
ಬಾಗಲಕೋಟೆ: ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ . ನೆಹರು ಯುವ ಕೇಂದ್ರ ಬಾಗಲಕೋಟ ಹಾಗೂ ವಚನ ವೈಭವ ಮಹಿಳಾ ಜಾನಪದ ಸಂಸ್ಕೃತಿಕ ಕಲಾ ಸಂಘದ ಸಹ ಯೋಗದಲ್ಲಿ ಆಚರಿಸಲಾಯಿತು. ನಗರದ ಅರುಣೋದಯ ಪ್ಯಾರಾಮೆಡಿಕಲ್ se no 45ರಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೊಂದಿಗೆ ಸಂಘದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಗೌಡರ್. ಅವರು ಸ್ವಚ್ಛತಾ ಅಭಿಯಾನವನ್ನು ಮಾಡಿದ್ದರು.

ಮತ್ತು ವೇದಿಕೆಯ ಕಾರ್ಯಕ್ರಮವಾಗಿ ಗಾಂಧಿಜಿಯವರ ಪ್ರತಿಮೆಗೆ ಪುಷ್ಪವ ಸಮರ್ಪಣೆ ಮಾಡುವುದರ ಮುಖಾಂತರ ಈ ಒಂದು ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಒಂದು ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಶ್ರೀಮತಿ ಸುಷ್ಮಾ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅರುಣೋದಯ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲರಾದ ಶಿವಕುಮಾರ್ ಕಮದಿ ಹಾಗೂ ಪ್ರಕಾಶ್ ದಡ್ಡಿ ಅವರು ಅತಿಥಿಗಳಾಗಿ ಆಗಮಿಸಿ. ಗಾಂಧಿಜಿ ಅವರ ಜೀವನದ ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ನುಡಿಗಳನ್ನು ಹೇಳಿದರು

ಹಾಗೂ ಡಿ ಎಸ್ ಗೌಡರ್ ಅವರು ಪ್ರಾರ್ಥನೆಯೊಂದಿಗೆ ಸಂಘದ ಅಧ್ಯಕ್ಷೇ ಶ್ರೀಮತಿ ಲಕ್ಷ್ಮಿ ಗೌಡರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಈ ಒಂದು ಕಾರ್ಯಕ್ರಮದ ಸೊಬಗಣ್ಣು ವರ್ಣಿಸುವ ಮುಖಾಂತರ ಹುತಾತ್ಮರ ಜೀವನ ಹಾಗೂ ಮಹಾತ್ಮ ಗಾಂಧೀಜಿಯವರ ದೇಶಕ್ಕೆನೀಡಿದ ಹುತಾತ್ಮರ ಜೀವನದ ಹೋರಾಟ ತ್ಯಾಗ ಬಲಿದಾನದ ವಿಷಯವಾಗಿ ಹಾಗೂ ದೇಶದ ಶ್ರದ್ಧ ಭಕ್ತಿ ಯುವಕ ಯುವತಿಯರಲ್ಲಿ ಇಂದು ರೂಡಿಸಿಕೊಳ್ಳೋದು ಬಹಳ ಮುಖ್ಯವಾಗಿದೆ.

ನಾವೆಲ್ಲರೂ ಒಂದೇ ಎನ್ನುವ ಭಾವ ನಮ್ಮಲ್ಲಿ ಬರಬೇಕು. ನಮ್ಮಲ್ಲಿ ಜಾತಿ ಭೇದ ಭಾವಗಳು ದೂರವಾಗಬೇಕು ಮಾನವ ಜಾತಿ ಒಂದೇ ಎಲ್ಲರನ್ನೂ ಗೌರವಿಸಬೇಕು ಎಲ್ಲರನ್ನೂ ಪ್ರೀತಿಸಬೇಕು ಪ್ರೀತಿ ಒಂದೇ ನಮ್ಮೆಲ್ಲರನ್ನು ಸಾಧನೆಯತ್ತ ತೆಗೆದುಕೊಂಡು ಹೋಗುವ ಸುಲಭವಾದ ಸಾಧನವೆಂದು ವಿದ್ಯಾರ್ಥಿಗಳಿಗೆ ಮಹಾತ್ಮರ ಜೀವನದ ಆದರ್ಶಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ನ ಶಿಕ್ಷಕರು ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು.




