಟ ಶಿಕ್ಷಣ ಸಂಸ್ಥೆಯಲ್ಲಿ ಕಳೆದ SSLC ಪರೀಕ್ಷೆಯಲ್ಲಿ ಶೇಖಡಾ ೯೧’/. ಫಲಿತಾಂಶ ಮಾಡಿ ಶಾಲೆಗೆ ಕಿರ್ತಿ ತಂದಿದ್ದಾಳೆ ಹೀಗಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ಬೆಂಗಳೂರು ಇವರು ಕೊಡಮಾಡುವ “ನಮ್ಮೂರ ಹೆಮ್ಮೆ , ಅಭಿನಂದಾನ ಪ್ರಮಾಣ ಪತ್ರವನ್ನು ಇಂದು ಇವರಿಬ್ಬರನ್ನು ಗುರಿತಿಸಿ ಇಂತಹ ಪ್ರತಿ ಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶ ದಿಂದ ಮುದ್ದೇಬಿಹಾಳ ಅವರ ಸ್ವ ಗೃಹದಲ್ಲಿ ಒಕ್ಕೂಟದ ರಾಜ್ಯ ಅಧ್ಯಕ್ಷ ಮಂಜುನಾಥ ಇವರ
ಮಾರ್ಗದರ್ಶನದಂತೆ ಜಿಲ್ಲಾ ಯುವ KPPC ಅಧ್ಯಕ್ಷ ಸದ್ದಾಂ ಕುಂಟೋಜಿ, ನಗರ ಪೊಲೀಸ್ ಠಾಣೆ ಪಿ,ಎಸ್,ಐ ಶ್ರೀ ಟಿ,ಜಿ,ನೆಲವಾಸಿ ಹಾಗೂ ಮಹಮ್ಮದ ರಫೀಕ್ ಶಿರೊಳ ತಾಲೂಕ NSUI ಅಧ್ಯಕ್ಷರು, ಮತ್ತು ದಿವ್ಯದೃಷ್ಟಿ ಪತ್ರಿಕೆ ಸಂಪಾದಕರು & ಬಾಗಲ ಕೋಟೆಯ ಜಿಲ್ಲಾ ಅಧ್ಯಕ್ಷ ಶ್ರೀ ದಾನಯ್ಯಸ್ವಾಮಿ ಹಿರೇಮಠಎಲ್ಲಾ ಒಕ್ಕೂಟದ ಸದಸ್ಯರು ಹಾಗೂ ಮುಖಂಡರು ಬಂದು ಪ್ರಮಾಣ ಪತ್ರ ನೀಡಿ ಸನ್ಮಾನಿಸಿ ಜೀವನದಲ್ಲಿ ಹೀಗೆ ಉತ್ತಮ ಫಲಿತಾಂಶ ಪಡೆದು ಉನ್ನತ ಸ್ಥಾನ ಪಡೆಯಲು ಸಮಯ ವ್ಯರ್ಥ ಮಾಡದೇ ಸಾಧನೆ ಮಾಡಲು ನಮ್ಮ ಸಹಕಾರ ಇದೆ ಎಂದು ಜಿಲ್ಲಾ ಅಧ್ಯಕ್ಷ ಸದ್ದಾಂ ಕೂಂಟೋಜಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ, ಸನ್ಮಾನಿಸಿ ಗೌರವಿಸಿದರು.