
ರಾಜ್ಯದಲ್ಲಿ ಮಂದಿರ,ಮಸೀದಿಗಳ ಮೇಲೆ ಸಾರ್ವಜನಿಕರಿಗೆ ಅಲ್ಲಿನ ಧ್ವನಿವರ್ಧಕಗಳಿಂದ ಬೇಕಾಬಿಟ್ಟಿ ಸೌಂಡ್ ಹಾಕಿ ಕೇಳುವಿದರಿಂದ ,& ಹಜ್ಜ್ ಮಾಡುವುದರಿಂದ ಅಕ್ಕಪಕ್ಕದ ಜನರಿಗೆ ಜನರಿಗೆ ತೊಂದರೆ ಹಾಗೂ ಕಿರಿ ಕಿರಿ ಉಂಟಾಗುತ್ತಿದ್ದು ಇದರಿಂದ ಸಾರ್ವಜನಿಕ ಹಿತಾಸಕ್ತಿ ದೂರಿನ ಮೇರೆಗೆ ನ್ಯಾಯಾಲಯ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಿ ಈಗ ಬ್ರೇಕ್ ಹಾಕಿದೆ ಕಡ್ಡಾಯವಾಗಿ ಇದೆ ಸಮಯದಲ್ಲಿ ಇಂತಿಷ್ಟು ಡೇಸೆಬಲ್ ಸೌಂಡ್ ಬಳಿಸಿ ಬೆಳಗ್ಗೆ ೬ ರಿಂದ ಹಾಗೂ ರಾತ್ರಿ ೧೦ ರ ವರೆಗೂ ಧ್ವನಿವರ್ಧಕ ಬಳಸಬಹುದು,

ಬೇಕಾಬಿಟ್ಟಿ ಸೌಂಡ್ ಹಾಕಿ ಹಚ್ಚುವಂತಿಲ್ಲ,ಹಾಗೂ ಪ್ರತಿ ಮಸೀದಿ – ದೇವಾಲಯಗಳು, ಕಡ್ಡಾಯವಾಗಿ ಧ್ವನಿವರ್ಧಕ ಅನುಮತಿ ಪಡೆದು ಕಾನೂನು ಸುವ್ಯವಸ್ಥೆ ಪಲಕಾಪಾಡಬೇಕೆಂದು ಠಾಣಾ ಮುಖ್ಯ ಅಧಿಕಾರಿ PSI ಎಮ್ ಜೆ ಕುಲಕರ್ಣಿ ಇಂದು ಠಾಣೆಯಲ್ಲಿ ಶೂಲೇಭಾವಿ, ಮುಗನೂರು,ಬಸನಾಳ,ತಳ್ಳಿಕೇರಿ,ಗೂರ್ಜನಾಳ,ಕುಣಬೆಂಚಿ,ರಕ್ಕಸಗಿ,ಆಯಾ ಗ್ರಾಮದ ದೇವಸ್ಥಾನಗಳ ಮುಖ್ಯಸ್ಥರನ್ನು,ಪ್ರಮುಖರನ್ನು ಇಂದು ವಿಶೇಷ ಸಭೆ ನಡೆಸಿ ನ್ಯಾಯಾಲಯದ ತೀರ್ಪನ್ನು ನಾವೆಲ್ಲರೂ ಗೌರವಿಸಿ ಗ್ರಾಮದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕು OBC ಘಟಕದ ಅಧ್ಯಕ್ಷ ನಾಗೇಶ ಎನ್ ಗಂಜಿಹಾಳ ಮಾತನಾಡಿ ನಾವೆಲ್ಲರೂ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು ಸಾರ್ವಜನಿಕರಿಗೆ ತೊಂದರೆ ಆಗದಂತೆ ಧ್ವನಿವರ್ಧಕ ಬಳಿಸಿ ಕಡ್ಡಾಯವಾಗಿ ಅನುಮತಿ ಪಡೆದು ಗ್ರಾಮದಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸೋಣ ಎಂದರು. ಅದರಂತೆ ಕೃಷ್ಣಾ ರಾಮದುರ್ಗ, ನಾಗೇಶ ಬೇನಾಳ,ಗ್ರಾಂ,ಪ,ಸದಸ್ಯರಾದ ಗ್ಯಾನಪ್ಪ ಗೋನಾಳ ಚನ್ನಪ್ಪ ಭದ್ರಣ್ಣನವರ,ಅನೇಕರು ಈ ಸಭೆಯಲ್ಲಿ ಭಾಗವಹಿಸಿದ್ದರು.