
ಬದಾಮಿ : ಸಾರ್ವಜನಿಕ ರಂಗದಲ್ಲಿ ದಿನದ 24 ಗಂಟೆ ಸೇವೆ ಸಲ್ಲಿಸುವವರು ಪೊಲೀಸ್ ಇಲಾಖೆ ಆದರೆ ಮತ್ತೆ ನಮಗೆ ಕಣ್ಣಿಗೆ ಕಾಣುವುದು ಅದು ಗೃಹರಕ್ಷಕದಳ ಮಾತ್ರ ದಿನಗೂಲಿ ನೌಕರರಾಗಿ ದಿನದ ಎಲ್ಲಾ ಸಮಯದಲ್ಲಿ ಪೋಲಿಸರು ಮಾಡುವ ಶೇಕಡಾ 80ರಷ್ಟು ಕೆಲಸವನ್ನು ಗೃಹರಕ್ಷಕದಳ ಸಿಬ್ಬಂದಿ ಮಾಡುತ್ತಾರೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿದೆ, ಆದರೆ ಇಲ್ಲಿ ಬದಾಮಿ ತಾಲೂಕಿನ ಚೊಳಚಗುಡ್ಡದ ಗೃಹರಕ್ಷಕದಳ ಗ್ರಾಮ ಘಟಕ ಘಟಕಾಧಿಕಾರಿಯಾಗಿ ಶ್ರೀ ಎಮ್,ಎಚ್ ಪಾರೋಕೆ ಅವರು ಕಳೆದ ೨೦೦೧ ರಿಂದ(ಎರಡು ಸಾವಿರದ ಒಂದರಿಂದ) ಇಲಾಖೆಯಲ್ಲಿ ಕರ್ತವ್ಯ ನಿರತರಾಗಿ ಹಲವಾರು ಕಷ್ಟಗಳನ್ನು ನಮ್ಮ ಬಿವಿ ನ್ಯೂಸ್ ನೊಂದಿಗೆ ಹಂಚಿಕೊಂಡಿದ್ದಾರೆ ಪ್ರಸಕ್ತ 2021 ರಿಂದ ಗೃಹರಕ್ಷಕ ದಳದಲ್ಲಿ ಸೇವೆ ಮಾಡುತ್ತಿದ್ದಾರೆ ಆದರೆ ನಮ್ಮ ಅನುಭವದಲ್ಲಿ ಸಾಕಷ್ಟು ಕಷ್ಟಗಳನ್ನು ಸವಾಲುಗಳನ್ನು ಎದುರಿಸಿದ್ದೇವೆ ಸರ್ಕಾರ ನಮ್ಮನ್ನು ಈ ಸಮಾಜದ ಶಾಂತಿ ಕಾಪಾಡಲು ಕಾನೂನು ಸುವ್ಯವಸ್ಥೆ ಕಾಪಾಡಲು ನೇಮಕ ಮಾಡಿದ್ದಾರೆ, ಆದರೆ ಕೆಲವು ವಿವಿಧ ಇಲಾಖೆ ಅಧಿಕಾರಿಗಳು ನಾವು ಕರ್ತವ್ಯದಲ್ಲಿದ್ದಾಗ ಯಾವುದೇ ರೀತಿ ಅನುಕೂಲತೆ ನೀಡುವುದಿಲ್ಲ, ಗ್ರಾಮೀಣ ಭಾಗದಲ್ಲಿ ನಮಗೆ ಇರುವ ಗೌರವ ಪಟ್ಟಣ ಪ್ರದೇಶಗಳಲ್ಲಿ ಇಲ್ಲದಿರುವುದು ದುರಂತ ಒಂದು ಹನಿ ನೀರಿಗೂ ನಾವು ಕಷ್ಟ ಪಡಬೇಕು, ನಮ್ಮ ಈ ಸೇವೆ ವರ್ಷದ 12 ತಿಂಗಳು ಸೇವೆ ಮಾಡುವ ಗೃಹರಕ್ಷಕದಳ ಸಿಬ್ಬಂದಿಗೆ ಯಾವುದೇ ಭದ್ರತೆ ಇಲ್ಲದಿರುವುದು ದುರಂತ ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ನಮ್ಮ ಗೃಹರಕ್ಷಕದಳದ ಎಲ್ಲಾ ಸಿಬ್ಬಂದಿಯನ್ನು ಕಾಯಂಗೊಳಿಸಿ ಸರ್ಕಾರದ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು,

