Breaking News

LIVE: ಕೋಟ್ಯಾಂತರ ಭಾರತೀಯರ ಕನಸು ಅಯೋಧ್ಯೆ ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ ಆರಂಭ, ಉತ್ತರಪ್ರದೇಶದಲ್ಲಿ ಹೆಚ್ಚಿದ ಭದ್ರತೆ

ಅಯೋಧ್ಯೆ: ಕೋಟ್ಯಾಂತರ ಭಾರತೀಯರ ಕನಸಾಗಿರುವ ಅಯೋಧ್ಯೆ ರಾಮ ಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಲಕ್ಷಾಂತರ ರಾಮ ಭಕ್ತರ ಐದು ಶತಮನಾನಗಳ ಕನಸು ನನಸಾಗುವ ಶುಭದನ ಇದೀಗ ಬಂದಿದೆ.

ಬಹು ನಿರೀಕ್ಷಿತ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಬುಧವಾರ ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಪ್ರದಾನಮಂತ್ರಿ ನರೇಂದ್ರ ಮೋದಿಯವರು ಹಸ್ತದಿಂದ ಭೂಮಿಪೂಜೆ ನೆರವೇರಲಿದೆ.

ಇದರೊಂದಿಗೆ ಪ್ರಧಾನಿಯವರು ತಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ರಾಮಮಂದಿರ ನಿರ್ಮಾಣ ವಾಗ್ಧಾನವನ್ನು ಸಕಾರಗೊಳಿಸಲಿದ್ದಾರೆ.

ಮಧ್ಯಾಹ್ನ 12.44.08 ಗಂಟೆಯಿಂದ 12.44.40 ಗಂಟೆಯ 32 ಸೆಕೆಂಡುಗಳ ಶುಭಮುಹೂರ್ತ ನಿಗದಿಯಾಗಿದ್ದು, ಇಷ್ಟು ಅವಧಿಯಲ್ಲಿಯೇ ಮೋದಿಯವರು ಬೆಳ್ಳಿ ಇಟ್ಟಿಗೆ ಇರಿಸಿ ಸಾಂಕೇತಿಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಬೆಳ್ಳಿ ಇಟ್ಟಿಗೆ ಸಾಂಕೇತಿಕವಾದ ಕಾರಣ ಬಳಿಕ, ಅದನ್ನು ಭೂಮಿಪೂಜಾ ಸ್ಥಳದಿಂದ ತೆಗೆದಿರಿಸಲಾಗುತ್ತದೆ.
ಈ ನಡುವೆ ಭೂಮಿಪೂಜೆ ನೆರವೇರಿದ ಬಳಿಕ ಪ್ರಧಾನಿ ಮೋದಿಯವರು ನೆರೆ ಆಹ್ವಾನಿತ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಮೋದಿ ಸೇರಿದಂತೆ ಐವರು ಮಾತ್ರ ಉಪಸ್ಥಿತರಿರಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಒಟ್ಟಾರೆ 175 ಜನರಿಗೆ ಮಾತ್ರವೇ ಆಹ್ವಾನ ನೀಡಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಬೆಳಿಗ್ಗೆ 11.30ರ ಸುಮಾರಿಗೆ ಪ್ರಧಾನಿ ಮೋದಿಯವರು ದೆಹಲಿಯಿಂದ ಅಯೋಧ್ಯೆಗೆ ಆಗಮಿಸಲಿದ್ದು, ಮೊದಲು ಹನುಮಾನ್ ಗಢಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ರಾಮಲಲ್ಲಾ ದೇಗುಲದಲ್ಲಿ ದರ್ಶನ ಪಡೆದು ಮಧ್ಯಾಹ್ನ 12.44ರ ಮಹೂರ್ತದಲ್ಲಿ ಭೂಮಿಪೂಜೆ ನೆರವೇರಿಸಿ. ನಂತರ ಭಾಷಣ ಮಾಡಲಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನೆರವೇರುತ್ತಿರುವ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

About vijay_shankar

Check Also

AICC ಕಾರ್ಯದರ್ಶಿಯಾಗಿ ಡಾ: ಆರತಿ ಕೃಷ್ಣ ಆಯ್ಕೆ

ನವದೆಹಲಿ: ಅನಿವಾಸಿ ಭಾರತೀಯ ನಿಕಟಪೂರ್ವ ಕರ್ನಾಟಕ ಸರ್ಕಾರದ (ಎನ್ಆರ್ಐ ಫೋರಂ) ಉಪಾಧ್ಯಕ್ಷೆಯದ ಡಾಕ್ಟರ್ ಆರತಿಕೃಷ್ಣ ರವರನ್ನು ಅಖಿಲ ಭಾರತ ರಾಷ್ಟ್ರೀಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.