ಬೆಂಗಳೂರ : ಎಂ.ಕೆ.ಆಡಿಯೋ ಬೆಂಗಳೂರ ಅವರು ಯೂಟ್ಯೂಬ್ ಚಾನೆಲ್ ಗಾಗಿ ಉಮೇಶ್.ಕೆ.ಎನ್, ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಚಿತ್ರೀಕರಣ ಸತತ ಒಂದು ವಾರಗಳ ಕಾಲ ಮೈಸೂರ ಸುತ್ತಮುತ್ತ ನಡೆದು ಮುಕ್ತಾಯವಾಯಿತು. ಅತಿ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದ್ದು ನಾನಿಕೃಷ್ಣ, ಶಿವು,ಸುರೇಶ್ ಮನೋಜ್ಞವಾಗಿ ಅಭಿನಯಿಸಿದ್ದು ಯುವ ಮನಸ್ಸನ್ನು ಸೆಳೆಯಲಿದೆ. ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ, ಸಂಗೀತ, ಹಿನ್ನೆಲೆಗಾಯನ ಮಂಜುಕವಿ, ಸಂಕಲನ ನಾನಿಕೃಷ್ಣ, ಎಸ್.ಜೆ.ಸಂಜಯ್, ವಿಎಫ್ ಎಕ್ಸ್ ನವೀನ್ ಮನೋಸಂಕಲ್ಪ, ವಾದ್ಯ ಸಂಯೋಜನೆ ವೈಶಾಕ್ ಶಶಿಧರನ್, ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನವೀನ್ ಕುಮಾರ್, ಬಿ.ಆರ್, ಡಿಓಪಿ-ಎಸ್.ಜೆ.ಸಂಜಯ್, ಅರುಣ ,ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ ,ಡಾ.ವೀರೇಶ್ ಹಂಡಗಿ, ಪ್ರಚಾರಕಲೆ ವಿಶ್ವಪ್ರಕಾಶ ಮಲಗೊಂಡ ಅವರದಿದೆ. ಈ ಹಾಡು ಕನ್ನಡ ಮತ್ತು ತೆಲಗು ಎರಡು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ .ನಮ್ಮ ತಂಡ ಬಹಳಷ್ಟು ಕಷ್ಟಪಟ್ಟು ಈ ಹಾಡಿನ ಚಿತ್ರೀಕರಣ ಮಾಡಿದ್ದು ಎಲ್ಲ ಪ್ರೇಕ್ಷಕ ಆಭಿಮಾನಿಗಳು ನಮಗೆ ಬೆಂಬಲಿಸಬೇಕು. ಫಸ್ಟಲುಕ್ ಪೋಸ್ಟರ್ ಬಿಡುಗಡ ಮಾಡಲಿದ್ದೇವೆ ಎಂದು ನಟ ಉಮೇಶ್ ತಿಳಿಸಿದರು.