ಆದರೆ ಇಂದು ನಮ್ಮ ಬಗ್ಗೆ ಯಾವ ಸಚಿವರು, ಸಂಸದರು, ಶಾಸಕರು, ಮಾನ್ಯ ಮುಖ್ಯಮಂತ್ರಿಗಳು ಈವರೆಗೂ ಧ್ವನಿ ಎತ್ತುತ್ತಿಲ್ಲ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಗೃಹರಕ್ಷಕದಳ ಸಿಬ್ಬಂದಿ ಬೇಕೇ ಬೇಕು ಆದರೆ ಇಲ್ಲಿ ಕರ್ಫ್ಯೂ,ಸಾರ್ವಜನಿಕ ಗಲಾಟೆ ,ಜಾತ್ರೆ ,ಚುನಾವಣೆ ಹಬ್ಬ ಹರಿದಿನಗಳಲ್ಲಿ ನಮ್ಮನ್ನು ನೇಮಕ ಮಾಡಿ ಶಾಂತಿ ಪಾಲನೆಗೆ ನಮ್ಮನ್ನೆ ಹೊಣೆಗಾರರನ್ನಾಗಿ ಮಾಡುವುದು ರೂಢಿಯಾಗಿದೆ, ಆದರೆ ನಮಗೂ ಕೂಡ ಒಂದು ಸಂಸಾರವಿದೆ ಇದನ್ನು ಸರ್ಕಾರ ಗಮನದಲ್ಲಿಟ್ಟುಕೊಂಡು ನಮಗೆ ಕನಿಷ್ಟ ಮೂಲ ಸೌಲಭ್ಯಗಳನ್ನು ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸುತ್ತೇನೆ ಯಾಕೆಂದರೆ ನಾವು ಕರ್ತವ್ಯದಲ್ಲಿದ್ದಾಗ ಎಲ್ಲೆಂದರಲ್ಲಿ ಮಲಗಿ ಉಪವಾಸ ಬಿದ್ದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಾವು ಮಾಡುತ್ತೇವೆ ಆದರೆ ಸರಕಾರದ ಇಬ್ಬದಿ ನೀತಿಯಿಂದ ರಾಜ್ಯದಲ್ಲಿರುವ ಎಷ್ಟೋ ಗೃಹರಕ್ಷಕದಳ ಸಿಬ್ಬಂದಿಯನ್ನು ಸರ್ಕಾರ ಕಡೆಗಣಿಸಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ನೀಡಬೇಕು ಆದರೆ ಬದಾಮಿ ತಾಲೂಕಿನ ಚೋಳಚಗುಡ್ಡ ಶ್ರೀ ಎಮ್,ಎಚ್ ಪಾರೋಕೆ ಅವರ ಸಮಾಜ ಸೇವೆ ಮೆಚ್ಚುವಂತದ್ದು ಪ್ರಸಕ್ತ 2018ರಲ್ಲಿ ಬದಾಮಿ ತಾಲೂಕಿನಾದ್ಯಂತ ನೆರೆಹಾವಳಿ ಬಂದಾಗ ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನೂರಾರು ರೈತರನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಇದನ್ನು ಮೆಚ್ಚಿ ಜಿಲ್ಲಾ ಎಸ್ಪಿ ಕಮಾಂಡರ್ ಹಲವಾರು ಪ್ರಶೌಂಶನಾ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಿದ್ದಾರೆ .

ಸಾರ್ವಜನಿಕ ರಂಗದಲ್ಲಿ ಬದುಕು ಕಟ್ಟಿಕೊಂಡ ಹೋರಾಟಗಾರ,ಅವರು ಯಾರು ಗೊತ್ತೆ ? ಅವರೇ ನಮ್ಮ ಎಮ್,ಎಚ್ ಪಾರೋಕೆ, ಬದಾಮಿ ತಾಲೂಕಿನ ಚೋಳಚಗುಡ್ಡ ಗ್ರಾಮದವರಾದ ಇವರು ಬದಾಮಿಯಲ್ಲಿ ಉಜ್ವಲ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆಯನ್ನು ಕಟ್ಟಿ ಸಮಾಜ ಸೇವೆ ಮಾಡುತ್ತಿದ್ದಾರೆ ಅಲ್ಲದೆ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಹತ್ತಾರು ಯುವಕರಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಪ್ರತಿವರ್ಷ ಉಚಿತ ಆರೋಗ್ಯ ಶಿಬಿರ ಮಾಡಿ ಹಲವಾರು ವಯೋ ವೃದ್ದರಿಗೆ ಬದುಕು ಕಟ್ಟಿಕೊಟ್ಟವರು. ನೂರಾರು ವಯೋವೃದ್ಧರಿಗೆ ಮಾಶಾಸನ , ಮಾಡಿಸಿ ಅವರಿಗೆ ನೆರಳಾಗಿ ನಿಂತವರು ಇಷ್ಟೇ ಅಲ್ಲ ಬದಾಮಿ ತಾಲೂಕಿನಾದ್ಯಂತ ಸುಮಾರು ಸರ್ಕಾರ ಕೊಡಮಾಡಿದ ಕೂಲಿಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಲ್ಲಿ ಸಕ್ರಿಯ ಪಾತ್ರ ವಹಿಸಿ ಅತಿ ಕಡುಬಡವರನ್ನು ಮೊದಲು ಗುರುತಿಸಿ ಇಲಾಖೆ ಗಮನಕ್ಕೆ ತಂದು ಅವರಿಗೆ ಆಹಾರ ಕಿಟ್ ವಿತರಣೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಇದರ ಮಧ್ಯೆ ಬದಾಮಿಯಲ್ಲಿ LIC ಏಜೆಂಟರಾಗಿ ಬದುಕು ಸಾಗಿಸುತ್ತಾ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಶಾಂತಿ ಪಾಲನೆಗಾಗಿ ಶ್ರಮಿಸುತ್ತಿದ್ದಾರೆ.

ಜಾತ್ಯತೀತವಾಗಿ ಎಲ್ಲಾ ಧರ್ಮದೊಂದಿಗೆ ಬೆಳೆದುಕೊಂಡು ತನು-ಮನ-ಧನ ಸಹಾಯ ಮಾಡುತ್ತಾ ಸಮಾಜದ ಯುವಕರಿಗೆ ಪಾರೋಕೆ ಅವರು ಮಾದರಿಯಾಗಿದ್ದಾರೆ. ಇಂತಹ ಗೃಹರಕ್ಷಕದಳ ಘಟಕಾಧಿಕಾರಿ ಪ್ರತಿ ಗ್ರಾಮದಲ್ಲಿ ಒಬ್ಬರು ಹುಟ್ಟಬೇಕು,ಇಂತಹ ವ್ಯಕ್ತಿಗಳು ಈ ಸಮಾಜಕ್ಕೆ ಒಂದು ಅಮೂಲ್ಯ ರತ್ನ ಇದ್ದಂತೆ,ಅಲ್ಲದೇ ಈ ಸಮಾಜಕ್ಕೆ ದಾರಿದೀಪ ಹಾಗೂ ಭದ್ರ ಕವಚವಿದ್ದಂತೆ, ಪಾರೋಕೆ ಅವರ ಈ ಸಮಾಜ ಸೇವೆ ಎಂದೆಂದಿಗೂ ಹೀಗೆ ಮುಂದುವರಿಯಲಿ ಎಂದು ನಮ್ಮ ಬಿಬಿ ನ್ಯೂಸ್ ಶುಭ ಹಾರೈಸುತ್ತದೆ.
